)
Trending Video : ಇದು ರೀಲ್ಸ್ ಯುಗ, ಇಲ್ಲಿ ವೈರಲ್ ಆದವರು ಬಿಗ್ಬಾಸ್ಗೂ ಹೋಗಬಹುದು ಇಲ್ಲವೇ ಸಿನಿಮಾ ಆಫರ್ ಸಹ ಪಡೆಯಬಹುದು. ಅದಕ್ಕಾಗಿ ಯುವ ಪೀಳಿಗೆ ಸಿಕ್ಕ ಸಿಕ್ಕ ರೀತಿಯ ವಿಡಿಯೋ ಮಾಡುವ ಮೂಲಕ ಸಂಚಲನ ಸೃಷ್ಟಿಸುತ್ತಿದೆ. ಯುವತಿಯರು ಮೈ ತೋರಿಸುತ್ತಿದ್ದರೆ, ಯುವಕರು ಜೀವದ ಹಂಗು ತೊರೆದು ಸಾಹಸ ಮಾಡುತ್ತಿದ್ದಾರೆ.. ಈ ಪೈಕಿ ಯುವಕನೊಬ್ಬ ಇದೀಗ ರೈಲಿನ ಕೆಳಗೆ ಮಲಗಿ ವಿಡಿಯೋ ಮಾಡಿದ್ದಾನೆ..
ಹೌದು.. ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವಕ ತನ್ನ ಮುಖವನ್ನು ತೋರಿಸುತ್ತಾ ವಿವಿಧ ಕೋನಗಳಿಂದ ತನ್ನನ್ನು ತಾನು ಚಿತ್ರೀಕರಿಸಿಕೊಂಡಿದ್ದಾನೆ. ರೈಲು ಹೊರಟ ನಂತರ, ಅವನು ಕ್ಯಾಮೆರಾವನ್ನು ನೋಡಿ ನಗುತ್ತಾನೆ. ಈ ವಿಡಿಯೋವನ್ನು ಎಲ್ಲಿ ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.̈
Look at this idiot . Betting his life to impress few ! pic.twitter.com/ZTtxKsP7tH
— Prashanth Rangaswamy (@itisprashanth) July 21, 2025
ಪ್ರಸಿದ್ಧ ವಿಮರ್ಶಕ ಪ್ರಶಾಂತ್ ರಂಗಸ್ವಾಮಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, "ಈ ಮೂರ್ಖನನ್ನು ನೋಡಿ. ಕೆಲವು ಜನರನ್ನು ಮೆಚ್ಚಿಸಲು ತನ್ನ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾನೆ" ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ. ಇದರ ಅಡಿಯಲ್ಲಿ, ಅನೇಕ ನೆಟಿಜನ್ಗಳು ಕಾಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕಾಮೆಂಟ್ಗಳ ವಿಭಾಗದಲ್ಲಿ ಒಬ್ಬ ವ್ಯಕ್ತಿ ರೈಲು ಹಾದುಹೋಗುವಾಗ ಅದರ ಕೆಳಗೆ ಮಲಗುವುದು ಸಾವಿನೊಂದಿಗೆ ಆಟವಾಡಿದಂತಿದೆ ಎಂದು ಬುದ್ದಿ ಹೇಳಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲವು ರೈಲುಗಳ ಅಡಿ ಹೆಚ್ಚು ಸ್ಥಳ ಇರುವುದಿಲ್ಲ, ಅದೃಷ್ಟವಶಾತ್ ಯುವಕ ಬದುಕಿದ್ದಾನೆ. ಈ ರೀತಿ ಅಪಾಯಕಾರಿ ಸಾಹಸ ಸರಿಯಲ್ಲ ಅಂತ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ.