ಕುಕ್ಕರ್‌ ಕೂಗುತ್ತಿದ್ದಂತೆ ನೀರು ಲೀಕ್‌ ಆಗುತ್ತಿದೆಯೇ? ಹಾಗಾದ್ರೆ ಹೀಗೆ ಮಾಡಿ.. ಆ ಸಮಸ್ಯೆ ಯಾವತ್ತೂ ಬರಲ್ಲ

Bhavishya Shetty
Oct 05,2024

ಕುಕ್ಕರ್‌

ಗಡಿಬಿಡಿ ಜಮಾನದಲ್ಲಿ ಬೇಗ ಬೇಗ ಕೆಲಸ ಮಾಡಬೇಕೆನ್ನುವುದು ಅನೇಕರಲ್ಲಿರುತ್ತದೆ. ಇಂತವರ ಸಮಸ್ಯೆಗೆ ಪರಿಹಾರ ನೀಡಲೆಂದೇ ಟೆಕ್ನಾಲಜಿ ಮತ್ತಷ್ಟು ಮುಂದುವರೆದು ಸುಲಭದಲ್ಲಿ ಕೆಲಸ ಮಾಡುವಂತ ತಂತ್ರಜ್ಞಾನಗಳನ್ನು ತಯಾರು ಮಾಡಿವೆ. ಅದರಲ್ಲಿ ಒಂದು ಕುಕ್ಕರ್‌.

ಕುಕ್ಕರ್‌ ಸಹಾಯ

ಬೇಳೆ, ಅನ್ನ ಸೇರಿದಂತೆ ತರಕಾರಿಗಳನ್ನು ಸಹ ಬೇಗನೇ ಕುಕ್ಕರ್‌ ಸಹಾಯದಿಂದ ಬೇಯಿಸಬಹುದು. ಆದರೆ ಕೆಲವೊಮ್ಮೆ ಕುಕ್ಕರ್‌ ಸೀಟಿಯಿಂದ ನೀರು ಆಚೆ ಬರುತ್ತದೆ. ಇದು ಕಿಚನ್‌ನ್ನು ಗಲೀಜು ಮಾಡುವುದಲ್ಲದೆ, ಕಿರಿಕಿರಿಯನ್ನುಂಟು ಮಾಡುತ್ತದೆ.

ಪರಿಹಾರ

ಹೀಗಿರುವಾಗ ಇಂತಹ ಸಮಸ್ಯೆಗಳಿಂದ ಪರಿಹಾರ ನೀಡಲು ಕೆಲವೊಂದು ಟಿಪ್ಸ್‌ನ್ನು ನಾವಿಂದು ಇಲ್ಲಿ ತಿಳಿಸಿಕೊಡಲಿದ್ದೇವೆ. ಇವುಗಳನ್ನು ಅನುಸರಿಸಿದರೆ ನಿಮ್ಮ ಮನೆಯ ಕುಕ್ಕರ್‌ ಸಮಸ್ಯೆಗೆ ಪರಿಹಾರ ಸಿಗಬಹುದು.

ರಬ್ಬರ್ ಪರಿಶೀಲಿಸಿ

ರಬ್ಬರ್ ಪ್ರೆಶರ್‌ ಕುಕ್ಕರ್‌ನ ಪ್ರಮುಖ ಭಾಗವಾಗಿದ್ದು, ಗಟ್ಟಿಯಾಗಿ ಮುಚ್ಚಲು ಸಹಾಯ ಮಾಡುತ್ತದೆ. ಒಂದು ವೇಳೆ ಈ ರಬ್ಬರ್‌ ಡ್ಯಾಮೇಜ್‌ ಆಗಿದ್ದರೆ ಕುಕ್ಕರ್‌ನಿಂದ ನೀರು ಸೋರಿಕೆಯಾಗುತ್ತದೆ. ಹೀಗಿದ್ದರೆ ತಕ್ಷಣವೇ ಬದಲಾಯಿಸಿ.

ಮುಚ್ಚಳ ಪರಿಶೀಲಿಸಿ

ಪ್ರೆಶರ್‌ ಕುಕ್ಕರ್‌ನ ಮುಚ್ಚಳವು ಬಿಗಿಯಾಗಿ ಮತ್ತು ಸುರಕ್ಷಿತವಾಗಿ ಹೊಂದಿಕೊಳ್ಳಬೇಕು. ಅದು ಸಡಿಲವಾಗಿದ್ದರೆ ಕುಕ್ಕರ್‌ನಿಂದ ನೀರು ಸೋರಿಕೆಯಾಗಬಹುದು. ಮುಚ್ಚಳವನ್ನು ಸರಿಯಾಗಿ ಅಳವಡಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ಎಣ್ಣೆ ಬಳಕೆ

ಕುಕ್ಕರ್‌ನಿಂದ ನೀರು ಬರದಂತೆ ತಡೆಯಲು ಎಣ್ಣೆಯನ್ನು ಬಳಸಬಹುದು. ಕುಕ್ಕರ್‌ ಮುಚ್ಚಳದ ಸುತ್ತಲೂ ಎಣ್ಣೆಯನ್ನು ಸವರುವುದರಿಂದ ನೀರು ಆಚೆ ಬರುವುದಿಲ್ಲ.

ಮಧ್ಯಮ ಉರಿ

ಕುಕ್ಕರ್‌ʼನಲ್ಲಿ ಹೆಚ್ಚು ನೀರು ಹಾಕುವುದರಿಂದ ಅಥವಾ ಹೆಚ್ಚಿನ ಉರಿಯಲ್ಲಿ ಇಡುವುದರಿಂದ ನೀರು ಹೊರಬರಲು ಪ್ರಾರಂಭಿಸುತ್ತದೆ. ಆದ್ದರಿಂದ, ಕುಕ್ಕರ್‌ನಲ್ಲಿ ಆಹಾರವನ್ನು ಬೇಯಿಸುವಾಗ, ನೀರಿನ ಪ್ರಮಾಣವನ್ನು ವಿಶೇಷ ಕಾಳಜಿ ವಹಿಸಿ ಹಾಕಿ. ಹಾಗೆಯೇ ಮಧ್ಯಮ ಉರಿಯಲ್ಲಿ ಗ್ಯಾಸ್‌ನ್ನು ಹೊತ್ತಿಸಿ. ಹೀಗೆ ಮಾಡಿದರೆ ಕುಕ್ಕರ್‌ನಿಂದ ನೀರು ಹೊರಬರುವುದಿಲ್ಲ.

ಸೂಚನೆ

ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ದೃಢೀಕರಿಸುವುದಿಲ್ಲ. ಅವುಗಳನ್ನು ಕಾರ್ಯಗತಗೊಳಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.

VIEW ALL

Read Next Story