ಹಣ ಕಾಸು ಯಾಕೆ ನಾಳೆ ಮಣ್ಣಾಗಿ ಹೋಗೋಕೆ..? ಅಂತ ಬಡವನ ಪ್ರೀತಿಗೆ ಸೋತು ಭಾರತದ ಹಳ್ಳಿ ಹುಡುಗನಿಗಾಗಿ ಅಮೇರಿಕಾದಿಂದ ಬಂದ ಯುವತಿ

Love story:ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಡೇಟಿಂಗ್ ಆ್ಯಪ್‌ಗಳಲ್ಲಿ ಪರಸ್ಪರ ಸ್ನೇಹಿತರಾಗುವುದನ್ನು ಮತ್ತು ನಂತರ ಪ್ರೀತಿಯಲ್ಲಿ ಬೀಳುವುದನ್ನು ಅಥವಾ ಮದುವೆಯಾಗುವುದನ್ನು ನೀವು ಕೇಳಿರಬಹುದು. ಇಷ್ಟು ಮಾತ್ರವಲ್ಲದೆ, ಅನೇಕ ಜೋಡಿಗಳು ಅನೇಕ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿಯೂ ಭೇಟಿಯಾಗಿ ಡೇಟಿಂಗ್‌ ಮಾಡುತ್ತಾರೆ.  ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾದ ಜೋಡಿಗಳು ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.   

Written by - Zee Kannada News Desk | Last Updated : Apr 9, 2025, 07:10 PM IST
  • ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾದ ಜೋಡಿಗಳು ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
  • ಒಬ್ಬ ಅಮೇರಿಕನ್ ಹುಡುಗಿ ಭಾರತದ ಒಂದು ಸಣ್ಣ ಹಳ್ಳಿಯ ಯುವಕನ ಪ್ರೀತಿಯಲ್ಲಿ ಬಿದ್ದು ಆತನನು ಬೇಟಿಯಾಗಲು ಭಾರತಕ್ಕೆ ಬಂದಿದ್ದಾಳೆ.
  • ಕಾಮೆಂಟ್‌ಗಳಲ್ಲಿ, ಜಾಕ್ವೆಲಿನ್ ತನ್ನ ಭಾರತೀಯ ಸಂಗಾತಿ ಚಂದನ್ ಗಿಂತ 9 ವರ್ಷ ದೊಡ್ಡವಳು ಎಂದು ಹೇಳಿಕೊಂಡಿದ್ದಾಳೆ.
ಹಣ ಕಾಸು ಯಾಕೆ ನಾಳೆ ಮಣ್ಣಾಗಿ ಹೋಗೋಕೆ..? ಅಂತ ಬಡವನ ಪ್ರೀತಿಗೆ ಸೋತು ಭಾರತದ ಹಳ್ಳಿ ಹುಡುಗನಿಗಾಗಿ ಅಮೇರಿಕಾದಿಂದ ಬಂದ ಯುವತಿ

Love story:ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಡೇಟಿಂಗ್ ಆ್ಯಪ್‌ಗಳಲ್ಲಿ ಪರಸ್ಪರ ಸ್ನೇಹಿತರಾಗುವುದನ್ನು ಮತ್ತು ನಂತರ ಪ್ರೀತಿಯಲ್ಲಿ ಬೀಳುವುದನ್ನು ಅಥವಾ ಮದುವೆಯಾಗುವುದನ್ನು ನೀವು ಕೇಳಿರಬಹುದು. ಇಷ್ಟು ಮಾತ್ರವಲ್ಲದೆ, ಅನೇಕ ಜೋಡಿಗಳು ಅನೇಕ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿಯೂ ಭೇಟಿಯಾಗಿ ಡೇಟಿಂಗ್‌ ಮಾಡುತ್ತಾರೆ.  ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾದ ಜೋಡಿಗಳು ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. 

Add Zee News as a Preferred Source

ಒಬ್ಬ ಅಮೇರಿಕನ್ ಹುಡುಗಿ ಭಾರತದ ಒಂದು ಸಣ್ಣ ಹಳ್ಳಿಯ ಯುವಕನ ಪ್ರೀತಿಯಲ್ಲಿ ಬಿದ್ದು ಆತನನು ಬೇಟಿಯಾಗಲು ಭಾರತಕ್ಕೆ ಬಂದಿದ್ದಾಳೆ. ಈ ಅಮೇರಿಕನ್ ಹುಡುಗಿ ಈ ಯುವಕನಿಗಿಂತ 9 ವರ್ಷ ದೊಡ್ಡವಳು. ಆದರೆ ಇನ್ನೂ, ಪ್ರೀತಿಗಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂದು ನಂಬುತ್ತಾ, ಈ ಯುವತಿ ಭಾರತದ ಆಂಧ್ರಪ್ರದೇಶದಲ್ಲಿ ವಾಸಿಸುವ ತನ್ನ ಗೆಳೆಯನನ್ನು ಭೇಟಿಯಾಗಲು  ಸಾವಿರಾರು ಮೈಲುಗಳಿಂದ ಬಂದಿದ್ದಾರೆ. ಅಷ್ಟೇ ಅಲ್ಲ, ಅವರು ಮದುವೆಯಾಗಲು ಸಹ ನಿರ್ಧರಿಸಿದ್ದಾರೆ. 

