Baba vanga predictions: ಮೂರನೇ ಮಹಾಮುದ್ದದ ಮಹಾ ಸೂಚನೆ.. ಬಾಬಾ ವಂಗಾ ನುಡಿದಿರುವ ಭವಿಷ್ಯ ನಿಜವಾಗುವ ಮುನ್ಸೂಚನೆ ಸಿಕ್ಕಾಯ್ತು! ಮುಂದೆ ಕತೆಯೇನು..?

ಅವರ

Written by - Zee Kannada News Desk | Last Updated : May 3, 2025, 10:59 AM IST
  • ಬಾಬಾ ವಂಗಾ ತಮ್ಮ ಜೀವಿತಾವಧಿಯಲ್ಲಿ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದರು.
  • ಬಾಬಾ ವೆಂಗಾ ಅವರು 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿ, 1996 ರಲ್ಲಿ ನಿಧನರಾದರು.
  • ಬಾಬಾ ವಂಗಾ ಮೂರನೇ ಮಹಾಯುದ್ಧದ ಬಗ್ಗೆ ಒಂದು ದೊಡ್ಡ ಭವಿಷ್ಯ ನುಡಿದಿದ್ದಾರೆ.
Baba vanga predictions: ಮೂರನೇ ಮಹಾಮುದ್ದದ ಮಹಾ ಸೂಚನೆ.. ಬಾಬಾ ವಂಗಾ ನುಡಿದಿರುವ ಭವಿಷ್ಯ ನಿಜವಾಗುವ ಮುನ್ಸೂಚನೆ ಸಿಕ್ಕಾಯ್ತು! ಮುಂದೆ ಕತೆಯೇನು..?

baba vanga predictions: ಬಾಬಾ ವಂಗಾ ತಮ್ಮ ಜೀವಿತಾವಧಿಯಲ್ಲಿ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದರು, ಅವುಗಳಲ್ಲಿ ಸಾಕಷ್ಟು ನಿಜವಾಗಿವೆ, ಅದಕ್ಕಾಗಿಯೇ ಅನೇಕ ಜನರು ಬಾಬಾ ವೆಂಗಾ ಅವರ ಭವಿಷ್ಯವಾಣಿಗಳ ಬಗ್ಗೆ ಕುತೂಹಲ ಹೊಂದಿದ್ದಾರೆ. ಬಾಬಾ ವಂಗಾ ಅವರು ಮೂರನೇ ಮಹಾಯುದ್ಧದ ಬಗ್ಗೆ ಒಂದು ದೊಡ್ಡ ಭವಿಷ್ಯ ನುಡಿದಿದ್ದರು, ಸದ್ಯ ಈ ಭವಿಷ್ಯ ಸಾಮಾನ್ಯ ಜನರಲ್ಲಿ ಆತಂಕ ಹೆಚ್ಚಿಸಿದೆ.

Add Zee News as a Preferred Source

ವಿಶ್ವಪ್ರಸಿದ್ಧ ಭವಿಷ್ಯ ಹೇಳುವವರ ಬಗ್ಗೆ ಚರ್ಚಿಸಿದಾಗಲೆಲ್ಲಾ. ಅವರಲ್ಲಿ ಬಾಬಾ ವೆಂಗಾ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ, ಬಾಬಾ ವೆಂಗಾ ಅವರು 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿ, 1996 ರಲ್ಲಿ ನಿಧನರಾದರು. ಆದರೆ, ಸಾಯುವ ಮುನ್ನ ಬಾಬಾ ವಂಗಾ, ತಮ್ಮ ಜೀವಿತಾವಧಿಯಲ್ಲಿ ಅನೇಕ ಪ್ರಮುಖ ಭವಿಷ್ಯವಾಣಿಗಳನ್ನು ನುಡಿದಿದ್ದರು, ಅವುಗಳಲ್ಲಿ ಕೆಲವು ನಿಜವಾಗಿವೆ ಎಂದು ಬಾಬಾ ವಂಗಾ ಅವರ ಬೆಂಬಲಿಗರು ಹೇಳಿಕೊಳ್ಳುತ್ತಾರೆ. ಬಾಬಾ ವಂಗಾ ಅವರು ಬಿರುಗಾಳಿಗೆ ಸಿಲುಕಿ ತಮ್ಮ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡರು ಎಂದು ಹೇಳಲಾಗುತ್ತದೆ. ನಂತರ ಅವರಿ ದೈವಿಕ ಜ್ಞಾನ ಪ್ರಾಪ್ತಿಯಾಯಿತು ಎಂದು ಹೇಳಲಾಗುತ್ತದೆ. ಬಾಬಾ ವೆಂಗಾ ತಮ್ಮ ಜೀವನದಲ್ಲಿ ಅನೇಕ ಉತ್ತಮ ಭವಿಷ್ಯವಾಣಿಗಳನ್ನು ನುಡಿದಿದ್ದು, ಈ ನಡುವೆ, ಅವರ ಮತ್ತೊಂದು ದೊಡ್ಡ ಭವಿಷ್ಯವಾಣಿ ಈಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಜೀವಂತ ಮಾತ್ರವಲ್ಲ... ಈ ಹಾವು ಸತ್ತಿದ್ದಾಗ ಮುಟ್ಟಿದರೂ ದೇಹ ಸೇರುತ್ತೆ ವಿಷ! ಅಪ್ಪಿತಪ್ಪಿಯೂ ಮುಟ್ಟುವ ದುಸ್ಸಾಹಸಕ್ಕೆ ಹೋಗದಿರಿ

