Viral Video: ರಸ್ತೆಯಲ್ಲಿ ಹೋಗುತ್ತಿದ್ದ ಮಗು, ಮಹಿಳೆಯ ಮೇಲೆ ಬೀದಿ ಹಸು ಅಟ್ಯಾಕ್! ವಿಡಿಯೋ ವೈರಲ್

Stray Cow Attack Video: ವೈರಲ್‌ ಆಗಿರೋ ವಿಡಿಯೋದಲ್ಲಿ ರಸ್ತೆ ಬದಿ ಹಸು ನಿಂತುಕೊಂಡಿತ್ತು. ಈ ವೇಳೆ ಮಗುವಿನ ಜೊತೆಗೆ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದೆ.

Written by - Puttaraj K Alur | Last Updated : Mar 15, 2025, 08:37 PM IST
  • ರಸ್ತೆಯಲ್ಲಿ ಹೋಗುತ್ತಿದ್ದ ಮಗು, ಮಹಿಳೆಯ ಮೇಲೆ ಬೀದಿ ಹಸುವಿನ ದಾಳಿ
  • ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಹಸುವಿನ ಡೆಡ್ಲಿ ಅಟ್ಯಾಕ್‌ನ ವಿಡಿಯೋ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ಭಯಾನಕ ದೃಶ್ಯ
Viral Video: ರಸ್ತೆಯಲ್ಲಿ ಹೋಗುತ್ತಿದ್ದ ಮಗು, ಮಹಿಳೆಯ ಮೇಲೆ ಬೀದಿ ಹಸು ಅಟ್ಯಾಕ್! ವಿಡಿಯೋ ವೈರಲ್
ಹಸುವಿನ ದಾಳಿಯ ಭಯಾನಕ ವಿಡಿಯೋ!!

Stray Cow Attcak Viral Video: ರಸ್ತೆಯಲ್ಲಿ ಹೋಗುತ್ತಿದ್ದ ಮಗು ಮತ್ತು ಮಹಿಳೆಯ ಮೇಲೆ ಬೀದಿ ಹಸುವೊಂದು ಭೀಕರವಾಗಿ ದಾಳಿ ನಡೆಸಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ತಮಿಳುನಾಡಿನ ಕೊಳತ್ತೂರಿನ ಬಾಲಾಜಿ ನಗರದಲ್ಲಿ ಈ ಘಟನೆ ನಡೆದಿದೆ.

Add Zee News as a Preferred Source

ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದ ಮಗು ಮತ್ತು ಮಹಿಳೆಯೇ ಮೇಲೆ ಏಕಾಏಕಿ ಬೀದಿ ಹಸು ದಾಳಿ ನಡೆಸಿದೆ. ಇದರ ಭಯಾನಕ ವಿಡಿಯೋ ವೈರಲ್‌ ಆಗಿದ್ದು, ಚೆನ್ನೈನಲ್ಲಿ ಹೆಚ್ಚುತ್ತಿರುವ ಬೀದಿ ಪ್ರಾಣಿಗಳ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. 

ಇದನ್ನೂ ಓದಿ: ವಾರ್ಷಿಕ ಆದಾಯ 1.25 ಕೋಟಿ ರೂ.ಗಳವರೆಗೆ ಯಾವುದೇ ರೀತಿಯ ತೆರಿಗೆ ಇಲ್ಲ! ಮೆಗಾ ಯೋಜನೆ ಘೋಷಣೆ..!

ವೈರಲ್‌ ಆಗಿರೋ ವಿಡಿಯೋದಲ್ಲಿ ರಸ್ತೆ ಬದಿ ಹಸು ನಿಂತುಕೊಂಡಿತ್ತು. ಈ ವೇಳೆ ಮಗುವಿನ ಜೊತೆಗೆ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದೆ. ಮಗುವನ್ನು ಗುರಿಯಾಗಿಸಿ ಹಸು ಮೊದಲು ದಾಳಿ ಮಾಡಲು ಪ್ರಯತ್ನಿಸಿದೆ. ಈ ವೇಳೆ ತಾಯಿ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಸು ಆಕೆಯ ಮೇಲೆ ದಾಳಿ ನಡೆಸಿ ತನ್ನ ಕೊಂಬುಗಳಿಂದ ಚಿಮ್ಮಿ ಎಸೆದಿದೆ. 

ಈ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ನೆರೆಹೊರೆಯವರು ಮಹಿಳೆ ಮತ್ತು ಮಗುವಿನ ರಕ್ಷಣೆಗೆ ಮುಂದಾದರು. ಕಟ್ಟಿಗೆ ತೋರಿಸಿ ಹಸುವನ್ನು ಬೆದರಿಸಿ ಓಡಿಸಿದ್ದಾರೆ. ಘಟನೆಯಲ್ಲಿ ಮಹಿಳೆ ಮತ್ತು ಮಗುವಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿಸಿಗರೇಟ್ ಸೇದೋದು ಮಾತ್ರವಲ್ಲ.. ಅದನ್ನು ಕಂಡುಹಿಡಿದವರು ಯಾರು ಅಂತಾನೂ ತಿಳ್ಕೊಂಡಿರಿ! 99% ಜನರಿಗೆ ಉತ್ತರ ಗೊತ್ತಿಲ್ಲ..

ಇತ್ತೀಚೆಗೆ ಚೆನ್ನೈ ಬೀದಿಗಳಲ್ಲಿ ಬೀದಿ ಪ್ರಾಣಿಗಳ ಹಾವಳಿ ಹೆಚ್ಚಾಗಿವೆ. ಆಗಾಗ ಜನರು ಮತ್ತು ಮಕ್ಕಳ ಮೇಲೆ ನಾಯಿಗಳು, ಹಸು, ಎಮ್ಮೆ, ಗೂಳಿಗಳು ದಾಳಿ ನಡೆಸುವ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News