16GB RAM, 6100mAh ಬ್ಯಾಟರಿ ಹೊಂದಿರುವ Xiaomi ಸ್ಮಾರ್ಟ್‌ಫೋನ್‌ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

Xiaomi ಇತ್ತೀಚೆಗೆ ತನ್ನ ಮೊದಲ Xring 01 ಪ್ರೊಸೆಸರ್ ಅನ್ನು ಪರಿಚಯಿಸಿತು. ಈ ಪ್ರೊಸೆಸರ್‌ನೊಂದಿಗೆ ಕಂಪನಿಯು ತನ್ನ ಮೊದಲ ಸ್ಮಾರ್ಟ್‌ಫೋನ್ Xiaomi 15s Pro ಅನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಈ ಚೀನೀ ಬ್ರ್ಯಾಂಡ್ ತನ್ನ ಪ್ರಮುಖ ಟ್ಯಾಬ್ಲೆಟ್ ಶಿಯೋಮಿ ಪ್ಯಾಡ್ 7 ಅಲ್ಟ್ರಾವನ್ನು ಅದೇ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಶಿಯೋಮಿಯ ಈ ಪ್ರಮುಖ ಸ್ಮಾರ್ಟ್‌ಫೋನ್ 16GB RAM ಮತ್ತು 6100mAh ಬ್ಯಾಟರಿಯಂತಹ ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Written by - Puttaraj K Alur | Last Updated : May 28, 2025, 04:07 PM IST
  • Xiaomi 15s Pro ಸ್ಮಾರ್ಟ್‌ಫೋನ್‌ 16GB RAM ಮತ್ತು 6100mAh ಬ್ಯಾಟರಿ ಹೊಂದಿದೆ
  • ಈ ಸ್ಮಾರ್ಟ್‌ಫೋನ್ 6.73-ಇಂಚಿನ 2K M18-ಬಿಟ್ OLED LTPO ಡಿಸ್ಪ್ಲೇ ಹೊಂದಿದೆ
  • ಇದರಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದ್ದು, 50MP ಮುಖ್ಯ OIS ಕ್ಯಾಮೆರಾ ಹೊಂದಿದೆ
16GB RAM, 6100mAh ಬ್ಯಾಟರಿ ಹೊಂದಿರುವ Xiaomi ಸ್ಮಾರ್ಟ್‌ಫೋನ್‌ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

Xiaomi 15s Pro Smartphone: Xiaomi ಇತ್ತೀಚೆಗೆ ತನ್ನ ಮೊದಲ Xring 01 ಪ್ರೊಸೆಸರ್ ಅನ್ನು ಪರಿಚಯಿಸಿತು. ಈ ಪ್ರೊಸೆಸರ್‌ನೊಂದಿಗೆ ಕಂಪನಿಯು ತನ್ನ ಮೊದಲ ಸ್ಮಾರ್ಟ್‌ಫೋನ್ Xiaomi 15s Pro ಅನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಈ ಚೀನೀ ಬ್ರ್ಯಾಂಡ್ ತನ್ನ ಪ್ರಮುಖ ಟ್ಯಾಬ್ಲೆಟ್ ಶಿಯೋಮಿ ಪ್ಯಾಡ್ 7 ಅಲ್ಟ್ರಾವನ್ನು ಅದೇ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಶಿಯೋಮಿಯ ಈ ಪ್ರಮುಖ ಸ್ಮಾರ್ಟ್‌ಫೋನ್ 16GB RAM ಮತ್ತು 6100mAh ಬ್ಯಾಟರಿಯಂತಹ ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Add Zee News as a Preferred Source

