)
Snake Vs Tiger Viral Video: ಸಾಮಾನ್ಯವಾಗಿ ಕಾಡುಗಳಲ್ಲಿ ಸಿಂಹಗಳು, ಹುಲಿಗಳು, ಚಿರತೆಗಳು, ಹಾವುಗಳು ಮುಂತಾದ ಕಾಡು ಪ್ರಾಣಿಗಳು ಮತ್ತು ಪಳಗಿದ ಪ್ರಾಣಿಗಳಿರುತ್ತವೆ. ಅವು ಇತರ ಪ್ರಾಣಿಗಳನ್ನ ಬೇಟೆಯಾಡಿ ತಿನ್ನುತ್ತವೆ. ಸಿಂಹಗಳು ಮತ್ತು ಹುಲಿಗಳು ತುಂಬಾ ಹಿಂಸಾತ್ಮಕವಾಗಿ ಬೇಟೆಯಾಡುತ್ತವೆ. ವಿಶೇಷವಾಗಿ ಪಳಗಿದ ಪ್ರಾಣಿಗಳು ಅವುಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ತುಂಬಾ ಕಷ್ಟಪಡುತ್ತವೆ. ಆದರೆ ಇವುಗಳು ರಹಸ್ಯವಾಗಿ ದಾಳಿ ಮಾಡಿ ಬಹಳಷ್ಟು ಬೇಟೆಯನ್ನ ತಿನ್ನುತ್ತವೆ.
ಸಫಾರಿಗೆ ಹೋದವರು ಹುಲಿ, ಸಿಂಹ ಮತ್ತು ಚಿರತೆಗಳ ಕಾದಾಟ ಮತ್ತು ಬೇಟೆಯ ವಿಡಿಯೋಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಹಂಚಿಕೊಳ್ಳುತ್ತಿರುತ್ತಾರೆ. ಪ್ರತಿದಿನವೂ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಇಂತಹ ವಿಡಿಯೋಗಳು ವೈರಲ್ ಆಗಿ ಜನರ ಗಮನ ಸೆಳೆಯುತ್ತವೆ. ಕೆಲವು ಪ್ರಾಣಿಗಳ ಕಾದಾಟ ಮತ್ತು ಬೇಟೆಯ ವಿಡಿಯೋಗಳು ನೋಡಲು ತುಂಬಾ ಆಸಕ್ತಿದಾಯಕವಾಗಿರುತ್ತವೆ. ಸಣ್ಣ ಪ್ರಾಣಿಗಳು ಸಹ ದೊಡ್ಡ ಪ್ರಾಣಿಗಳಿಗೆ ಭಯವನ್ನುಂಟು ಮಾಡುತ್ತವೆ. ಅಂತಹದ್ದೇ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಅಂದಹಾಗೆ ಈ ವೈರಲ್ ವಿಡಿಯೋದಲ್ಲಿ ಹುಲಿಯೊಂದು ನೀರು ಕುಡಿಯಲು ತೊರೆಯ ಹತ್ತಿರ ಬಂದಿದೆ. ಈ ವೇಳೆ ಅದೇ ನೀರಿನಲ್ಲಿ ಬಂದ ನಾಗರಾಹವು ಹುಲಿಗೆ ಭಯ ಹುಟ್ಟಿಸಿದೆ. ನೀರು ಕುಡಿಯಬೇಕೆಂದು ಬಂದ ಹುಲಿಗೆ ನಾಗರಹಾವು ಬುಸ್.. ಬುಸ್.. ಎಂದು ಅವಾಜ್ ಹಾಕಿದೆ. ನಾಗರಾಜನ ಭಯಕ್ಕೆ ಹುಲಿ ಮುಂದಿಟ್ಟ ಹೆಜ್ಜೆಯನ್ನ ಹಿಂದಕ್ಕಿಟ್ಟಿದೆ. ಹೀಗೆ ಹುಲಿಗೆ ನಾಗರಹಾವು ಭಯ ಹುಟ್ಟಿಸಿದೆ. ಈ ವಿಡಿಯೋ ನೋಡಿದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
jungle_boyz_ngp ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈ ವಿಡಿಯೋಗೆ Dr gya? ಎಂದು ಕ್ಯಾಪ್ಶನ್ ನೀಡಲಾಗಿದೆ. ಅನೇಕರು ಪುಟ್ಟ ಹಾವಿಗೆ ಅಷ್ಟುದೊಡ್ಡ ಹುಲಿರಾಯ ಅದು ಹೇಗೆ ಹೆದರಿಕೊಂಡ? ಅಂತಾ ಪ್ರಶ್ನಿಸಿದ್ದಾರೆ. ನಾಗರಹಾವಿನ ಅವಾಜ್ಗೆ ಹುಲಿ ಡರ್ ಹೊಡೆದಿದೆ ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ.