ದೊಡ್ಡ ಡಿಸ್ಪ್ಲೇ & ಶಕ್ತಿಯುತ ಟ್ರಿಪಲ್ ಕ್ಯಾಮೆರಾ ಸೆಟಪ್‌ನ Xiaomi 16 ವೈಶಿಷ್ಟ್ಯಗಳೇನು?

Xiaomi 16 12GB RAM ಮತ್ತು 512GB ಸ್ಟೋರೇಜ್‌ಅನ್ನ ಹೊಂದಬಹುದು. ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್‌ಫೋನ್‌ಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾ-ಕೋರ್ ಪ್ರೊಸೆಸರ್ ನೀಡಬಹುದು ಎಂದು ಹೇಳಲಾಗಿದೆ.

Written by - Puttaraj K Alur | Last Updated : May 1, 2025, 10:18 PM IST
  • Xiaomi 16 12GB RAM ಮತ್ತು 512GB ಸ್ಟೋರೇಜ್‌ನೊಂದಿಗೆ ಬರುತ್ತದೆ
  • ಇದು 50MP ಪ್ರಾಥಮಿಕ ಸೆನ್ಸಾರ್‌ನೊಂದಿಗೆ ಶಕ್ತಿಶಾಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ
  • ಈ ಸ್ಮಾರ್ಟ್‌ಫೋನ್‌ಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾ-ಕೋರ್ ಪ್ರೊಸೆಸರ್ ನೀಡಬಹುದು
ದೊಡ್ಡ ಡಿಸ್ಪ್ಲೇ & ಶಕ್ತಿಯುತ ಟ್ರಿಪಲ್ ಕ್ಯಾಮೆರಾ ಸೆಟಪ್‌ನ Xiaomi 16 ವೈಶಿಷ್ಟ್ಯಗಳೇನು?

Xiaomi 16: 2025ನೇ ವರ್ಷ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಹಳ ವಿಶೇಷವಾಗಲಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಅನೇಕ ಉತ್ತಮ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದ್ದು, ಮುಂಬರುವ ತಿಂಗಳುಗಳಲ್ಲಿಯೂ ಸಹ ಅನೇಕ ಉತ್ತಮ ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಶಿಯೋಮಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದೆ. ಮಧ್ಯಮ ಶ್ರೇಣಿಯ ಬಜೆಟ್ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಪ್ರಮುಖ ವಿಭಾಗದವರೆಗೆ ಶಿಯೋಮಿ ಫೋನ್‌ಗಳು ವ್ಯಾಪಕವಾಗಿ ಇಷ್ಟವಾಗುತ್ತಿವೆ.

Add Zee News as a Preferred Source

ನೀವು ಶಿಯೋಮಿ ಅಭಿಮಾನಿಯಾಗಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ. ಶಿಯೋಮಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಬಹುದು. Xiaomi ಕಳೆದ ವರ್ಷ Xiaomi 15 ಅನ್ನು ಬಿಡುಗಡೆ ಮಾಡಿತು. ಆದರೆ ಈಗ ಕಂಪನಿಯು ತನ್ನ ನವೀಕರಿಸಿದ ಆವೃತ್ತಿಯ Xiaomi 16 ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. Xiaomi 16 ಬಗ್ಗೆ ಸೋರಿಕೆ ಮಾಹಿತಿ ಬರಲು ಪ್ರಾರಂಭಿಸಿವೆ. ಸೋರಿಕೆಯಾದ ವರದಿಗಳನ್ನು ನಂಬುವುದಾದರೆ, ಕಂಪನಿಯು ಈ ವರ್ಷದ ಅಂತ್ಯದ ಮೊದಲು ಭಾರತೀಯ ಮಾರುಕಟ್ಟೆಯಲ್ಲಿ ಇದನ್ನು ಬಿಡುಗಡೆ ಮಾಡಬಹುದು. 

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಶೇ 12.6% ಏರಿಕೆಯೊಂದಿಗೆ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ ಜಿಎಸ್ಟಿ ಸಂಗ್ರಹ.!