Xiaomiಯ ಈ ಪ್ರಮುಖ ಸ್ಮಾರ್ಟ್‌ಫೋನ್ 6.73-ಇಂಚಿನ 2K M18-ಬಿಟ್ OLED LTPO ಡಿಸ್ಪ್ಲೇಯೊಂದಿಗೆ 3100 x 1440 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಫೋನ್‌ನ ಡಿಸ್ಪ್ಲೇ 120Hz ಹೆಚ್ಚಿನ ರಿಫ್ರೆಶ್ ರೇಟ್‌ ಮತ್ತು 3200 nitsವರೆಗಿನ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಇದಲ್ಲದೆ HDR10+, ಸೆರಾಮಿಕ್ ಗಾಜಿನ ರಕ್ಷಣೆಯಂತಹ ವೈಶಿಷ್ಟ್ಯಗಳು ಈ ಫೋನ್‌ನಲ್ಲಿ ಲಭ್ಯವಿದೆ. ಕಂಪನಿಯು ಇದರಲ್ಲಿ ಸ್ವಂತ ಶಿಯೋಮಿ XRING 01 3nm ಪ್ರೊಸೆಸರ್ ಬಳಸಿದೆ. 

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್, ಸರ್ಕಾರಿ ನೌಕರರ ವೇತನ, ಇಪಿಎಫ್‌ಒ ನಿಯಮ ಸೇರಿದಂತೆ ಜೂನ್ 1 ರಿಂದ ಆಗಲಿದೆ ಪ್ರಮುಖ ಬದಲಾವಣೆಗಳು! ಸಂಪೂರ್ಣ ಪಟ್ಟಿ ಇಲ್ಲಿದೆ

ಈ ಫೋನ್ 16GBವರೆಗೆ LPDDR5x RAM ಮತ್ತು 1TBವರೆಗೆ UFS 4.0 ಸ್ಟೋರೇಜ್‌ಅನ್ನ ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ OS 2.0ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6,100mAhನ ಶಕ್ತಿಶಾಲಿ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. Xiaomi 15s Proನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50MP ಮುಖ್ಯ OIS ಕ್ಯಾಮೆರಾವನ್ನು ಹೊಂದಿದೆ. 

ಇದರೊಂದಿಗೆ 50MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 50MP ಟೆಲಿಫೋಟೋ ಕ್ಯಾಮೆರಾ ಲಭ್ಯವಿದ್ದು, ಇದು 5x ಆಪ್ಟಿಕಲ್ ಜೂಮ್ ಅನ್ನು ಬೆಂಬಲಿಸುತ್ತದೆ. ಇದು 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್ಫ್ರಾರೆಡ್ ಸೆನ್ಸರ್‌ನಂತಹ ವೈಶಿಷ್ಟ್ಯಗಳನ್ನು ಫೋನ್‌ನಲ್ಲಿ ಒದಗಿಸಲಾಗಿದೆ.

ಇದನ್ನೂ ಓದಿ: ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ !ಸರ್ಕಾರಿ ನೌಕರರನಿವೃತ್ತಿ ವಯಸ್ಸು 62ಕ್ಕೆ ಏರಿಕೆ!ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Xiaomi 15S Pro ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರ ಆರಂಭಿಕ 16GB + 512GB ಸ್ಟೋರೇಜ್ ರೂಪಾಂತರದ ಬೆಲೆ 5499 ಯುವಾನ್ (ಸುಮಾರು 65,610 ರೂ.). ಅದೇ ರೀತಿ 16GB + 1TB ಸ್ಟೋರೇಜ್‌ನೊಂದಿಗೆ ಇದರ ಉನ್ನತ ರೂಪಾಂತರವು 5999 ಯುವಾನ್‌ಗಳಿಗೆ (ಸುಮಾರು 71,580 ರೂ.) ಬರುತ್ತದೆ. ಈ ಫೋನ್ ಡ್ರ್ಯಾಗನ್ ಸ್ಕೇಲ್ ಫೈಬರ್ ಆವೃತ್ತಿ ಮತ್ತು ಫಾರ್ ಸ್ಕೈ ಬ್ಲೂ ಬಣ್ಣದಲ್ಲಿ ಬರುತ್ತದೆ. ಇದನ್ನು ಪ್ರಸ್ತುತ ಚೀನೀ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲೂ ಈ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News