)
Viral Video: ಹೆಂಡತಿಯಿಂದ ಡಿವೋರ್ಸ್ ಪಡೆದ ಖುಷಿಯಲ್ಲಿ ವ್ಯಕ್ತಿಯೊಬ್ಬ ಬರೋಬ್ವರಿ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ʼʼನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಬಾರಿ ಓಡಿಹೋಗಿದ್ದಳು. ಆದರೂ ನಾನು ಎರಡೂ ಬಾರಿ ಅವಳನ್ನ ಕ್ಷಮಿಸಿದ್ದೆ. ನಾನು ಮಗಳ ಬಗ್ಗೆ ಯೋಚಿಸುತ್ತಿದ್ದೆ. ಆದರೆ ಆಕೆ ಪದೇ ಪದೇ ತನ್ನ ಹಳೆಯ ಚಾಳಿಯನ್ನ ಮುಂದುವರಿಸಿದ್ದಳು. ಆಕೆಯ ವರ್ತನೆಯಿಂದ ಬೇಸತ್ತು ಹೋಗಿದ್ದೇನೆ. ಅಂತಿಮವಾಗಿ ಒಂದು ಕಠಿಣ ನಿರ್ಧಾರಕ್ಕೆ ಬಂದೆ. ಕಾನೂನುಬದ್ಧವಾಗಿ ಬೇರೆಯಾಗುವ ಮಾರ್ಗ ಆರಿಸಿಕೊಳ್ಳಬೇಕಾಯಿತುʼʼ ಅಂತಾ ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ.
ವಿಚ್ಛೇದನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮಾಣಿಕ್ ಅಲಿ ಅಂಗಡಿಯಿಂದ ನಾಲ್ಕು ಬಕೆಟ್ ಅಂದರೆ ಸುಮಾರು 40 ಲೀಟರ್ನಷ್ಟು ಹಾಲು ತಂದು ಸ್ನಾನ ಮಾಡಿದ್ದಾನೆ. ಸ್ನಾನ ಮಾಡುತ್ತಲೇ ವಿಡಿಯೋ ಕೂಡ ಮಾಡಿದ್ದಾನೆ. "ಇಂದಿನಿಂದ ನಾನು ಸ್ವತಂತ್ರ... ನನಗೆ ಎಲ್ಲವೂ ಹೊರೆಯಾಗಿತ್ತು... ಈಗ ನಾನು ಅದರಿಂದ ಮುಕ್ತಿ ಪಡೆದುಕೊಂಡಿದ್ದೇನೆ. ಅಂತಾ ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ.
ʼʼಮಗುವಿನ ಸಲುವಾಗಿ ಪತ್ನಿಯನ್ನ ಉಳಿಸಿಕೊಳ್ಳಲು ನಾನು ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆದರೆ ಪತ್ನಿ ತನ್ನ ವಿವಾಹೇತರ ಸಂಬಂಧವನ್ನ ಪುನಃ ಪುನಃ ಮುಂದುವರೆಸಿದ್ದಳು. ಇದರಿಂದ ನನಗೆ ಜೀವನದಲ್ಲಿ ಜಿಗುಪ್ಸೆ ಕೂಡ ಬಂದಿತ್ತು. ಮಗಳ ಮುಖವನ್ನ ನೋಡಿ ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಹೀಗಾಗಿ ವಿಚ್ಛೇದನಕ್ಕೆ ಒಪ್ಪಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಈ ಮುನ್ನ ನನ್ನ ಹೆಂಡತಿಗೆ ಸಾಕಷ್ಟು ಬಾರಿ ತಿಳುವಳಿಕೆ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದೆʼ ಎಂದು ಮಾಣಿಕ್ ಅಲಿ ಬೇಸರ ವ್ಯಕ್ತಪಡಿಸಿದ್ದಾನೆ.
ʼಹಿರಿಯರ ಸಮ್ಮುಖದಲ್ಲಿ ರಾಜಿ ಕೂಡ ಮಾಡಿಕೊಳ್ಳಲಾಗಿತ್ತು. ಎಷ್ಟೇ ಬೇಡಿಕೊಂಡರು ನನ್ನ ಹೆಂಡತಿ ನನ್ನನ್ನ ತೊರೆದು ಹೋಗಿದ್ದಳು. ಈ ಬಾರಿ ಆಕೆ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದರಿಂದ ನನ್ನ ಆಸೆಗಳೆಲ್ಲ ಕಮರಿದ್ದವು. ಕೊನೆಗೆ ಕಾನೂನಿನ ಮೂಲಕ ಪರಸ್ಪರ ವಿಚ್ಛೇದನವನ್ನ ಆರಿಸಿಕೊಳ್ಳಬೇಕಾಯಿತು. ಹೆಂಡತಿಯಿಂದ ಬೇರ್ಪಟ್ಟ ನಂತರ ನಾನು ಹೊಸ ಜನ್ಮ ಪಡೆದಂತೆ ಭಾಸವಾಯಿತು. ಹೊಸ ಜೀವನಕ್ಕೆ ಕಾಲಿಟ್ಟ ನೆನಪಿಗಾಗಿ ನಾನು ಸುಮಾರು 40 ಲೀಟರ್ ಹಾಲಿನಿಂದ ಸ್ನಾನ ಮಾಡಿಕೊಂಡೆ. ಈಗ ನಾನು ಸಂಸಾರದಿಂದ ಮುಕ್ತಿ ಪಡೆದ ಸ್ವತಂತ್ರ ಹಕ್ಕಿ. ಈಗ ನನಗೆ ಯಾವುದೇ ರೀತಿಯ ಟೆನ್ಶನ್ ಇಲ್ಲʼ ಅಂತಾ ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ.