Viral Video: ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ!! ಘಟಸರ್ಪದ ವಿಡಿಯೋ ವೈರಲ್

ಕಾಳಿಂಗ ಸರ್ಪ ಹಿಡಿದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸೆರೆಹಿಡಿಯಲಾದ ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಇಂತಹ ಘಟಸರ್ಪವನ್ನು ತಾನು ಹಿಂದೆಂದೂ ನೋಡಿರಲಿಲ್ಲವೆಂದು ರೈತ ಅರ್ಜುನ್‌ ರಾವ್‌ ಹೇಳಿದ್ದಾರೆ. 

Written by - Puttaraj K Alur | Last Updated : Apr 28, 2025, 07:07 PM IST
  • ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ
  • ಬುಸ್‌ ಬುಸ್‌ ಶಬ್ಧ ಮಾಡುತ್ತಿದ್ದ ಘಟಸರ್ಪವನ್ನ ಕಂಡು ಬೆಚ್ಚಿದ ರೈತ
  • ಸುರಕ್ಷಿತವಾಗಿ ಬೃಹತ್‌ ಹಾವು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ
Viral Video: ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ!! ಘಟಸರ್ಪದ ವಿಡಿಯೋ ವೈರಲ್

King Cobra Viral Video: ದನದ ಕೊಟ್ಟಿಗೆಯಲ್ಲಿ ಹಸುಗಳು ನಿರಂತರವಾಗಿ ಕೂಗುತ್ತಿದ್ದವು... ಏನೆಂದು ನೋಡಲು ಕೊಟ್ಟಿಗೆಗೆ ಹೋದ ವ್ಯಕ್ತಿಗೆ ಶಾಕ್ ಆಗಿದೆ. ಕಾರಣ ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಹೌದು, ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಈ ಘಟನೆ ನಡೆದಿದೆ. 

Add Zee News as a Preferred Source

ದನದ ಕೊಟ್ಟಿಗೆಗೆ ಹೋಗಿದ್ದ ವ್ಯಕ್ತಿಗೆ ಶಿಳ್ಳೆ ಹೊಡೆದಂತ ಶಬ್ಧ ಕೇಳುತ್ತಿತ್ತಂತೆ. ಆತ ಬ್ಯಾಟರಿ ಹಿಡಿದು ಪರಿಶೀಲಿಸಿದಾಗ ಅಲ್ಲಿ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಈ ಬೃಹತ್ ಗಾತ್ರದ ಹಾವನ್ನು ಕಂಡು ಅಕ್ಕಪಕ್ಕದ ಜನರು ಸಹ ಗಾಬರಿಯಾಗಿದ್ದಾರೆ.  

ಇದನ್ನೂ ಓದಿ: ಭಯೋತ್ಪಾದನೆಗೆ ತೀಕ್ಷ್ಣ ಪ್ರತಿಕ್ರಿಯೆ: ಸಿಂಧೂ ನದಿ ಹಂಚಿಕೆ ಒಪ್ಪಂದ ಅಮಾನತುಗೊಳಿಸಿದ ಭಾರತ

ದನದ ಕೊಟ್ಟಿಗೆಯಲ್ಲಿದ್ದ ಹಸುಗಳು ಕೂಗುತ್ತಿದ್ದವು. ಅವುಗಳಿಗೆ ಹುಲ್ಲು ಹಾಕುವಷ್ಟರಲ್ಲಿ ಶಿಳ್ಳೆ ಹೊಡೆದಂತಹ ಶಬ್ಧ ಕೇಳಿಬಂದಿತ್ತು. ನಾನು ಮೇಲೆ ನೋಡಿದಾಗ ಕೊಟ್ಟಿಗೆಯಲ್ಲಿ ಒಂದು ದೊಡ್ಡ ಹಾವು ಕಾಣಿಸಿತು. ಭಯದಿಂದ ಹೊರಗೆ ಓಡಿ ಹೋದೆ. ಬಳಿಕ ಅರಣ್ಯ ಅಧಿಕಾರಿಗಳು ಮತ್ತು ಉರಗ ತಜ್ಞ ವೆಂಕಟೇಶ್ ಅವರಿಗೆ ವಿಷಯ ತಿಳಿಸಿದ್ದರು.

ಕೂಡಲೇ ಸ್ಥಳಕ್ಕೆ ಬಂದ ವೆಂಕಟೇಶ್‌ ಹಾವು ಹಿಡಿಯಲು ಸಿದ್ಧತೆ ಮಾಡಿಕೊಂಡರು. ಈ ವೇಳೆ ದೊಡ್ಡ ಕಾಳಿಂಗ ಸರ್ಪ ದೊಪ್ಪೆಂದು ಕೆಳಗೆ ಬಿತ್ತು. ಕೊನೆಗೂ ಎರಡು ಗಂಟೆಗಳ ಕಾಲ ನಿರಂತರ ಪ್ರಯತ್ನ ಪಟ್ಟು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಭಾರತ ತೊರೆಯದ ಪಾಕಿಸ್ತಾನದ ಪ್ರಜೆಗಳಿಗೆ 3 ವರ್ಷ ಜೈಲು, 3 ಲಕ್ಷ ರೂಪಾಯಿ ದಂಡ!!

ಕಾಳಿಂಗ ಸರ್ಪ ಹಿಡಿದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸೆರೆಹಿಡಿಯಲಾದ ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಇಂತಹ ಘಟಸರ್ಪವನ್ನು ತಾನು ಹಿಂದೆಂದೂ ನೋಡಿರಲಿಲ್ಲವೆಂದು ರೈತ ಅರ್ಜುನ್‌ ರಾವ್‌ ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕಾಳಿಂಗ ಸರ್ಪದ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News