ಯಾವುದೇ ಬಣ್ಣದ ಬಟ್ಟೆ ಧರಿಸಿದ್ರೂ... ಅದಕ್ಕೆ ತಕ್ಕಂತೆ ಬದಲಾಗುತ್ತೆ ಈ ಬಾಲಕನ ಕಣ್ಣಿನ ಕಲರ್! ಈ ವಿಚಿತ್ರ ಕಣ್ಣು ಹೊಂದಿರುವ ಪೋರನ ವಿಡಿಯೋ ವೈರಲ್‌

eye colour changing boy: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಒಂದು ಸಣ್ಣ ಪಟ್ಟಣದಲ್ಲಿ, ಒಂದೂವರೆ ವರ್ಷದ ಬಾಲಕನೊಬ್ಬ ತನ್ನ ಅಸಾಧಾರಣ ಕಣ್ಣುಗಳಿಂದ ಅನೇಕರನ್ನು ಅಚ್ಚರಿಗೊಳಿದ್ದಾನೆ. ತಾನು ಎಂತಹದ್ದೇ ಬಟ್ಟೆ ಧರಿಸಿದರೂ ಅದಕ್ಕೆ ತಕ್ಕಂತೆ ಕಣ್ಣುಗಳ ಬಣ್ಣ ಬದಲಾಗುತ್ತದೆ. ಇಂತಹ ಅಪರೂಪದ ಕಣ್ಣನ್ನು ಹೊಂದಿರುವ ಬಾಲಕನ ಹೆಸರು ಅರ್ಶ್.‌

Written by - Bhavishya Shetty | Last Updated : Mar 6, 2025, 04:38 PM IST
    • ಜಗತ್ತಿನಲ್ಲಿ ನಡೆಯುವ ಅದ್ಭುತಗಳಿಗೆ ಮಿತಿಯೇ ಇಲ್ಲ
    • ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
    • ಎಂತಹದ್ದೇ ಬಟ್ಟೆ ಧರಿಸಿದರೂ ಅದಕ್ಕೆ ತಕ್ಕಂತೆ ಕಣ್ಣುಗಳ ಬಣ್ಣ ಬದಲಾಗುತ್ತದೆ
ಯಾವುದೇ ಬಣ್ಣದ ಬಟ್ಟೆ ಧರಿಸಿದ್ರೂ... ಅದಕ್ಕೆ ತಕ್ಕಂತೆ ಬದಲಾಗುತ್ತೆ ಈ ಬಾಲಕನ ಕಣ್ಣಿನ ಕಲರ್! ಈ ವಿಚಿತ್ರ ಕಣ್ಣು ಹೊಂದಿರುವ ಪೋರನ ವಿಡಿಯೋ ವೈರಲ್‌
eye colour changing boy

eye colour changing boy: ಜಗತ್ತಿನಲ್ಲಿ ನಡೆಯುವ ಅದ್ಭುತಗಳಿಗೆ ಮಿತಿಯೇ ಇಲ್ಲ. ಕೆಲವೊಮ್ಮೆ ಅತ್ಯಂತ ಅಸಾಧಾರಣವಾದ ವಿದ್ಯಮಾನಗಳನ್ನು ಅತ್ಯಂತ ಅಸಾಮಾನ್ಯ ರೀತಿಯಲ್ಲೇ ಕಾಣಬಹುದು. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Add Zee News as a Preferred Source

