Baba Vanga Predicts Myanmar Earthquake: ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ಕಾಲಾನಂತರದಲ್ಲಿ ನಿಜವೆಂದು ಸಾಬೀತಾಗಿದೆ. ಮಾರ್ಚ್ 28 ರಂದು ಮಧ್ಯಾಹ್ನ 1 ಗಂಟೆಗೆ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ ಬಾಬಾ ವಂಗಾ ಪ್ರಪಂಚದಾದ್ಯಂತ ಟ್ರೆಂಡಿಂಗ್ ಆಗಿದ್ದಾರೆ. ಬಾಬಾ ವಂಗಾ 2025 ರ ವರ್ಷಕ್ಕೆ ಹಲವು ಭವಿಷ್ಯವಾಣಿಗಳನ್ನು ನೀಡಿದ್ದರು. ಅವುಗಳಲ್ಲಿ ಭೂಕಂಪದ ಬಗ್ಗೆ ಹೇಳಲಾದ ಭವಿಷ್ಯವಾಣಿಯು ಕಾಲಾನಂತರದಲ್ಲಿ ಸಂಪೂರ್ಣವಾಗಿ ನಿಜವೆಂದು ಸಾಬೀತಾಯಿತು.
ಇದನ್ನೂ ಓದಿ: ಹಬ್ಬಕ್ಕೂ ಮುನ್ನ ದಿಢೀರ್ ಕುಸಿದ ಚಿನ್ನದ ಬೆಲೆ! ಆಭರಣ ಪ್ರಿಯರಿಗೆ ಇದಕ್ಕಿಂತ ಸಂತಸದ ಸಮಯ ಮತ್ತೊಂದಿಲ್ಲ..
ಇದಕ್ಕೂ ಮೊದಲು, ಬಾಬಾ ವಂಗಾ ಅವರ ನಿಖರವಾದ ಭವಿಷ್ಯವಾಣಿಗಳ ಬಗ್ಗೆ ಮಾತನಾಡಿದರೆ, ಬಾಬಾ ವಂಗಾ ಅವರು 9/11 ಭಯೋತ್ಪಾದಕ ದಾಳಿ ಮತ್ತು ಕೊರೊನಾ ಸಾಂಕ್ರಾಮಿಕದಂತಹ ಘಟನೆಗಳನ್ನು ಮೊದಲೇ ಊಹಿಸಿದ್ದರು. ನಾಸ್ಟ್ರಾಡಾಮಸ್‌ನ ಪುಸ್ತಕಗಳಲ್ಲಿಯೂ ಸಹ ಇಂತಹ ಅನೇಕ ವಿಷಯಗಳನ್ನು ಬರೆಯಲಾಗಿದೆ. ಈಗ, ಎದ್ದಿರುವ ಪ್ರಶ್ನೆಗಳ ಜೊತೆಗೆ, ಬಾಬಾ ವಂಗಾ ಅವರ 2025 ರ ಉಳಿದ ಭವಿಷ್ಯವಾಣಿಗಳು ನಿಜವಾಗದಿದ್ದರೆ ಸಾಕು ಎಂದು ಕೆಲವರು ಭಯಪಡುತ್ತಿದ್ದಾರೆ.
ಈ ಮಧ್ಯೆ ಮುಂಬರುವ ವರ್ಷಗಳ ಕುರಿತು ಬಾಬಾ ವಂಗಾ ಅವರು ಹೇಳಿದ ಅನೇಕ ಭವಿಷ್ಯವಾಣಿಗಳು ಬೆಳಕಿಗೆ ಬರುತ್ತಿವೆ. ಅಂದಹಾಗೆ ಬಾಬಾ ವಂಗಾಗೆ ಕಣ್ಣು ಕಾಣಿಸುವುದಿಲ್ಲ. ಆದರೆ ಅವರ ಹಲವು ಭವಿಷ್ಯವಾಣಿಗಳು ಸಂಪೂರ್ಣವಾಗಿ ನಿಖರವಾಗಿವೆ. ೨೦೨೫ ರಲ್ಲಿ ಜಗತ್ತಿನ ಅಂತ್ಯ ಆರಂಭವಾಗಲಿದೆ ಎಂದು ಅವರು ಹೇಳಿಕೊಂಡಿದ್ದರು.
