ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಒಂದು ಹೇಯ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ಯುವಕ ತನ್ನ ಆತ್ಮೀಯ ಸ್ನೇಹಿತನ ಲಿಂಗವನ್ನು ಬಲವಂತವಾಗಿ ಬದಲಾಯಿಸಿದ್ದಾನೆ. ನಂತರ 18 ದಿನಗಳ ಕಾಲ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

Madhya Pradesh: ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಯುವಕನೊಬ್ಬ ತನ್ನ ಆತ್ಮೀಯ ಸ್ನೇಹಿತನ ಲಿಂಗವನ್ನ ಬದಲಾಯಿಸಿ ಆತನ ಮೇಲೆ 18 ದಿನಗಳ ಕಾಲ ಲೈಂಗಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಸಂತ್ರಸ್ತ ಯುವಕ ಆತನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಆರೋಪಿಯನ್ನ ಇನ್ನೂ ಬಂಧಿಸಿಲ್ಲ.
ಸಂತ್ರಸ್ತ ಯುವಕ ಆರೋಪಿ ಶುಭಂ ಯಾದವ್ ವಿರುದ್ಧ ಭೋಪಾಲ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶುಭಂ ನರ್ಮದಾಪುರಂನ ಗ್ವಾಲ್ಟೋಲಿ ನಿವಾಸಿ. ದೂರಿನ ಪ್ರಕಾರ, ಆರೋಪಿಯು ತಂತ್ರ ವಿಧ್ಯೆಯನ್ನ ಬಳಸಿಕೊಂಡು ಸಂತ್ರಸ್ತ ಯುವಕನ ಲಿಂಗವನ್ನು ಬದಲಾಯಿಸಿದ್ದಾನೆ. ನಂತರ ಆತನಿಗೆ ಹುಡುಗಿಯಂತೆ ಬದುಕುವಂತೆ ಒತ್ತಾಯಿಸಿದ್ದಾನೆ. ಆರೋಪಿಯು ಮೊದಲು ತನಗೆ ಮಾದಕ ವಸ್ತು ನೀಡಿ ನಂತರ 18 ದಿನಗಳ ಕಾಲ ಚಾಕು ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತ ಯುವಕ ಹೇಳಿದ್ದಾನೆ.
ನರ್ಮದಾಪುರಂನಲ್ಲಿರುವ ಹೋಟೆಲ್ನಲ್ಲಿಯೂ ಆರೋಪಿಯು ಸಂತ್ರಸ್ತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ. ಆರೋಪಿ ಶುಭಂ ಸಂತ್ರಸ್ತ ಯುವಕನಿಗೂ ಮಾದಕ ವಸ್ತುವನ್ನು ನೀಡುತ್ತಿದ್ದನು. ನಂತರ ಆತನ ಮೇಲೆ 18 ದಿನಗಳ ಕಾಲ ನಿರಂತರವಾಗಿ ಲೈಂಗಿಕವಾಗಿ ಶೋಷಿಸಿದ್ದಾನೆಂದು ಹೇಳಲಾಗಿದೆ.
ಆರೋಪಿ ಶುಭಂ ಸಂತ್ರಸ್ತ ಯುವಕನಿಗೆ ಜೀವ ಬೆದರಿಕೆ ಹಾಕಿದ್ದ. ಯಾರಿಗಾದರೂ ಏನಾದರೂ ಹೇಳಿದರೆ ನಿನ್ನ ಹೆಸರು ಕೆಡಿಸುವುದಾಗಿ ವಾರ್ನಿಂಗ್ ಮಾಡಿದ್ದ. ಶುಭಂ ತನ್ನ ಹೆಸರನ್ನು ಟ್ವಿಂಕಲ್ ಎಂದು ಬದಲಾಯಿಸಿ ಅದೇ ಹೆಸರಿನಲ್ಲಿ ಐಡಿ ಮಾಡಿಸಿದ್ದ ಅಂತಾ ಸಂತ್ರಸ್ತ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಟ್ವಿಂಕಲ್ ಹೆಸರಿನಲ್ಲಿ ಐಡಿ ಮತ್ತು ವೈದ್ಯಕೀಯ ಪ್ರಮಾಣಪತ್ರವನ್ನೂ ಮಾಡಿಸಿದ್ದ. ಇದರಿಂದ ಆತನ ನಿಜವಾದ ಗುರುತನ್ನು ಶಾಶ್ವತವಾಗಿ ಅಳಿಸಿಹಾಕಬಹುದು ಎಂದು ಪ್ಲ್ಯಾನ್ ಮಾಡಿಕೊಂಡಿದ್ದನಂತೆ.
ಶುಭಂ ತನ್ನನ್ನು ಇಂದೋರ್ಗೆ ಕರೆದೊಯ್ದು ಬಲವಂತವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದನೆಂದು ಸಂತ್ರಸ್ತ ಯುವಕ ಹೇಳಿಕೊಂಡಿದ್ದಾನೆ. ಘಟನೆಯ ನಂತರ ಆ ಯುವಕ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಆರೋಪಿ ಶುಭಂ ತನಗೆ ಅಪಘಾತವಾಗಿದೆ ಎಂದು ಎಲ್ಲರಿಗೂ ಹೇಳುವಂತೆ ಸಂತ್ರಸ್ತ ಯುವಕನಿಗೆ ತಿಳಿಸಿದ್ದನಂತೆ. ತನ್ನ ಕುಟುಂಬದಲ್ಲಿ ಯಾರಿಗೂ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲವೆಂದು ಬಲಿಪಶು ಹೇಳಿದ್ದಾನೆ.
ಘಟನೆಯ ನಂತರ ಸಂತ್ರಸ್ತ ಯುವಕ 6 ತಿಂಗಳು ಮನೆಯಲ್ಲಿಯೇ ಇದ್ದ. ಭಯ ಎಷ್ಟಿತ್ತೆಂದರೆ ಆತ ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಿದ್ದ. ಏಕೆಂದರೆ ಆರೋಪಿಯು ಆತನಿಗೆ ಸಮಾಜದಲ್ಲಿ ಇರಲು ಬಿಡುವುದಿಲ್ಲ ಮತ್ತು ಆತನ ಮಾನಹಾನಿ ಮಾಡುತ್ತಾನೆಂದು ಬೆದರಿಕೆ ಹಾಕುತ್ತಲೇ ಇದ್ದನಂತೆ. ಈ ಬಗ್ಗೆ ದೂರು ನೀಡಿದ ನಂತರ, ಭೋಪಾಲ್ ಪೊಲೀಸರು ಪ್ರಕರಣವನ್ನು ನರ್ಮದಾಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಇಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