ಇದನ್ನೂ ಓದಿ: ಕಾರ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆ ಖುಲ್ಲಂ ಖುಲ್ಲಾ; ಹೊರಬಂದ ಸ್ನೇಹಿತೆ ಅನುಭವ ಕೇಳಿದ ಯುವತಿ! ವಿಡಿಯೋ ವೈರಲ್

ಸದ್ಯ ಈ ಜೋಡಿಯನ್ನು ನೋಡಿದ ನೆಟ್ಟಿಗರು ನಮಗೆ ನಮ್ಮ ಗಲ್ಲಿಯಲ್ಲಿರುವ ಹುಡುಗಿಯರೇ ಬೀಳ್ತಾ ಇಲ್ವಲ್ಲ ಗುರು ಎಂದು ಹೊಟ್ಟೆ ಉರಿಸಿಕೊಳ್ಳುತ್ತಿದ್ದಾರೆ. ಇನ್ನೂ, ಈ ಜೋಡಿಯನ್ನು ನೋಡಿದ ಹಲವು ಇವರು ಬೇಟಿಯಾಗಿದ್ದು ಎಲ್ಲಿ, ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದಾದರೂ ಹೇಗೆ ಎಂಬ ಚರ್ಚೆಗಳನ್ನು ನಡೆಸುತ್ತಿದ್ದಾರೆ. 

"ಒಟ್ಟಿಗೆ 14 ತಿಂಗಳುಗಳು ಮತ್ತು ಈಗ ದೊಡ್ಡ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧವಾಗಿದ್ದೇವೆ" ಎಂದು ಅಮೇರಿಕನ್‌ ಹುಡುಗಿ ಅವರು ತಮ್ಮ ಪ್ರೇಮಕಥೆಯ ಒಂದು ನೋಟವನ್ನು ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಾಮೆಂಟ್‌ಗಳಲ್ಲಿ, ಜಾಕ್ವೆಲಿನ್ ತನ್ನ ಭಾರತೀಯ ಸಂಗಾತಿ ಚಂದನ್ ಗಿಂತ 9 ವರ್ಷ ದೊಡ್ಡವಳು ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಲಂಡನ್ ನಲ್ಲಿರುವ ಟೆಸ್ಲಾ ಕಾರಿಗೆ ಹುಬ್ಬಳ್ಳಿ ನಂಬರ್ ಪ್ಲೇಟ್..! ಫೋಟೋ ವೈರಲ್

ವೀಡಿಯೊದಲ್ಲಿ, ಜಾಕ್ವೆಲಿನ್ ಮತ್ತು ಚಂದನ್ ಅವರ ಸಂಭಾಷಣೆ ಇನ್ಸ್ಟಾಗ್ರಾಮ್ನಲ್ಲಿ ಪ್ರಾರಂಭವಾಗಿದ್ದು, ಎಂದು ತಿಳಿದು ಬಂದಿದೆ. ವೀಡಿಯೊ ಕರೆಯಲ್ಲಿ ಮಾತನಾಡಲು ಪ್ರಾರಂಭಿಸಿ, ತಮ್ಮ ಪ್ರೀತಿಗೆ ಮುನ್ನುಡಿ ಬರೆದರು ಎಂಬುದನ್ನು ಈ ವಿಡಿಯೋದ ತುಣುಕಿನಲ್ಲಿ ತೋರಿಸಿಕೊಡಲಾಗಿದೆ. ಒಬ್ಬ ಬಳಕೆದಾರರು ಬರೆದಿದ್ದಾರೆ, "ನಮ್ಮ ಕಥೆಯೂ ಇದೇ ರೀತಿ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾದ 7 ತಿಂಗಳ ನಂತರ ನಾನು ಮದುವೆಯಾಗಲು ಭಾರತಕ್ಕೆ ತೆರಳಿದೆ. ಈಗ 3.5 ವರ್ಷಗಳಾಗಿವೆ ಮತ್ತು ಅವರು ಕಳೆದ ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ಬಂದರು. ಈ ಪ್ರಯಾಣ ಕಷ್ಟಕರವಾಗಿತ್ತು, ಆದರೆ ತುಂಬಾ ಸುಂದರವಾಗಿದೆ." ಎಂದಿದ್ದಾರೆ. 

ಜಾಕ್ವೆಲಿನ್ ಮತ್ತು ಚಂದನ್ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ."ಪ್ರೀತಿಯನ್ನು ಹುಡುಕುತ್ತಿರುವ ವಿಚ್ಛೇದಿತ ಕ್ರಿಶ್ಚಿಯನ್ ತಾಯಿ, ಆಂಧ್ರಪ್ರದೇಶದ ಹಳ್ಳಿಯ ಚಂದನ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾಗುತ್ತಾರೆ. ವಯಸ್ಸು, ಸಂಸ್ಕೃತಿ, ಜನಾಂಗ ಮತ್ತು ಹಣದ ಬಂಧಗಳನ್ನು ಮುರಿದು, ಜಾಕ್ವೆಲಿನ್ ಮತ್ತು ಚಂದನ್ ಅವರ ಕಥೆಯು ಪ್ರಪಂಚದ ದೃಷ್ಟಿಯಲ್ಲಿ ಏನೂ ಇಲ್ಲದವನು ಸಹ ಎಲ್ಲವನ್ನೂ ನೀಡಬಲ್ಲನೆಂದು ತೋರಿಸುತ್ತದೆ. ಜಾಕ್ವೆಲಿನ್ ಯೇಸುವನ್ನು ನಂಬುವ ವ್ಯಕ್ತಿಯನ್ನು ಬಯಸಿದ್ದರು, ಮತ್ತು ಚಂದನ್ ಆ ವ್ಯಕ್ತಿ" ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಮೊಟ್ಟೆಯಿಂದ ಹೊರ ಬಂದ ಬೇಬಿ ಕೊಬ್ರಾ..! ಅತ್ಯಂತ ವಿಷಕಾರಿ ಹಾವಿನ ಜನನದ ವಿಡಿಯೋ ವೈರಲ್‌..

 
 
 
 

 
 
 
 
 
 
 
 
 
 
 

A post shared by ? (@chandhan_singh_rajput_)

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News