)
Viral News: ಪ್ರೀತಿಗೆ ಕಣ್ಣಿಲ್ಲಅಂತಾ ಹೇಳುತ್ತಾರೆ. ಎರಡು ಮನಸ್ಸುಗಳ ಒಂದಾದರೆ ವಯಸ್ಸು, ಜಾತಿ, ಧರ್ಮ ಮತ್ತು ಅಂತಸ್ತು ಯಾವುದು ಸಹ ಲೆಕ್ಕಕ್ಕೆ ಬರುವುದಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ ವಿಚಿತ್ರ ಮದುವೆಯೊಂದು ನಡೆದಿದೆ.
ಯಾವುದೇ ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಬಿದ್ದರೆ ಆತ ವಯಸ್ಸು ಮತ್ತು ಜಾತಿ ನೋಡುವುದಿಲ್ಲ. ಬದಲಿಗೆ ಆತ ತನ್ನ ಹೃದಯವನ್ನ ಸಂಗಾತಿಗೆ ಒಪ್ಪಿಸುತ್ತಾನೆ. ವಯೋಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಪ್ರೇಮಿಗಳಿಬ್ಬರು ಪರಸ್ಪರ ಒಪ್ಪಿ ಮದುವೆಯಾಗುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ವಿಡಿಯೋಗಳನ್ನ ನೀವು ಸಾಕಷ್ಟು ನೋಡಿರಬೇಕು. ಇದೀಗ ಇಂತಹದ್ದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಪ್ರೇಮಿಗಳನ್ನ ನೋಡಿದರೆ ನೀವು ಶಾಕ್ ಆಗುತ್ತೀರಿ. ಒಬ್ಬ ಯುವಕ ತನಗಿಂತ 31 ವರ್ಷ ಹಿರಿಯ ಮಹಿಳೆಯನ್ನ ಮದುವೆಯಾಗಿದ್ದಾನೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮದುವೆಯ ವೇದಿಕೆಯ ಮೇಲೆ 21 ವರ್ಷದ ಹುಡುಗ ನಿಂತಿರುವುದನ್ನ ನೀವು ನೋಡುತ್ತೀರಿ. ಆತನ ಜೊತೆಗೆ ಅಜ್ಜಿಯ ವಯಸ್ಸಿನ ಮಹಿಳೆಯೊಂದಿಗೆ ಮದುವೆಯಾಗಿದ್ದಾನೆ.
ಇಬ್ಬರೂ ಕೊರಳಿಗೆ ಹಾರ ಹಾಕಿಕೊಂಡಿದ್ದಾರೆ. ಇಬ್ಬರೂ ಮದುವೆಯಾಗಿದ್ದೀರಾ? ಎಂದು ಯಾರೋ ಆ ಯುವಕನನ್ನ ಕೇಳಿದ್ದಾರೆ. ಆಗ ಆತ ಹೌದು ಎಂದು ಉತ್ತರಿಸಿದ. ಆಗ ಆ ವ್ಯಕ್ತಿ ಯುವಕನ ವಯಸ್ಸು ಕೇಳಿದಾಗ ಆತನಿಗೆ 21 ವರ್ಷ ಮತ್ತು ಮಹಿಳೆಗೆ 52 ವರ್ಷ ಎಂದು ಹೇಳಿದ್ದಾನೆ. ಈ ಜೋಡಿಯ ಫೋಟೋ ಮತ್ತು ವಿಡಿಯೋಗಳು ಈಗ ಸಖತ್ ಸೌಂಡ್ ಮಾಡುತ್ತಿವೆ. ಅನೇಕರು ವಿವಿದ ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ ಕೆಲವರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ಇದಕ್ಕೆ ಹೇಳುವುದು ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತಾ. ಪ್ರೀತಿ-ಪ್ರೇಮಕ್ಕೆ ಯಾವುದೇ ರೀತಿಯ ವಯಸ್ಸಿನ ಮೀತಿಯಿಲ್ಲ. ಹೀಗಾಗಿಯೇ ಇಂದು ಅನೇಕರು ವಯಸ್ಸನ್ನೂ ಮೀರಿ ಮದುವೆಯಾಗುತ್ತೀದ್ದಾರೆ.