ಬಾಬಾ ವಂಗಾ ಮೂರನೇ ಮಹಾಯುದ್ಧದ ಬಗ್ಗೆ ಒಂದು ದೊಡ್ಡ ಭವಿಷ್ಯ ನುಡಿದಿದ್ದಾರೆ. ಬಾಬಾ ವಂಗಾ ಅವರು ಮೂರನೇ ಮಹಾಯುದ್ಧ 2123 ರಲ್ಲಿ, ಅಂದರೆ 98 ವರ್ಷಗಳ ನಂತರ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಪ್ರಪಂಚದಾದ್ಯಂತದ ಸಣ್ಣ ದೇಶಗಳು ಪರಸ್ಪರ ಹೋರಾಡುತ್ತವೆ, ಇದು ಮೂರನೇ ಮಹಾಯುದ್ಧದ ಆರಂಭಕ್ಕೆ ಕಾರಣವಾಗುತ್ತದೆ ಎಂದು ಬಾಬಾ ವಂಗಾ ನುಡಿದಿರುವ ಭವಿಷ್ಯ, ಅನೇಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಯುದ್ಧದಲ್ಲಿ ಯಾವುದೇ ಪ್ರಮುಖ ದೇಶಗಳು ಭಾಗವಹಿಸುವುದಿಲ್ಲ ಎಂದು ಕೂಡ ಬಾಬಾ ವಂಗಾ ಹೇಳಿದ್ದಾರೆ. ಇನ್ನೂ 100 ವರ್ಷಗಳಲ್ಲಿ, ಪ್ರಮುಖ ದೇಶಗಳು ಎಷ್ಟು ಮುಂದುವರೆದಿವೆಯೆಂದರೆ, ಅವುಗಳು ಇನ್ನು ಮುಂದೆ ಪರಸ್ಪರ ಹೋರಾಡುವ ಅಗತ್ಯವಿಲ್ಲ ಎಂದು ಬಾಬಾ ವೆಂಗಾ ತಮ್ಮ ಭವಿಷ್ಯವಾಣಿಗಳಲ್ಲಿ ಸೂಚಿಸಿದ್ದಾರೆ. ಆದಾಗ್ಯೂ, ಸಣ್ಣ ದೇಶಗಳು ಅಧಿಕಾರ ಪಡೆಯಲು, ಬೇರೆ ಸಣ್ಣ ದೇಶಗಳ ಮೇಲೆ ಒತ್ತಡ ಹೇರಬಹುದು ಮತ್ತು ಈ ವಿವಾದವು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಬಾಬಾ ವೆಂಗಾ ಹೇಳುತ್ತಾರೆ. ಬಾಬಾ ವೆಂಗಾ ಅವರ ಭವಿಷ್ಯ ಎಷ್ಟು ನಿಜವಾಗುತ್ತದೆಯೇ? ಕಾಲವೇ ಇದನ್ನು ಹೇಳಬಲ್ಲದು.

ಬಾಬಾ ವೆಂಗಾ ತಮ್ಮ ಜೀವಿತಾವಧಿಯಲ್ಲಿ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದರು, ಅವುಗಳಲ್ಲಿ ಕೆಲವು ನಿಜವಾದವು, ಅದಕ್ಕಾಗಿಯೇ ಅನೇಕ ಜನರು ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಬಗ್ಗೆ ಕುತೂಹಲ ಹೊಂದಿದ್ದಾರೆ. ಬಾಬಾ ವಂಗಾ ಅವರು ಹಿಟ್ಲರ್ ಸಾವು, ಇಂಗ್ಲೆಂಡ್ ರಾಣಿಯ ಸಾವು, ಜಪಾನ್‌ನಲ್ಲಿ ಸುನಾಮಿ ಮತ್ತು ಅಮೆರಿಕದ ಮೇಲಿನ ದಾಳಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆಂದು ಹೇಳಲಾಗುತ್ತದೆ ಮತ್ತು ಈ ಭವಿಷ್ಯವಾಣಿಗಳು ನಿಜವಾಯಿತು ಕೂಡ.

ಇದನ್ನೂ ಓದಿ:Viral video: ಮನುಷ್ಯರಿಗೇನಾ ಕಷ್ಟ, ಹಾವುಗಳಿಗೆ ಇರಲ್ವಾ? ಕಷ್ಟ ಮರೆತು ನಶೆ ಏರಿಸಿಕೊಳ್ಳಲು ಮರವೇರಿ ಶೇಂದಿ ಕುಡೀತಿದೆ ವಿಷ ಸರ್ಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News