Malaika Arora: ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಯುವಕನೊಬ್ಬನ ವರ್ತನೆಗೆ ನಟಿ ಮಲೈಕಾ ಅರೋರಾ ಪ್ರತಿಕ್ರಿಯೆಯ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Malaika Arora Viral Video: ಬಾಲಿವುಡ್ ಚಿತ್ರರಂಗದಲ್ಲಿ ಹಲವು ಹಾಟ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಯಸ್ಸು 50 ದಾಟಿದರೂ ತಮ್ಮ ಫಿಟ್ನೆಸ್, ಆಕರ್ಷಕ ಲುಕ್ ವಿಷಯದಲ್ಲಿ ಯುವತಿಯರನ್ನೂ ಹಿಂದಿಕ್ಕುವ ಹಾಟ್ ಬ್ಯೂಟಿ ಮಲೈಕಾ ಅರೋರಾ. ನಿಪುಣ ನಟಿ, ಅದ್ಭುತ ನರ್ತಕಿಯಾಗಿ ಎಲ್ಲರ ಮನಸೆಳೆಯುವ ನಟಿ ಸದ್ಯ 'ಹಿಪ್ ಹಾಫ್ ಇಂಡಿಯಾ' ಡ್ಯಾನ್ಸ್ ರಿಯಾಲಿಟಿ ಶೋನ ಎರಡನೇ ಸೀಸನ್ನಲ್ಲಿ ಜಡ್ಜ್ ಆಗಿದ್ದಾರೆ. ಇದೀಗ ಇದರದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹಾಟ್ ಮಲೈಕಾಗೆ 16ರ ಹರೆಯದ ಬಾಲಕನಿಂದ ಅಶ್ಲೀಲ ಸನ್ನೆ...
ವಾಸ್ತವವಾಗಿ, 'ಹಿಪ್ ಹಾಫ್ ಇಂಡಿಯಾ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ 16 ವರ್ಷದ ಹುಡುಗನೊಬ್ಬ ಡ್ಯಾನ್ಸ್ ಮಾಡುತ್ತಿದ್ದ ವೇಳೆ ನಟಿ ಮಲೈಕಾ ಅರೋರಾ ಕಡೆ ನೋಡಿ ಅಶ್ಲೀಲವಾಗಿ ಸನ್ನೆ ಮಾಡಿದ್ದು ನಟಿಯ ಪಿತ್ತ ನೆಟ್ಟಿಗೇರುವಂತೆ ಮಾಡಿದೆ. ಈ ಸಂದರ್ಭದಲ್ಲಿ ಮಲೈಕಾ ಅರೋರಾರ ಪ್ರತಿಕ್ರಿಯೆಯ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ 16 ವರ್ಷದ ಹುಡುಗ ನಟಿಯನ್ನು ಕಂಡು 'ವಾವ್' ಎನ್ನುತ್ತಾ ಕಣ್ಣು ಹೊಡೆದು ಫ್ಲೈಯಿಂಗ್ ಕಿಸ್ ನೀಡಿದ್ದಾನೆ. ಆತನ ವರ್ತನೆಗೆ ಬೇಸರ ವ್ಯಕ್ತಪಡಿಸಿರುವ ನಟಿ, ನೇರವಾಗಿ ನಿನ್ನ ತಾಯಿಯ ನಂಬರ್ ಕೊಡು ಎಂದು ಕೇಳಿದ್ದಾರೆ. ಅವನು ಏಕೆ ಎಂದು ಕೇಳಿದಾಗ, "16 ವರ್ಷದ ಹುಡುಗ ಡ್ಯಾನ್ಸ್ ಮಾಡುತ್ತಾ ನೇರವಾಗಿ ನನ್ನನ್ನು ಕಂಡು ವಾವ್ ಎನ್ನುತ್ತಾ ಕಣ್ಣುಮಿಟುಕಿಸಿ ಫ್ಲೈಯಿಂಗ್ ಕಿಸ್ ನೀಡುತ್ತಾನೆ". ಇದು ಸರಿಯಲ್ಲ ಎಂಬರ್ಥದಲ್ಲಿ ವಿವರಿಸುತ್ತಿರುವಾಗ ಹುಡುಗ ತಲೆ ತಗ್ಗಿಸಿ ನಿಲ್ಲುತ್ತಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಇನ್ನೂ ಕಾರ್ಯಕ್ರಮದ ಗೆಸ್ಟ್ ಆಗಿರುವ ಮಲೈಕಾ ಅರೋರ ಅವರ ಈ ಪ್ರತಿಕ್ರಿಯೆಯನ್ನು ಕೆಲವರು ಸಪೋರ್ಟ್ ಮಾಡಿದ್ದು, "ನಟಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಲೈಕಾ ಅರೋರ ಅವನ ತಾಯಿಗಿಂತ ದೊಡ್ಡವರಿರಬಹುದು. ಅವರೋದ್ಣಿಗೆ ಈ ರೀತಿಯ ಅಸಭ್ಯ ವರ್ತನೆ ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಬರೆದಿದ್ದಾರೆ.
ಮತ್ತೊರ್ವ ಸೋಷಿಯಲ್ ಮೀಡಿಯಾ ಬಳಕೆದಾರ, "ಮಲೈಕಾ ಸ್ವತಃ ತನ್ನ ಮಗನ ಕನ್ಯತ್ವದ ಬಗ್ಗೆ ಮಾತನಾಡುತ್ತಾಳೆ. ಇಲ್ಲಿ 16 ವರ್ಷದ ಹುಡುಗನೊಂದಿಗೆ ದೌರ್ಜನ್ಯ ಮೆರೆಯುತ್ತಿದ್ದಾಳೆ ಎಂದು" ಕಾಮೆಂಟ್ ಮಾಡಿದ್ದಾರೆ.
ವಾಸ್ತವವಾಗಿ, ಇತ್ತೀಚೆಗೆ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ್ದ ಮಲೈಕಾ ಅರೋರಾ, ತಮ್ಮ ಮಗ ಅರ್ಹಾನ್ ಖಾನ್ನ ಕನ್ಯತ್ವದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಿದ್ದರು. ಇನ್ನೂ ಈ ಘಟನೆಯು ಮಲೈಕಾ ಅರೋರಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಚರ್ಚೆಯನ್ನು ಹುಟ್ಟುಹಾಕಿದ್ದು ಟ್ರೋಲ್ ಗೆ ಕಾರಣವಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.