What Happens After Death: ಅಮೆರಿಕದ ಮಹಿಳೆಯೊಬ್ಬರು ತನ್ನ ಬದುಕಿನಲ್ಲಿ ಆದ ಆಘಾತಕಾರಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಪ್ರಪಂಚದಾದ್ಯಂತ ಜನರನ್ನು ಯೋಚನೆಗೆ ದೂಡುವಂತೆ ಮಾಡಿದೆ. ಕೊಲೊರಾಡೋ ನಿವಾಸಿ ಬ್ರಿಯಾನ್ನಾ ಲಾಫರ್ಟಿ, ಮಯೋಕ್ಲೋನಸ್ ಡಿಸ್ಟೋನಿಯಾ ಎಂಬ ಅಪಾಯಕಾರಿ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಮಯದಲ್ಲಿ ಒಂದು ಹಂತದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಕೂಡ ಘೋಷಿಸಲಾಯಿತು. ಸುಮಾರು 8 ನಿಮಿಷಗಳ ಕಾಲ ಅವರು ಸತ್ತರು ಎಂದೇ ಹೇಳಲಾಗಿತ್ತು.
ಆ 8 ನಿಮಿಷಗಳ ಕಾಲ ತಾನು ಅನುಭವಿಸಿದ ಅನುಭವವನ್ನು ಬ್ರಿಯಾನ್ನಾ ಹಂಚಿಕೊಂಡಿದ್ದಾರೆ. 8 ನಿಮಿಷಗಳವರೆಗೆ ತನ್ನ ದೇಹವು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದಾಗ, ಇದ್ದಕ್ಕಿದ್ದಂತೆ ತನ್ನ ಆತ್ಮವು ತನ್ನ ದೇಹ ಬಿಟ್ಟು ಮೇಲೇರುತ್ತಿರುವಂತೆ ಭಾಸವಾಯಿತು ಎಂದು ಬ್ರಿಯಾನ್ನಾ ಹೇಳಿದರು."ನೀವು ಸಿದ್ಧರಿದ್ದೀರಾ?"ಎನ್ನುವ ಧ್ವನಿ ತನಗೆ ಕೇಳಿಸಿತು, ನಂತರ ಎಲ್ಲವೂ ಕತ್ತಲೆಯಾಯಿತು ಎಂದು ಅವರು ಹೇಳಿದ್ದಾರೆ. ವೈದ್ಯರು ಆ ಯುವತಿ ಮೃತ ಎಂದು ಘೋಷಿಸಿದರೂ, ಆಕೆಯ ಆತ್ಮ ಜೀವಂತವಾಗಿತ್ತು ಎನ್ನುವುದು ಯುವತಿಯ ಮಾತು.
"ಸಾವು ಒಂದು ಭ್ರಮೆ, ಆತ್ಮ ಎಂದಿಗೂ ಸಾಯುವುದಿಲ್ಲ. ನಮ್ಮ ಆತ್ಮ ಯಾವಾಗಲೂ ಜೀವಂತವಾಗಿರುತ್ತದೆ. ನಮ್ಮ ನಿಜವಾದ ಗುರುತು ಒಂದು ರೂಪದಿಂದ ಇನ್ನೊಂದಕ್ಕೆ ಬದಲಾಗುತ್ತದೆ" ಆ ಇನ್ನೊಂದು ಜಗತ್ತನ್ನು ತಲುಪಿದ ತಕ್ಷಣ, ಚಿಂತನೆಯ ಶಕ್ತಿಯು ಅಲ್ಲಿರುವ ಎಲ್ಲವನ್ನೂ ಬದಲಾಯಿಸಬಹುದು ಎನ್ನುವುದನ್ನು ತಾನು ಆ ಸಂದರ್ಭದಲ್ಲಿ ಅರಿತುಕೊಂಡೆ ಎಂದು ಯುವತಿ ಹೇಳಿದ್ದಾರೆ. ಯುವತಿಯ ಪ್ರಕಾರ "ಅಲ್ಲಿ ಸಮಯ ಎಂಬುದೇ ಇರಲಿಲ್ಲ, ಎಲ್ಲವೂ ಒಂದು ಕ್ರಮದಲ್ಲಿತ್ತು."
ಅಲ್ಲಿಗೆ ತಲುಪಿದ ನಂತರ, ತನ್ನ ಮಾನವ ರೂಪವನ್ನು ನೋಡಲಿಲ್ಲ ಅಥವಾ ಯಾವುದೇ ನೋವನ್ನು ಅನುಭವಿಸಲಿಲ್ಲ ಎಂದು ಬ್ರಿಯಾನ್ನಾ ಹೇಳಿದರು. ಬದಲಾಗಿ, ಅವಳು ಆಳವಾದ ಶಾಂತಿ ಮತ್ತು ಸ್ಪಷ್ಟತೆಯನ್ನು ಅನುಭವಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. "ನಾನು ಸಂಪೂರ್ಣವಾಗಿ ಶಾಂತವಾಗಿದ್ದೆ ಎಂದು ಹೇಳಿದರು. ಅವರ ಪ್ರಕಾರ, "ಅಲ್ಲಿ ಒಂದು ದೈವಿಕ ಶಕ್ತಿ ಇತ್ತು. ಅದು ಎಲ್ಲರನ್ನೂ ನಿಷ್ಕಲ್ಮಶ ಪ್ರೀತಿಯನ್ನು ನೀಡುತ್ತಿತ್ತು.
ಇದನ್ನೂ ಓದಿ : Watch: ಬಿಸಿಲಿನ ಬೇಗೆಗೆ ದಣಿದಿದ್ದ ನಾಗರಹಾವಿಗೆ ಬಾಟಲಿಯಲ್ಲಿ ನೀರುಣಿಸಿದ ವ್ಯಕ್ತಿ, ವಿಡಿಯೋ ವೈರಲ್
ವಿಜ್ಞಾನವು ಅಂತಹ ಸಾವಿನ ಸಮೀಪ ಅನುಭವಗಳನ್ನು (NDE) ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಒಂದು ಸಂಶೋಧನೆಯ ಪ್ರಕಾರ, ನಾವು ಸಾವಿನ ಸಮೀಪದಲ್ಲಿರುವಾಗ, ನಮ್ಮ ಮೆದುಳು ನಮ್ಮ ಜೀವನದ ವಿಶೇಷ ಕ್ಷಣಗಳನ್ನು ಪುನರಾವರ್ತಿಸುತ್ತದೆ. ಇತ್ತೀಚೆಗೆ, ಕ್ಯಾಲ್ಗರಿ ವಿಶ್ವವಿದ್ಯಾಲಯದ (ಕೆನಡಾ) ವಿಜ್ಞಾನಿಗಳು ಜೀವಿಗಳು ತಮ್ಮ ಜೀವಿತಾವಧಿಯಲ್ಲಿ ಬಹಳ ಹಗುರವಾದ ಹೊಳಪನ್ನು ಹೊರಸೂಸುತ್ತವೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ಅಲ್ಟ್ರಾ ವೀಕ್ ಫೋಟಾನ್ ಎಮಿಷನ್ (UPE) ಎಂದು ಕರೆಯಲಾಗುತ್ತದೆ. ಈ ಹೊಳಪು ಸಾವಿನೊಂದಿಗೆ ಕೊನೆಗೊಳ್ಳುತ್ತದೆ. ಇದರರ್ಥ ಕೆಲವು ಅದ್ಭುತ ವಿಜ್ಞಾನವು ಜೀವನ ಮತ್ತು ಸಾವಿನ ನಡುವೆ ಅಡಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