ವರದಿಯ ಪ್ರಕಾರ, ಕಂಪನಿಯು ಶಿಯೋಮಿ 16 ಅನ್ನು ಆಕರ್ಷಕ ವಿನ್ಯಾಸ ಮತ್ತು ಆಕರ್ಷಕ ಫ್ಲಾಟ್ ಡಿಸ್ಪ್ಲೇಯೊಂದಿಗೆ ಪರಿಚಯಿಸಬಹುದು ಎಂದು ಹೇಳಲಾಗಿದೆ. ಕಂಪನಿಯು Xiaomi 16ನಲ್ಲಿ OLED ಪ್ಯಾನೆಲ್‌ನೊಂದಿಗೆ ಡಿಸ್ಪ್ಲೇಯನ್ನು ಒದಗಿಸಬಹುದು ಮತ್ತು ಇದು 6.3-ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಸಹ ಹೊಂದಿರಬಹುದು. ಈ ಡಿಸ್ಪ್ಲೇ ತುಂಬಾ ತೆಳುವಾದ ಬೆಜೆಲ್‌ಗಳನ್ನು ಹೊಂದಿದ್ದು, ಇದು ವಿಡಿಯೋ ಸ್ಟ್ರೀಮಿಂಗ್ ಸಮಯದಲ್ಲಿ ಉತ್ತಮ ಅನುಭವ ನೀಡುತ್ತದೆ. ಮುಂಬರುವ ಸ್ಮಾರ್ಟ್‌ಫೋನ್ ಹೈಪರ್‌ OSನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಆಂಡ್ರಾಯ್ಡ್ 15ನಲ್ಲಿ ಕಾರ್ಯನಿರ್ವಹಿಸುತ್ತದೆ.

ನೀವು ಛಾಯಾಗ್ರಹಣ ಮಾಡಿದರೂ ಸಹ, ಈ ಸ್ಮಾರ್ಟ್‌ಫೋನ್ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. Xiaomi 16 50MP ಪ್ರಾಥಮಿಕ ಸೆನ್ಸಾರ್‌ನೊಂದಿಗೆ ಶಕ್ತಿಶಾಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಬಹುದು. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ ವೈ-ಫೈ, ಜಿಪಿಎಸ್, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಮತ್ತು ವೇಗದ ಚಾರ್ಜಿಂಗ್‌ಗೆ ಬೆಂಬಲ ಲಭ್ಯವಿದೆ. ಪ್ರಸ್ತುತ Xiaomi 16 ಬಿಡುಗಡೆಯ ಕುರಿತು ಕಂಪನಿಯು ಯಾವುದೇ ಸೂಚನೆಯನ್ನು ನೀಡಿಲ್ಲ. ಕಂಪನಿಯು ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಬಹುದು. ಕಂಪನಿಯು ಇದನ್ನು ಪ್ರೀಮಿಯಂ ವಿಭಾಗದಲ್ಲಿ ಪರಿಚಯಿಸಬಹುದು, ಇದರ ಬೆಲೆ ಸುಮಾರು 64,999 ರೂ.ಗಳಾಗಿರಬಹುದು.

ಇದನ್ನೂ ಓದಿ: ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ AC ಬೆಲೆ ಶೇ.59ರಷ್ಟು ಇಳಿಕೆ; 20 ಸಾವಿರಕ್ಕಿಂತ ಕಡಿಮೆ ಬೆಲೆಗೆ AC ಖರೀದಿಸಿ!!

Xiaomi 16 12GB RAM ಮತ್ತು 512GB ಸ್ಟೋರೇಜ್‌ಅನ್ನ ಹೊಂದಬಹುದು. ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್‌ಫೋನ್‌ಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾ-ಕೋರ್ ಪ್ರೊಸೆಸರ್ ನೀಡಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಕಂಪನಿಯು Xiaomi 15ನಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಬಹುದು. ಇದರಲ್ಲಿ 5240mAhನ ದೊಡ್ಡ ಬ್ಯಾಟರಿಯನ್ನು ಒದಗಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News