ChatGPT ಕಳೆದ ಕೆಲವು ದಿನಗಳಿಂದ ಇಂಟರ್ನೆಟ್​ ಜಗತ್ತಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ . ಆದರೆ ಈಗ ಇದಕ್ಕೆ ಟಕ್ಕರ್ ನೀಡಲು ಗೂಗಲ್ ಸಜ್ಜಾಗಿದೆ.

Ranjitha R K
Feb 07,2023


.ಗೂಗಲ್ ಕಳೆದ ಆರು ವರ್ಷಗಳಿಂದ AI ಮೇಲೆ ಕೆಲಸ ಮಾಡುತ್ತಿದೆ. Google CEO ಸುಂದರ ಪಿಚೈ, ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ, ಬಾರ್ಡ್ ಬಗ್ಗೆ ಘೋಷಿಸಿದ್ದಾರೆ.


ಚಾಟ್ ಜಿಪಿಟಿ ಓಪನ್ ಐ ಅಭಿವೃದ್ದಿ ಪಡಿಸಿದ ಭಾಷಾ ಮಾದರಿಯಾಗಿದೆ. ಇದು ಅನುವಾದ, ಸಾರಾಂಶದಂಥಹ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.


ಬಾರ್ಡ್ ಕೂಡಾ ಸವಾದಾತ್ಮಕ ಎಐ ಆಗಿದೆ. ಬಾರ್ಡ್ ಅನ್ನು ಗೂಗಲ್ ಭಾಷಾ ಮಾದರಿ LaMDAನಿಂದ ನಡೆಸಲಾಗುತ್ತಿದೆ. ಇದು ಕೂಡಾ ಚಾಟ್ ಜಿಪಿಟಿಯಂತೆಯೇ ಕಾರ್ಯ ನಿರ್ವಹಿಸುತ್ತದೆ.


ಚಾಟ್ ಜಿಪಿಟಿ ತರಬೇತಿ ಪಡೆದ ಮಾಹಿತಿಯ ಆಧಾರದ ಮೇಲೆ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಆದರೆ ಬಾರ್ಡ್ ವೆಬ್ ನಿಂದ ಮಾಹಿತಿಯನ್ನು ಸಂಗ್ರಹಿಸಿ ಒದಗಿಸುತ್ತದೆ.


ಚಾಟ್ ಜಿಪಿಟಿ ತಾನೊಂದು ನಿಫ್ಟಿ ಟೂಲ್ ಎನ್ನುವುದನ್ನು ಸಾಬೀತುಪಡಿಸಿದೆ. ಬಾರ್ಡ್ ಆರಂಭದಲ್ಲಿ ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವಾಗ ಸಹಾಯ ಮಾಡುತ್ತದೆ. ವೆಬ್ ನಲ್ಲಿರುವ ಮಾಹಿತಿ ಆಧಾರದ ಮೇಲೆ ಪ್ರಶ್ನೆಗಳಿಗೆ ಉತ್ತರಿಸುತ್ತದೆ.


ಚಾಟ್ ಜಿಪಿಟಿ ವ್ಯಾಪಕವಾಗಿ ಲಭ್ಯವಿದೆ. ವಿವಿಧ ಪ್ಲಾಟ್ ಫಾರಂ ಗಳಲ್ಲಿ ಅಪ್ಲಿಕೇಶನ್ ಗಳಲ್ಲಿ ಇದನ್ನೂ ಸಂಯೋಜಿಸಬಹುದು. ಗೂಗಲ್ ಬಾರ್ಡ್ ಅನ್ನು ಆರಂಭದಲ್ಲಿ ಸೀಮಿತ ಸಂಖ್ಯೆಯ ಪರೀಕ್ಷಕರೊಂದಿಗೆ ಬಿಡುಗಡೆ ಮಾಡುತ್ತಿದೆ.


ಚಾಟ್ ಜಿಪಿಟಿಯನ್ನು ಹೆಚ್ಚಿನ ಬಳಕೆದಾರರು ಬಳಸಿದ್ದಾರೆ, ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ


ಚಾಟ್ ಜಿಪಿಟಿ ನೀಡುವ ಉತ್ತರ ತರಬೇತಿ ಪಡೆದ ಮಾಹಿತಿಯನ್ನು ಆಧರಿಸಿವೆ, ಇದು ನಿಖರ ಎಂದೇ ಹೇಳು ಸಾಧ್ಯವಿಲ್ಲ. ಆದರೆ ಬಾರ್ಡ್ ವೆಬ್ ನಿಂದ ಮಾಹಿತಿ ಸಂಗ್ರಹಿಸಿ ನೀಡುವುದರಿಂದ ಇದರ ಸಾಮರ್ಥ್ಯ ಹೆಚ್ಚು ನಿಖರ ಎಂದು ಹೇಳಬಹುದು.

VIEW ALL

Read Next Story