ಭಾರತದಲ್ಲಿ ಮಧ್ಯಮ ವರ್ಗದವರನ್ನು ಬೆಲೆ ಏರಿಕೆ ಎನ್ನುವ ಭೂತ ಕಾಡುತ್ತಿದೆ. ತರಕಾರಿಗಳ ಬೆಲೆಯಿಂದ ಹಿಡಿದು ಶಾಲಾ ಶುಲ್ಕದವರೆಗೆ ಎಲ್ಲವೂ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಉತ್ತಮ ಹೂಡಿಕೆ ಎಂದು ಪರಿಗಣಿಸಲಾದ ಚಿನ್ನ ಕೂಡಾ ಗಗನಕ್ಕೆ ಏರುತ್ತಿದೆ. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಕೂಡಾ ಈ ಸಾಲಿಗೆ ಸೇರಿದೆ.
ಹೀಗೆ ಅಗತ್ಯ ವಸ್ತುಗಳಿಗೆ ಬೆಲೆ ಏರಿಕೆ ಆಗುತ್ತಿರುವುದು ಮಧ್ಯಮ ವರ್ಗದವರಿಗೆ ದೊಡ್ಡ ತಲೆನೋವಾಗಿದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 102.92 ಮತ್ತು ಒಂದು ಲೀಟರ್ ಡೀಸೆಲ್ ಬೆಲೆ ರೂ. 90.99. ಇದೆ. ಆದರೆ, ಪ್ರಸ್ತುತ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಅನ್ನು 64 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಮಾತು ನಿಮಗೆ ಖಂಡಿತವಾಗಿಯೂ ಆಶ್ಚರ್ಯ ತರಿಸಬಹುದು.ಆದ್ರೆ ಇದು ಸತ್ಯ.
ಭಾರತ-ಭೂತಾನ್ ಗಡಿಯಲ್ಲಿ :
ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ನಲ್ಲಿ ಲೀಟರ್ ಪೆಟ್ರೋಲ್ ಅನ್ನು 64 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹೌದು, ಭೂತಾನ್ ನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ನಲ್ಲಿ ಇಷ್ಟು ಅಗ್ಗದ ಬೆಲೆಗೆ ಪೆಟ್ರೋಲ್ ಮಾರಾಟವಾಗುತ್ತಿದೆ. ಇತ್ತೀಚೆಗೆ ಒಬ್ಬ ಭಾರತೀಯ ಭೂತಾನ್‌ಗೆ ಭೇಟಿ ನೀಡಿದ್ದ. ಅಲ್ಲಿನ ಪೆಟ್ರೋಲ್ ಬೆಲೆ ನೋಡಿ ಆಶ್ಚರ್ಯಗೊಂಡ ಆತ ಆ ಅನುಭವವನ್ನು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪೆಟ್ರೋಲ್ ಬಂಕ್ ಭಾರತ-ಭೂತಾನ್ ಗಡಿಯ ಬಳಿ ಇದೆ. ಅರ್ಬಾಜ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ, "ಭೂತಾನ್‌ನಲ್ಲಿಭಾರತ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ಗಳಿವೆ. ಇವು ಭಾರತೀಯ ಪೆಟ್ರೋಲ್ ಪಂಪ್‌ಗಳು. ಆದರೆ ಇಲ್ಲಿನ ಪೆಟ್ರೋಲ್ ಬೆಲೆಯನ್ನು ನಿಜಕ್ಕೂ ನೀವು ನಂಬುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ :Viral video: ಮುಳ್ಳುಹಂದಿಯನ್ನೇ ನುಂಗಿದ ದೈತ್ಯ ಹಾವು... ಮುಂದೇನಾಯ್ತು? ವಿಡಿಯೋ ನೋಡಿ
ಭೂತಾನ್‌ನಲ್ಲಿ ಪೆಟ್ರೋಲ್ ಬೆಲೆ ಎಷ್ಟು? :
ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ನಲ್ಲಿ ಲೀಟರ್‌ನ ಬೆಲೆ ರೂ. 63.92. ಅಂದರೆ, ವೀಡಿಯೊದಲ್ಲಿ ಪೆಟ್ರೋಲ್ ಪಂಪ್‌ನ ಬೆಲೆಯನ್ನು ಭೂತಾನ್ ಕರೆನ್ಸಿಯಲ್ಲಿ 63.92 ಎಂದು ಹೇಳಲಾಗಿದೆ. ಭೂತಾನ್ ಎನ್‌ಗುಲ್ಟ್ರಮ್ ಮತ್ತು ಭಾರತೀಯ ರೂಪಾಯಿ ಎರಡೂ ಒಂದೇ ಮೌಲ್ಯವನ್ನು ಹೊಂದಿವೆ. ಭಾರತದಲ್ಲಿ 100 ಮತ್ತು ರೂ. ಭೂತಾನ್ ಗಡಿಯಲ್ಲಿ 64 ರೂ. ಎನ್ನುವುದೇ ಇಲ್ಲಿ ಜನರನ್ನು ಆಶ್ಚರ್ಯಕ್ಕೆ ಗುರಿ ಮಾಡಿರುವುದು. ಅರ್ಬಾಜ್ ಅವರ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ. ಇದು ಇನ್‌ಸ್ಟಾಗ್ರಾಮ್‌ನಲ್ಲಿ 7.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನೆಟ್ಟಿಗರ ಬೇಸರ :
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ತಮ್ಮ ಕಾಮೆಂಟ್‌ನಲ್ಲಿ ಭಾರತದಿಂದ ಪೆಟ್ರೋಲ್ ಖರೀದಿಸಿ ಇಷ್ಟು ಕಡಿಮೆ ಬೆಲೆಗೆ ಹೇಗೆ ಮಾರಾಟ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಇನ್ನೊಬ್ಬ ಬ್ಲಾಗರ್ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಹೆಚ್ಚಾಗಿರುವುದಕ್ಕೆ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರ ಮೇಲೆ ವಿಧಿಸುವ ತೆರಿಗೆಗಳು. ತೆರಿಗೆಗಳು ಕಡಿಮೆಯಾದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಹ ಕಡಿಮೆಯಾಗುತ್ತವೆ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









