ಪ್ರವಾಸಿಗರ ₹500 ನೋಟುಗಳ ಕಂತೆ ಹಿಡಿದು ಮರ ಏರಿದ ಮಂಗ: ವಿಡಿಯೋ ವೈರಲ್

Viral Video: ಕೋತಿಗೆ ಹೆಂಡ ಕುಡಿಸಿದರೆ ಸುಮ್ಮನೆ ಇರಲ್ಲ.... ಅಂತದರಲ್ಲಿ ಕೋತಿ ಕೈಗೆ ದುಡ್ಡು ಸಿಕ್ಕರೆ ಸುಮ್ಮನಿರುತ್ತಾ.... ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಅಂತದ್ದೆ ಒಂದು ಅಪರೂಪದ ದೃಶ್ಯ ಸೆರೆಯಾಗಿದ್ದು ಇದೀಗ ಸಖತ್ ವೈರಲ್ ಆಗುತ್ತಿದೆ. 

Written by - Yashaswini V | Last Updated : Jun 16, 2025, 01:33 PM IST
  • ಪ್ರವಾಸಿಗರಿಂದ ₹500 ಬಂಡಲ್ ಎಗರಿಸಿದ ಮಂಗ
  • ಹಣ ಲಪಟಾಯಿಸಿ ಮರ ಏರಿ ಕುಳಿತ ಹನುಮಂತ...
  • ₹500 ಬಂಡಲ್ ಬಿಚ್ಚಿ ಬಿಡಿ ಬಿಡಿಯಾಗಿ ಹಣ ಎಸೆಯುತ್ತಾ ಮಂಗನಾಟ...
ಪ್ರವಾಸಿಗರ ₹500 ನೋಟುಗಳ ಕಂತೆ ಹಿಡಿದು ಮರ ಏರಿದ ಮಂಗ: ವಿಡಿಯೋ ವೈರಲ್

Viral Video Today: ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ ಪ್ರವಾಸಿಗರ ಕೈಯಿಂದ ₹500 ನೋಟುಗಳ ಕಂತೆಯನ್ನು ಲಪಟಾಯಿಸಿದ ಮಂಗ ಮರ ಏರಿ ಕುಳಿತ ಘಟನೆ ಕೊಡೈಕೆನಾಲ್‌ನ ಗುಣ ಗುಹೆಯಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. 

Add Zee News as a Preferred Source

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕೊಡೈಕೆನಾಲ್‌ನ ಗುಣ ಗುಹೆಗಳ ಪ್ರವಾಸಿ ತಾಣದಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು ಅದರ ಅನೇಕ ಆಕರ್ಷಣೆಗಳಲ್ಲಿ, ಗುಣ ಗುಹೆಗಳು ವಿಶೇಷವಾಗಿ ಜನಪ್ರಿಯ ತಾಣವಾಗಿ ಎದ್ದು ಕಾಣುತ್ತವೆ, ಈ ಪ್ರದೇಶವು ಇತರ ಸ್ಥಳಗಳಿಗಿಂತ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಇದನ್ನೂ ಓದಿ- ಮಿತಿಮೀರಿದ ಕಾಡಾನೆ ಉಪಟಳ- ಬೆಳ್ಳಂಬೆಳಗ್ಗೆ ಫಸಲು ಮೆಲ್ಲುತ್ತಾ ನಿಂತ ಕಾಡಾನೆ ವಿಡಿಯೋ ವೈರಲ್

ಇತ್ತೀಚೆಗೆ, ಗುಣ ಗುಹೆಗಳ ಪ್ರದೇಶದಲ್ಲಿ ಕೋತಿಗಳು ನಿಯಮಿತವಾಗಿ ಪ್ರವಾಸಿಗರಿಂದ ಆಹಾರ ಪದಾರ್ಥಗಳು ಮತ್ತು ಚೀಲಗಳನ್ನು ಕಸಿದುಕೊಳ್ಳುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಅಂತಹ ಒಂದು ಘಟನೆಯಲ್ಲಿ, ಕೋತಿಯೊಂದು ಕರ್ನಾಟಕದಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರವಾಸಿಗರ ಬ್ಯಾಗ್ ಕಸಿದು ಅದರಲ್ಲಿದ್ದ, ₹500 ಕರೆನ್ಸಿ ನೋಟುಗಳ ಕಟ್ಟನ್ನು ಹೊರತೆಗೆದು, ಮರದ ಮೇಲೆ ಹತ್ತಿ, ನೋಟುಗಳನ್ನು ಒಂದೊಂದಾಗಿ ಕೆಳಗೆ ಎಸೆಯಲು ಪ್ರಾರಂಭಿಸಿದೆ. 

ಮಂಗನ ಕೈ ಸೇರಿದ್ದ ಹಣವನ್ನು ಕೋತಿ ಒಂದೊಂದಾಗಿ ಕೆಳಗೆ  ಬೀಳುತ್ತಿದ್ದಂತೆ ಕರೆನ್ಸಿ ನೋಟುಗಳನ್ನು ತ್ವರಿತವಾಗಿ ಸಂಗ್ರಹಿಸಿ ಸಂಪೂರ್ಣ ₹500 ಬಂಡಲ್ ಅನ್ನು ಮರು ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.

ನೋಟಿನ ಕಂತೆ ಹಿಡಿದು ಮಂಗನ ಆಟದ ವಿಡಿಯೋವನ್ನು ಇಲ್ಲಿ ವೀಕ್ಷಿಸಿ... 

ಇದನ್ನೂ ಓದಿ- ಮನೆ‌ ಬಳಿ ಹಾಡಹಗಲೇ ಕಾಡಾನೆ ಪ್ರತ್ಯಕ್ಷ- ಗಜರಾಜನಿಗೆ ಲಾಡು ಬೇಕಾ ಲಾಡು ಎಂದ ಮಹಿಳೆ!! ವಿಡಿಯೋ ವೈರಲ್

ನಿತ್ಯ ನೂರಾರು ಪ್ರವಾಸಿಗರನ್ನು ಆಕರ್ಷಿಸುವ ಕೊಡೈಕೆನಾಲ್ ನಲ್ಲಿ ಹೆಚ್ಚುತ್ತಿರುವ ಕೋತಿಗಳ ಕಾಟ ತಪ್ಪಬೇಕು.  ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಪ್ರದೇಶದಲ್ಲಿ ಮಂಗಗಳನ್ನು ಸೆರೆಹಿಡಿದು ಕಾಡಿನೊಳಗೆ ಬಿಡಬೇಕೆಂದು ಪ್ರವಾಸಿಗರು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News