)
mobile charging: ಮೊಬೈಲ್ ಬಳಸುವ ಬಹಳಷ್ಟು ಜನರು ತಮ್ಮ ಬ್ಯೂಸಿ ಲೈಫ್ನಿಂದ ಹಗಲಿನಲ್ಲಿ ಫೋನ್ ಚಾರ್ಜ್ ಮಾಡಲು ಸಮಯವಿರುವುದಿಲ್ಲ. ಆದ್ದರಿಂದ ಅನೇಕ ಜನರು ತಮ್ಮ ಫೋನ್ಗಳನ್ನು ರಾತ್ರಿಯಿಡೀ ಚಾರ್ಜ್ ಮಾಡಲು ಬಿಡುತ್ತಾರೆ. ಇದರಿಂದ ಅಪಾಯಕಾರಿ ಸಮಸ್ಯೆಗಳು ಉಂಟಾಗುತ್ತದೆ ಎಂಬುವುದು ನಿಮಗೆ ಗೊತ್ತಾ? ಇದನ್ನು ಓದಿದ ತಕ್ಷಣ ಎಲ್ಲರ ತಲೆಯಲ್ಲಿ ಮೂಡುವ ಪ್ರಶ್ನೆ ಮೊಬೈಲ್ ಬ್ಲಾಸ್ಟ್ ಆಗುವುದರ ಬಗ್ಗೆ. ಆದರೆ ಇದಷ್ಟೇ ಸಮಸ್ಯೆಯಲ್ಲ ಇನ್ನು ಹೆಚ್ಚಿನ ವಿವರವನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು.
ದಿನಪೂರ್ತಿ ಪೋನ್ ಬಳಕೆ ಮಾಡಿ ರಾತ್ರಿಯಲ್ಲಿ ಫೋನ್ ಚಾರ್ಜ್ ಇಡುವ ಮುನ್ನ ಈ ಪ್ರಮುಖ ವಿಷಯದ ಬಗ್ಗೆ ತಿಳಿದುಕೊಳ್ಳಿ. ಬಹುತೇಕ ಜನರಿಗೆ ಈ ವಿಷಯದ ಬಗ್ಗೆ ಗೊತ್ತಿರುವುದಿಲ್ಲ.. ಮನುಷ್ಯ ಹೇಗೆ ಹೊಟ್ಟೆ ತುಂಬಿದ ನಂತರ ಹೇಗೆ ಮತ್ತೊಮ್ಮೆ ಊಟ ಮಾಡಲು ಸಾದ್ಯವಿಲ್ಲವೋ ಅದೇ ರೀತಿ ನಿಮ್ಮ ಮೊಬೈಲ್ ಕೂಡ . ನೀವು ಬಳಸುವ ಫೋನ್ ಕೂಡ 100 ಪ್ರತಿಶತ ಆದ ನಂತರ ಚಾರ್ಜ್ ಆಗುವುದನ್ನು ನಿಲ್ಲಿಸುತ್ತದೆ. ಹಳೆಯ ಫೀಚರ್ ಮೊಬೈಲ್ಗಳಲ್ಲಿ ಈ ಹೊಸ ಅವಿಷ್ಕಾರ ಇರಲಿಲ್ಲ ಆದರೆ ಈಗ ಮಾರುಕಟ್ಟೆಗೆ ಬಂದಿರುವ ಹೊಸ ಬಗೆಯ ಮೊಬೈಲ್ಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳಲ್ಲಿನ ಬ್ಯಾಟರಿ 100% ಚಾರ್ಜ್ ಆದ ನಂತರ, ವಿದ್ಯುತ್ ತೆಗೆದುಕೊಳ್ಳುವುದನ್ನು ನಿಲ್ಲಿಸುವ ಚಾರ್ಜಿಂಗ್ ಸರ್ಕ್ಯೂಟ್ ಅನ್ನು ಹೊಂದಿವೆ. ಈಗ ಹೆಚ್ಚಿನ ಸ್ಮಾರ್ಟ್ಫೋನ್ಗಳು ಸ್ನ್ಯಾಪ್ಡ್ರಾಗನ್ ಪ್ರೊಸೆಸರ್ ಅನ್ನು ಹೊಂದಿವೆ ಇದರಿಂದ ಮೊಬೈಲ್ ಓವರ್ ಚಾರ್ಚ್ ಮಾಡಿದಾಗ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇನ್ನು ಚಾರ್ಜ್ ಮಾಡುವಾಗ ಮೊಬೈಲ್ ಫೋನ್ ಬಿಸಿಯಾದರೆ ಅನೇಕ ಜನರು ಭಯಪಡುತ್ತಾರೆ.
ಇದಕ್ಕೆ ಕಾರಣ ಲಿಥಿಯಂ ಅಯಾನ್ ಬ್ಯಾಟರಿಗಳು ಚಾರ್ಜಿಂಗ್ ಸಮಯದಲ್ಲಿ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತವೆ ಮತ್ತು ಬ್ಯಾಟರಿಯ ಧನಾತ್ಮಕ (+) ಅಯಾನುಗಳು ಋಣಾತ್ಮಕ (-) ಅಯಾನುಗಳ ಕಡೆಗೆ ಹರಿಯುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಪ್ರಕ್ರಿಯೆಯು ಬ್ಯಾಟರಿಯನ್ನು ಬಿಸಿ ಮಾಡುತ್ತದೆ ಇದು ಮುಂದುವರೆದರೆ ಮೊಬೈಲ್ ಬ್ಯಾಟರಿ ಹಾಳಾಗಬಹುದು ಅಥವಾ ಇನ್ನಿತರ ಅಪಾಯಕಾರಿ ಅವಘಡಗಳು ಸಂಭವಿಸಬಹುದು. ಆದ್ದರಿಂದ ನಿಮ್ಮ ಮೊಬೈಲನ್ನು ರಾತ್ರಿಯಿಡೀ ಚಾರ್ಜ್ ಮಾಡದೇ ಇರುವುದು ಒಳ್ಳೆಯದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.