ಈ ಕ್ಷಣದ ಪ್ರಮುಖ ಸುದ್ದಿಗಳು
>> ನೆರೆ ರಾಜ್ಯಗಳ ಕದ ತಟ್ಟಿದ ರಾಜ್ಯ ಸರ್ಕಾರ - ಅಕ್ಕಿ ಕೊಡದಿದ್ದರೆ ಬಿಜೆಪಿ ವಿರುದ್ಧ ಪ್ರತಿಭಟನೆ ಎಚ್ಚರಿಕೆ - ಸದ್ಯದಲ್ಲೇ ಪ್ರಧಾನಿ ಮೋದಿ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ
>> ಹಿಂದಿನ ಸರ್ಕಾರ ಜಾರಿ ಮಾಡಿದ್ದ ಹಲವು ಕಾಯ್ದೆಗಳು ವಾಪಸ್ - ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆಗಳು ರದ್ದು - ಪಠ್ಯಪುಸ್ತಕ ಮರು ಪರಿಷ್ಕರಣೆಗೂ ರಾಜ್ಯ ಸಂಪುಟ ನಿರ್ಧಾರ
>> ಬಿಜೆಪಿ ಸರ್ಕಾರದ ಕಾಯ್ದೆಗಳ ವಾಪಸ್‌ಗೆ ಕೇಸರಿ ಕಿಡಿಕಿಡಿ - ಯಾರ ಓಲೈಕೆ ಮಾಡುತ್ತಿದ್ದೀರಿ - ನಕಲಿ ಗಾಂಧಿ ಪರಿವಾರ ನೀಡಿದ ಆದೇಶವೇ ಎಂದು ಬಿಜೆಪಿ ಪ್ರಶ್ನೆಗಳ ಸುರಿಮಳೆ
>> ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆ ಇನ್ನೂ ವಿಳಂಬ - 4-5 ದಿನಗಳ ಬಳಿಕ ಅರ್ಜಿಸಲ್ಲಿಕೆ ಆರಂಭ ಸಾಧ್ಯತೆ - ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಶುರು
>> ಗುಜರಾತ್ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ - ಗಂಟೆಗೆ 125 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿ - ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ.. 90 ರೈಲುಗಳ ಸಂಚಾರ ರದ್ದು