)
Snake Bite Viral Video: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ರೀಲ್ಸ್ ಮಾಡುವ ವೇಳೆ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದೆ. ಮಾಹಿತಿಯ ಪ್ರಕಾರ, ಆ ವ್ಯಕ್ತಿ ರೀಲ್ಸ್ ಮಾಡಲು ತನ್ನ ಕೊರಳಿನಲ್ಲಿ ಹಾವೊಂದನ್ನ ಸುತ್ತಿಕೊಂಡಿದ್ದ. ಅದನ್ನ ಕೈಯಲ್ಲಿ ಹಿಡಿದುಕೊಂಡು ಹಾವಿಗೆ ಚುಂಬಿಸಲು ಪ್ರಯತ್ನಿಸುತ್ತಿದ್ದ. ಈ ವೇಳೆ ಹಾವು ಆತನ ನಾಲಿಗೆಗೆ ಕಚ್ಚಿದೆ. ಹಾವು ನಾಲಿಗೆಗೆ ಕಚ್ಚಿದ ನಂತರ ಆ ವ್ಯಕ್ತಿಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆಗಾಗಿ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಸ್ತವವಾಗಿ ಈ ಘಟನೆ ಅಮ್ರೋಹಾ ಜಿಲ್ಲೆಯ ಹೈಬತ್ಪುರ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಜಿತೇಂದ್ರ ಕುಮಾರ್ ಎಂಬ 50 ವರ್ಷದ ರೈತ ಹಾವು ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದ. ಆತ ಹಾವಿನೊಂದಿಗೆ ಫೋಟೋ ತೆಗೆದುಕೊಂಡು ಅದನ್ನು ಜನರಿಗೆ ತೋರಿಸಲು ರೀಲ್ಸ್ ಮಾಡುತ್ತಿದ್ದ. ಹಾವಿನೊಂದಿಗೆ ವಿಡಿಯೋ ಮಾಡುವಾಗ ಆ ವ್ಯಕ್ತಿ ಕುಡಿದು ಧೂಮಪಾನವನ್ನೂ ಮಾಡುತ್ತಿದ್ದ ಎಂದು ಸ್ಥಳೀಯ ಜನರು ಹೇಳಿದ್ದಾರೆ. ಈ ಸಮಯದಲ್ಲಿಯೇ ಹಾವು ಆತನನ್ನು ಕಚ್ಚಿದೆ.
उत्तर प्रदेश के अमरोहा जिले के इस व्यक्ति ने सांप को पकड़ा,
फिर सांप के साथ खेलने लगा,
सांप से खुद की जीभ पर किस कराने जैसे करतब दिखाना शुरू किया,
अचानक सांप ने उसे जीभ पर ही काट लिया.
हालत गंभीर,
व्यक्ति अस्पताल में भर्ती है. pic.twitter.com/8roTgeI0ni— Priyanshu Mishra ? (@Apka_Priyanshu) June 15, 2025
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಆ ವ್ಯಕ್ತಿ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ತನ್ನ ನಾಲಿಗೆಯಿಂದ ಕಿಸ್ ಮಾಡಲು ಪ್ರಯತ್ನಿಸುತ್ತಿರುವುದನ್ನ ಕಾಣಬಹುದು. ಈ ವೇಳೆ ತನ್ನ ನಾಲಿಗೆಯನ್ನ ಹಾವಿನ ಮೂತಿಯ ಬಳಿ ತಂದಿದ್ದಾನೆ. ಹಾವು ಇದ್ದಕ್ಕಿದ್ದಂತೆ ದಾಳಿ ಮಾಡಿ ಆತನ ನಾಲಿಗೆಯನ್ನ ಕಚ್ಚಿದೆ. ಇದರಿಂದ ಅಲ್ಲಿನ ಸ್ಥಳೀಯ ಜನರು ಭಯಭೀತರಾಗಿದ್ದರು. ಹಾವು ಕಡಿತದಿಂದ ಆ ವ್ಯಕ್ತಿಯ ಸ್ಥಿತಿ ಹದಗೆಟ್ಟಿತ್ತು. ಮೊದಲು ಆತನನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಬೇರೆ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಬಗ್ಗೆ ಹೈಬತ್ಪುರ ಗ್ರಾಮದ ಮುಖ್ಯಸ್ಥ ಜೈಕಿರತ್ ಸಿಂಗ್ ಹೇಳಿಕೆ ನೀಡಿದ್ದಾರೆ. ಘಟನೆ ನಡೆದ ದಿನ ಗೋಡೆಯೊಂದರಿಂದ ಹಾವು ಹೊರಬಂದ ಕಾರಣ ಆ ಪ್ರದೇಶದಲ್ಲಿ ಭಯ ಹರಡಿತ್ತು. ಈ ಸಮಯದಲ್ಲಿ ಜಿತೇಂದ್ರ ಅಲ್ಲಿಗೆ ತಲುಪಿ ಹಾವನ್ನು ಹಿಡಿದರು. ಆತ ಹಾವನ್ನು ಹಿಡಿದು ಚುಂಬಿಸಲು ಪ್ರಯತ್ನಿಸುತ್ತಿದ್ದ. ಹಿಡಿತ ಸಡಿಲವಾದ ತಕ್ಷಣವೇ ಹಾವು ಆತನ ನಾಲಿಗೆಯನ್ನ ಕಚ್ಚಿದೆ. ಕೂಡಲೇ ಆತ ಭಯದಿಂದ ಹಾವನ್ನು ಎಸೆದು ನನ್ನನ್ನ ಕಾಪಾಡಿ ಎಂದು ಬೇಡಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