ಇದನ್ನೂ ಓದಿ:  ಸೇನೆಯಲ್ಲಿ ತಂದೆಯ ವೀರ ಮರಣ.. ದಂತ ವೈದ್ಯೆಯಾಗಿ ಸೇವೆ, ಈಗ 300 ಕೋಟಿ ರೂ. ಸ್ಟಾರ್‌ ನಟಿ ಈಕೆ..!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಒಂದು ಸಣ್ಣ ಪಟ್ಟಣದಲ್ಲಿ, ಒಂದೂವರೆ ವರ್ಷದ ಬಾಲಕನೊಬ್ಬ ತನ್ನ ಅಸಾಧಾರಣ ಕಣ್ಣುಗಳಿಂದ ಅನೇಕರನ್ನು ಅಚ್ಚರಿಗೊಳಿದ್ದಾನೆ. ತಾನು ಎಂತಹದ್ದೇ ಬಟ್ಟೆ ಧರಿಸಿದರೂ ಅದಕ್ಕೆ ತಕ್ಕಂತೆ ಕಣ್ಣುಗಳ ಬಣ್ಣ ಬದಲಾಗುತ್ತದೆ. ಇಂತಹ ಅಪರೂಪದ ಕಣ್ಣನ್ನು ಹೊಂದಿರುವ ಬಾಲಕನ ಹೆಸರು ಅರ್ಶ್.‌

ಅರ್ಶ್ ಅವರ ತಾಯಿ ನಜ್ರೀನ್ ಆತನಿಗೆ ವಿವಿಧ ಬಣ್ಣಗಳಲ್ಲಿ ಬಟ್ಟೆ ಹಾಕುತ್ತಿದ್ದಂತೆ, ಕಣ್ಣುಗಳು ಉಡುಪಿನ ಛಾಯೆಗೆ ಹೊಂದಿಕೆಯಾಗಿರುವುದು ಕಂಡುಬಂದಿತ್ತು.

ಗಾಢ ನೀಲಿ ಬಣ್ಣದಿಂದ ಬೂದು ಮತ್ತು ಹಸಿರು ಬಣ್ಣಕ್ಕೆ, ಅವುಗಳನ್ನು ಸುತ್ತುವರೆದಿರುವ ಛಾಯೆಗಳಿಗೆ ಹೊಂದಿಕೊಳ್ಳುವಂತೆ ತೋರುತ್ತದೆ. ಈ ವಿಸ್ಮಯ ಕಂಡ ಜನರು ಇದನ್ನು ಪ್ರಕೃತಿಯ ಪವಾಡವೆಂದು ಕರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಆ ಕಣ್ಣುಗಳನ್ನು ವೀಕ್ಷಿಸಲೆಂದೇ ಹೆಚ್ಚಿನ ಸಂಖ್ಯೆಯ ಜನರು ಅರ್ಶ್‌ನ ಮನೆಯ ಬಳಿ ಜಮಾಯಿಸಿದ್ದಾರೆ.

ಇದನ್ನೂ ಓದಿ:  ಏಕಾಏಕಿ ಚಿನ್ನದ ಬೆಲೆಯಲ್ಲಿ ಗಣನೀಯ ಬದಲಾವಣೆ! ಖರೀದಿಗೂ ಮೊದಲು 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ತಿಳಿದುಕೊಳ್ಳಿ..

ಇನ್ನು ಕಣ್ಣಿನ ತಜ್ಞ ಡಾ. ಅಖಿಲೇಶ್ ಅಗರ್ವಾಲ್ ಎಂಬವರು ಇದರ ಬಗ್ಗೆ ಮಾತನಾಡಿದ್ದು, ಇದಕ್ಕೆ ಸಾಕಷ್ಟು ತರ್ಕಬದ್ಧ ವಿವರಣೆಯನ್ನು ನೀಡಿ, "ಇದು ಕೇವಲ ಭ್ರಮೆ" ಎಂದು ಹೇಳಿದ್ದಾರೆ. ಆದರೂ, ಅಂಶ್ ಅವರ ಕಣ್ಣುಗಳು ಕುತೂಹಲವನ್ನು ಪ್ರೇರೇಪಿಸುವಷ್ಟು ಆಕರ್ಷಕವಾಗಿವೆ.

 
 
 
 

 
 
 
 
 
 
 
 
 
 
 

A post shared by Mews.in (@mewsinsta)

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News