ಶೀಘ್ರವೇ ಇಂಟರ್ನೆಟ್ ಇಲ್ಲದೆ ಸ್ಮಾರ್ಟ್ಫೋನ್ಗಳಲ್ಲಿ ಟಿವಿ ಚಾನೆಲ್ಗಳನ್ನು ವೀಕ್ಷಿಸುವ ತಂತ್ರಜ್ಞಾನ ಬರಲಿದೆ.
D2M(Direct 2 Mobile) ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ಇದು ಸಾಧ್ಯವಾದರೆ ಮೊಬೈಲ್ ಬಳಕೆದಾರರು ಇಂಟರ್ನೆಟ್ ಇಲ್ಲದೆ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಟಿವಿ ಚಾನೆಲ್ಗಳನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.
ದೇಶದಲ್ಲಿ 80 ಕೋಟಿಗಿಂತಲೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಶೈಕ್ಷಣಿಕ ನೆರವು ಮತ್ತು ತುರ್ತು ಎಚ್ಚರಿಕೆ ನೀಡಲು D2M ತಂತ್ರಜ್ಞಾನ ಬಳಸಿಕೊಳ್ಳುವ ಗುರಿ.
ಆದರೆ ಸರ್ಕಾರದ ಈ ಪ್ರಸ್ತಾವನೆಗೆ ಟೆಲಿಕಾಂ ಆಪರೇಟರ್ಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ.
D2Mನಿಂದ ಟೆಲಿಕಾಂ ಕಂಪನಿಗಳ ಡೇಟಾ ಆದಾಯದಲ್ಲಿ ಕುಸಿತ ಕಾಣಲಿದೆ.
D2M ಕುರಿತು ಚರ್ಚಿಸಲು ಮುಂದಿನ ವಾರ ಕೇಂದ್ರ ಸರ್ಕಾರವು ಮಹತ್ವದ ಸಭೆ ನಡೆಸಲಿದೆ.
ಟೆಲಿಕಾಂ ಇಲಾಖೆ, ಎಂಐಬಿ, ಐಐಟಿ ಕಾನ್ಪುರ, ಟೆಲಿಕಾಂ ಮತ್ತು ಬ್ರಾಡ್ಕಾಸ್ವ್ ಉದ್ಯಮ ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.