ವೃದ್ಧ ದಂಪತಿಗಳು ತಮ್ಮ ಬಳಿ ಇದ್ದ 1,120 ರೂ. ಹಣ ಮತ್ತು ನಾಣ್ಯಗಳ ಗಂಟನ್ನು ತೋರಿಸಿದಾಗ, ಅಂಗಡಿ ಮಾಲೀಕರು ಆಭರಣಕ್ಕೆ ಕೇವಲ 20 ರೂ. ಮತ್ತು 10 ರೂ. ಮಾತ್ರ ಸ್ವೀಕರಿಸಿ, ಉಳಿದ ಹಣವನ್ನು ಹಿಂದಿರುಗಿಸಿದರು.

ಮಹಾರಾಷ್ಟ್ರದ ಸಂಭಾಜಿನಗರದ ಗೋಪಿಕಾ ಜ್ಯುವೆಲ್ಲರ್ಸ್ನಲ್ಲಿ ನಡೆದ ಒಂದು ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಈ ಕಾಲದಲ್ಲಿ ಆಭರಣ ಖರೀದಿ ಮಧ್ಯಮ ಮತ್ತು ಬಡವರಿಗೆ ಕನಸಿನಂತಾಗಿದೆ. ಆದರೆ, 93 ವರ್ಷದ ವೃದ್ಧನೊಬ್ಬ ತನ್ನ ಪತ್ನಿಗೆ ಮಂಗಳಸೂತ್ರ ಕೊಡಿಸುವ ಆಸೆಯೊಂದಿಗೆ ಆಭರಣದ ಅಂಗಡಿಗೆ ಬಂದಿದ್ದು, ಅಂಗಡಿ ಮಾಲೀಕನ ಕಾಳಜಿಯಿಂದ ಈ ಕನಸು ನನಸಾಗಿದೆ.
ವೃದ್ಧ ದಂಪತಿಗಳು ತಮ್ಮ ಅಲ್ಪ ಕೂಡಿಟ್ಟ ಹಣದಿಂದ ಆಭರಣ ಖರೀದಿಸಲು ಗೋಪಿಕಾ ಜ್ಯುವೆಲ್ಲರ್ಸ್ಗೆ ಆಗಮಿಸಿದ್ದರು. ತೊಟ್ಟ ಉಡುಗೆಯಿಂದಲೇ ಅವರ ಆರ್ಥಿಕ ಸ್ಥಿತಿಯನ್ನು ಊಹಿಸಬಹುದಾಗಿತ್ತು. ವೃದ್ಧ ಮಹಿಳೆ 1,120 ರೂಪಾಯಿ ಹಣವನ್ನು ತೋರಿಸಿದ್ದು, ಇದರ ಜೊತೆಗೆ ನಾಣ್ಯ ತುಂಬಿದ ಗಂಟೊಂದನ್ನು ತೆಗೆದುಕೊಟ್ಟಿದ್ದಾರೆ. ಈ ದಂಪತಿಗಳ ಪ್ರೀತಿಯ ಬಾಂಧವ್ಯ ಮತ್ತು ಕಷ್ಟವನ್ನು ಅರಿತ ಅಂಗಡಿ ಮಾಲೀಕರು, ಕೇವಲ ತಲಾ 20 ರೂಪಾಯಿ ಮತ್ತು 10 ರೂಪಾಯಿ ಸ್ವೀಕರಿಸಿ, ಆಭರಣವನ್ನು "ಪ್ರೀತಿಯ ಉಡುಗೊರೆ" ಎಂದು ನೀಡಿದ್ದಾರೆ. ಈ ಕೃತ್ಯಕ್ಕೆ ಭಾವುಕರಾದ ದಂಪತಿಗಳು ಕಣ್ಣೀರು ಸುರಿಸಿದ್ದಾರೆ.
This just made my day.
An elderly couple on the way to Pandharpur, a pilgrimage site in Maharasthra, visits a jewellery store to buy some jewels with their meagre savings.
How the shop owner helped them was simply heart-touching. Good Karma will always take you higher in life… pic.twitter.com/WkINsZE9JD— Sqn Ldr Varlin Panwar (Retd) (@VarlinPanwar) June 16, 2025
@VarlinPanwar ಖಾತೆಯಲ್ಲಿ ಜೂನ್ 16, 2025ರಂದು ಶೇರ್ ಆದ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. "ಈ ಘಟನೆ ನನ್ನ ದಿನವನ್ನು ಸುಂದರಗೊಳಿಸಿತು. ಅಂಗಡಿ ಮಾಲೀಕರ ಒಳ್ಳೆಯತನ ಜೀವನದಲ್ಲಿ ಯಶಸ್ಸನ್ನು ತರುತ್ತದೆ," ಎಂದು ಬರೆಯಲಾಗಿದೆ. ನೆಟ್ಟಿಗರು ಮಾಲೀಕರ ಹೃದಯ ಶ್ರೀಮಂತಿಕೆಯನ್ನು ಶ್ಲಾಘಿಸಿದ್ದಾರೆ. "ಇಂತಹ ಕಾಳಜಿಯುಳ್ಳ ಜನರಿರುವುದು ಹೆಮ್ಮೆಯ ವಿಷಯ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಈ ದಂಪತಿಯ ಆಶೀರ್ವಾದ ಮಾಲೀಕರಿಗೆ ಖಂಡಿತವಾಗಿರುತ್ತದೆ," ಎಂದಿದ್ದಾರೆ.
ಈ ಘಟನೆ ಚಿನ್ನದ ಬೆಲೆ ಏರಿಕೆಯ ನಡುವೆಯೂ ಮಾನವೀಯತೆ ಮತ್ತು ಕಾಳಜಿಯ ಮೌಲ್ಯವನ್ನು ಎತ್ತಿ ತೋರಿಸಿದೆ.
(ಸೂಚನೆ : ಇವೆಲ್ಲವೂ ಜುಬೇರ್ ಚೌಧರಿಯವರ ವೈಯಕ್ತಿಕ ಅನುಭವಗಳು. ಇದನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು.ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