Viral Video: ರಿವರ್ ರಾಫ್ಟಿಂಗ್ ವೇಳೆ ನೀರಿಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ರಿಷಿಕೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಸಾಗರ್ ನೇಗಿ ಎಂದು ಗುರುತಿಸಲಾಗಿದೆ. ರಿವರ್ ರಾಫ್ಟಿಂಗ್ ವೇಳೆ ಆಯತಪ್ಪಿ ಗಂಗಾ ನದಿಯ ನೀರಿಗೆ ಬೀಳುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಗರ್ ತನ್ನ ಸ್ನೇಹಿತರೊಂದಿಗೆ ಡೆಹ್ರಾಡೂನ್‌ನಿಂದ ಪ್ರವಾಸಕ್ಕೆಂದು ರಿಷಿಕೇಶಗೆ ಆಗಮಿಸಿದ್ದ. ಶಿವಪುರಿಯಲ್ಲಿ ಪ್ರಾರಂಭವಾದ ರಿವರ್ ರಾಫ್ಟಿಂಗ್‌ನ ಮಾರ್ಗಮಧ್ಯೆಯೇ ದೋಣಿಯಿಂದ ಆತ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ನೀರಿನ ರಭಸ ಹೆಚ್ಚಿದ್ದ ಕಾರಣ ಆತ ಮತ್ತೆ ದೋಣಿ ಹತ್ತುವಲ್ಲಿ ವಿಫಲನಾಗಿದ್ದಾನೆ. ದೋಣಿಯಲ್ಲಿದ್ದ ಜನರು ಸಹ ಆತನನ್ನು ಕಾಪಾಡಲು ಸಾಧ್ಯವಾಗಿಲ್ಲ. ನೋಡು ನೋಡುತ್ತಿದ್ದಂತೆಯೇ ಸಾಗರ್ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.
राफ्टिंग के शौकीन जरा इस वीडियो को देख लें. ऋषिकेश में एक व्यक्ति राफ्टिंग के दौरान नदी में गिर गया और उसकी मौत हो गई.#rafting #riverrafting #rishikeshrafting pic.twitter.com/1eKSHP8C5T
— Manoj shukla (@manojshukla938) April 18, 2025
ಇದನ್ನೂ ಓದಿ: ಯಾವುದೇ "ಶಾ" ನಿಂದಲೂ ತಮಿಳುನಾಡನ್ನು ಆಳಲು ಸಾಧ್ಯವಿಲ್ಲ : ಸಿಎಂ ಸ್ಟಾಲಿನ್
@manojshukla938 ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಭಸವಾಗಿ ಹರಿಯುತ್ತಿದ್ದ ಗಂಗಾ ನದಿಯಲ್ಲಿ ಸಾಹಸಮಯ ರಿವರ್ ರಾಫ್ಟಿಂಗ್ ನಡೆಯುತ್ತಿತ್ತು. ಈ ವೇಳೆ ಆಯತಪ್ಪಿ ಸಾಗರ್ ನೀರಿನಲ್ಲಿ ಬೀಳುತ್ತಾನೆ. ಈ ವೇಳೆ ಆತನ ಸ್ನೇಹಿತರು ಆತನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಆದರೆ ನೀರಿನ ರಭಸ ಹೆಚ್ಚಿದ್ದ ಕಾರಣ ಸಾಗರ್ ಕೊಚ್ಚಿಕೊಂಡು ಹೋಗಿದ್ದಾನೆ.
ಈ ದುರ್ಘಟನೆ ಸಂಭವಿಸಿದ ಕೆಲವು ಗಂಟೆಗಳ ಬಳಿಕ ಸಾಗರ್ ಮೃತದೇಹವನ್ನು ರಕ್ಷಣಾ ತಂಡವು ನದಿಯಿಂದ ಹೊರ ತರುವುದರಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಹೊಟ್ಟೆ ಹಸಿದಾಗ ಸಿಟ್ಟು ಜಾಸ್ತಿ, ಆತುರದಲ್ಲಿ ಚೇಳನ್ನು ನುಂಗಲು ಹೋದ ನಾಗಪ್ಪ..! ಮುಂದೆನಾಯ್ತು..? ಅಚ್ಚರಿ ವಿಡಿಯೋ ವೈರಲ್
ಘಟನೆಯ ಬಗ್ಗೆ ತಪೋವನ್ ಹೊರಠಾಣೆ ಉಸ್ತುವಾರಿ ಇನ್ಸ್‌ಪೆಕ್ಟರ್ ಪ್ರದೀಪ್ ರಾವತ್ ಮಾತನಾಡಿದ್ದು, ʼಘಟನೆಯ ಬಗ್ಗೆ ನಾವು ತನಿಖೆ ಕೈಗೊಂಡಿದ್ದೇವೆ. ಮರಣೋತ್ತರ ವರದಿಯ ಬಳಿಕ ಸಾವಿನ ನಿಜವಾದ ಕಾರಣ ತಿಳಿಯಲಿದೆ. ರಿವರ್ ರಾಫ್ಟಿಂಗ್ ಸಮಯದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಪ್ರವಾಸಿರಿಗೆ ಸೂಚನೆ ನೀಡಲಾಗಿದೆʼ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