2025 ರಲ್ಲಿ ವಿಶ್ವದ ಅನೇಕ ದೇಶಗಳು ವಿನಾಶಕಾರಿ ಭೂಕಂಪಗಳನ್ನು ಎದುರಿಸುತ್ತವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದರಿಂದಾಗಿ ಎಲ್ಲೆಡೆ ವ್ಯಾಪಕ ವಿನಾಶ ಉಂಟಾಗುತ್ತದೆ. ಅಪಾರ ಜೀವ ಮತ್ತು ಆಸ್ತಿ ನಷ್ಟವಾಗಲಿದೆ ಎಂದು ಹೇಳಿದ್ದರು. ಇದೀಗ ಪ್ರಸ್ತುತ ಘಟನೆ ಮತ್ತು ಭವಿಷ್ಯವಾಣಿಯನ್ನು ತಾಳೆ ಹಾಕಿ ನೋಡಿದರೆ, ನಿಜ ಅನಿಸುತ್ತಿದೆ. ಭೂಕಂಪದಿಂದಾಗಿ "ಮನೆಗಳು ನಾಶವಾಗುತ್ತವೆ. ಇದರಿಂದಾಗಿ, ಹೆಚ್ಚಿನ ಸಂಖ್ಯೆಯ ಜನರು ಸ್ಥಳಾಂತರದ ನೋವನ್ನು ಅನುಭವಿಸಬೇಕಾಗುತ್ತದೆ. 2025 ರಲ್ಲಿ, ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಭೂಕಂಪಗಳು ಸಂಭವಿಸುತ್ತವೆ. ಒಂದೆಡೆ, ಇದು ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯನ್ನುಂಟುಮಾಡುತ್ತದೆ. ಮತ್ತೊಂದೆಡೆ, ಹೆಚ್ಚಿನ ಸಂಖ್ಯೆಯ ಜನರು ಸಾಯುತ್ತಾರೆ" ಎಂದಿದ್ದರು.
ಹಾಗಾದ್ರೆ ಬಾಬಾ ವಂಗಾ ಅವರ ಭವಿಷ್ಯವಾಣಿ ನಿಜವಾಗುವ ಸಮಯ ಬಂದಿದೆಯೇ? ಎಂಬುದು ಸದ್ಯದ ಪ್ರಶ್ನೆ. ಕಳೆದ ಮೂರು ತಿಂಗಳಿನಿಂದ ಭಾರತದಲ್ಲಿ ಭೂಮಿಯು ನಿರಂತರವಾಗಿ ಕಂಪಿಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ದೆಹಲಿ-ಎನ್‌ಸಿಆರ್ (ನೋಯ್ಡಾ-ಘಾಜಿಯಾಬಾದ್-ಫರಿದಾಬಾದ್-ಗುರುಗ್ರಾಮ್) ವರೆಗೆ ಭೂಮಿ ಕಂಪಿಸಿದೆ. ಒಮ್ಮೆ ಭೂಕಂಪದ ಕೇಂದ್ರಬಿಂದು ದೆಹಲಿಯ ಧೌಲಾ ಕುವಾನ್‌ನಲ್ಲಿತ್ತು. ಈಶಾನ್ಯದಲ್ಲಿ ಬಿಹಾರ, ಬಂಗಾಳ ಮತ್ತು ಅಸ್ಸಾಂನಲ್ಲಿಯೂ ಭೂಕಂಪನದ ಅನುಭವವಾಗಿತ್ತು. ಇದಲ್ಲದೆ, ಏಷ್ಯಾ ಸೇರಿದಂತೆ ಹಲವು ಖಂಡಗಳ ದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.\
ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭಾರಿ ಭೂಕಂಪವಾಗಿದ್ದು, ಎಲ್ಲೆಡೆ ವಿನಾಶದ ದೃಶ್ಯವಿದೆ. ನೂರಾರು ಕಟ್ಟಡಗಳು ಕುಸಿದಿವೆ. ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ ಹೆದ್ದಾರಿಗಳು ಹಾನಿಗೊಳಗಾಗಿವೆ. ರಸ್ತೆಗಳಲ್ಲಿ ಬಿರುಕುಗಳು ಬಿದ್ದಿವೆ. ಅಂತಹ ಪರಿಸ್ಥಿತಿಯಲ್ಲಿ, ಬಾಬಾರ ಇನ್ನೊಂದು ಭವಿಷ್ಯವಾಣಿಯು ನಿಜವಾಗಿದ್ದು, ಮುಂದೆ ಏನೇನು ಅವಘಡ ಕಾದಿದೆಯೋ ಎಂಬ ಭಯ ಕಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









