ಬಳಕೆದಾರರು ಸ್ಪ್ಯಾಮ್ ಮೇಲ್‌ಗಳಲ್ಲಿ ಲಗತ್ತುಗಳನ್ನು ತೆರೆದಾಗ ಮಾಲ್‌ವೇರ್ ದಾಳಿಗಳು ಸಾಮಾನ್ಯವಾಗಿ ನಡೆಯುತ್ತವೆ. ಇದರಿಂದಾಗಿ ಸ್ಪ್ಯಾಮ್ ಮೇಲ್‌ಗಳನ್ನು ತೆರೆಯುವುದನ್ನು ತಪ್ಪಿಸಿ.
ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಮೇಲೆ ನಿರಂತರ ನಿಗಾ ಇರಿಸಿ OTP ಮತ್ತು ವೈಯಕ್ತಿಕ ಪಿನ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳ ಬೇಡಿ.
ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಟ್‌ನೆಟ್ ಸೆಕ್ಯೂರ್ಡ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಸೈಬರ್ ಅಪರಾಧಿಗಳು ಅವಧಿ ಮೀರಿದ ಸಿಸ್ಟಮ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು.
ಇಂಟರ್ನೆಟ್ ಅನ್ನು ಸುರಕ್ಷಿತಗೊಳಿಸಲು VPN ಬಳಸಿ. ನಿಮ್ಮ ಸಾಧನವನ್ನು ತಲುಪುವ ಮೊದಲು ಟ್ರಾಫಿಕ್ ಅನ್ನು ಎನ್‌ಕ್ರಿಪ್ಟ್ ಮಾಡಲು, ಮಾಲ್‌ವೇರ್ ದಾಳಿಗಳನ್ನು ತಡೆಯಲು ಮತ್ತು IP ವಿಳಾಸವನ್ನು ಮರೆಮಾಚಲು VPN ಸಹಾಯ ಮಾಡುತ್ತದೆ.
ವೈರಸ್‌ಗಳು ಮತ್ತು ಸಾಧನದ ನಡುವೆ ಭದ್ರತಾ ಗೋಡೆಯಂತೆ ಕಾರ್ಯನಿರ್ವಹಿಸುವ ಆಂಟಿವೈರಸ್ ಸಾಫ್ಟ್‌ವೇರ್ಗಳು ಸಹಾಯಕವಾಗಿದೆ.