)
Viral Video: ಸೊಂಡಿಲು ತೂತಾದ ಕಾಡಾನೆಯೊಂದು ನೀರು ಕುಡಿಯಲು ಪರದಾಡಿದ ಘಟನೆ ಹನೂರು ತಾಲೂಕಿನ ಪಾಲಾರ್ ರಸ್ತೆಯ ಇಂಡಿ ಬಸಪ್ಪನ ದೇವಸ್ಥಾನದ ಬಳಿ ನಡೆದಿದೆ.
ಇಂಡಿ ಬಸಪ್ಪನ ದೇವಸ್ಥಾನದ ಬಳಿ ನೀರು ಕುಡಿಯಲು ಬಂದ ಕಾಡಾನೆಗೆ ಸೊಂಡಿಲು ಪೆಟ್ಟಾಗಿದ್ದು ನೀರು ಕುಡಿಯಲಾಗದೇ ಪರಿತಪಿಸಿದೆ.
ನೀರು ಕುಡಿಯಲೂ ಕೂಡ ಪರದಾಡುತ್ತಿದ್ದ ಗಜರಾಜನ ಪರಿಸ್ಥಿತಿ ಕಂಡು ಮಮ್ಮಲ ಮರುಗಿರುವ ವಾಹನ ಸವಾರರೊಬ್ಬರು ಮೊಬೈಲ್ ನಲ್ಲಿ ಈದ್ ದೃಶ್ಯವನ್ನು ಸೆರೆ ಹಿಡಿದಿದ್ದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅರಣ್ಯ ಇಲಾಖೆಯು ಆನೆಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನೀರು ಕುಡಿಯಲು ಪರದಾಡುತ್ತಿರುವ ಆನೆಯ ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...