Direct 2 Mobile

ಶೀಘ್ರವೇ ಇಂಟರ್ನೆಟ್ ಇಲ್ಲದೆ ಸ್ಮಾರ್ಟ್‌ಫೋನ್‌ಗಳಲ್ಲಿ ಟಿವಿ ಚಾನೆಲ್ಗಳನ್ನು ವೀಕ್ಷಿಸುವ ತಂತ್ರಜ್ಞಾನ ಬರಲಿದೆ.

Puttaraj K Alur
Jan 19,2024

ಕೇಂದ್ರ ಸರ್ಕಾರ ಪರಿಶೀಲನೆ

D2M(Direct 2 Mobile) ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಇಂಟರ್ನೆಟ್ ಇಲ್ಲದೆ TV ವೀಕ್ಷಣೆ

ಇದು ಸಾಧ್ಯವಾದರೆ ಮೊಬೈಲ್ ಬಳಕೆದಾರರು ಇಂಟರ್ನೆಟ್ ಇಲ್ಲದೆ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಟಿವಿ ಚಾನೆಲ್ಗಳನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

D2M ತಂತ್ರಜ್ಞಾನ

ದೇಶದಲ್ಲಿ 80 ಕೋಟಿಗಿಂತಲೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಶೈಕ್ಷಣಿಕ ನೆರವು ಮತ್ತು ತುರ್ತು ಎಚ್ಚರಿಕೆ ನೀಡಲು D2M ತಂತ್ರಜ್ಞಾನ ಬಳಸಿಕೊಳ್ಳುವ ಗುರಿ.

ವಿರೋಧ ವ್ಯಕ್ತವಾಗುವ ಸಾಧ್ಯತೆ

ಆದರೆ ಸರ್ಕಾರದ ಈ ಪ್ರಸ್ತಾವನೆಗೆ ಟೆಲಿಕಾಂ ಆಪರೇಟರ್ಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ.

ಡೇಟಾ ಆದಾಯದಲ್ಲಿ ಕುಸಿತ

D2Mನಿಂದ ಟೆಲಿಕಾಂ ಕಂಪನಿಗಳ ಡೇಟಾ ಆದಾಯದಲ್ಲಿ ಕುಸಿತ ಕಾಣಲಿದೆ.

ಕೇಂದ್ರ ಸರ್ಕಾರದ ಸಭೆ

D2M ಕುರಿತು ಚರ್ಚಿಸಲು ಮುಂದಿನ ವಾರ ಕೇಂದ್ರ ಸರ್ಕಾರವು ಮಹತ್ವದ ಸಭೆ ನಡೆಸಲಿದೆ.

ಮಹತ್ವದ ಸಭೆಯಲ್ಲಿ ನಿರ್ಧಾರ

ಟೆಲಿಕಾಂ ಇಲಾಖೆ, ಎಂಐಬಿ, ಐಐಟಿ ಕಾನ್ಪುರ, ಟೆಲಿಕಾಂ ಮತ್ತು ಬ್ರಾಡ್ಕಾಸ್ವ್ ಉದ್ಯಮ ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

VIEW ALL

Read Next Story