Wedding Viral Video : ಭಾರತೀಯ ವಿವಾಹಗಳಲ್ಲಿ ಅನೇಕ ರೀತಿಯ ಆಚರಣೆಗಳು ಪದ್ದತಿಗಳನ್ನು ಕಾಣಬಹುದು. ಪ್ರದೇಶಕ್ಕನುಗುಣವಾಗಿ ಮದುವೆಯ ರೀತಿ ನೀತಿಗಳು ಬದಲಾಗುತ್ತಿರುತ್ತವೆ. ಇದೀಗ ಮದುವೆಯ ಸೀಸನ್  ನಡೆಯುತ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಹರಿದಾಡುತ್ತಿವೆ. ಇವುಗಳಲ್ಲೂ ಕೆಲವು ವಿಡಿಯೋಗಳು ಮದುವೆಯ ಭಿನ್ನ  ಸಂಪ್ರದಾಯಗಳನ್ನು ಪರಿಚಯಿಸಿದರೆ, ಇನ್ನು ಕೆಲವು ಮದುವೆ  ದಿನ ನಡೆಯುವ ಆಶ್ಚರ್ಯಕರ ಘಟನೆಗಳನ್ನು ಕಣ್ಣ ಮುಂದೆ ತಂದಿಡುತ್ತವೆ. 


COMMERCIAL BREAK
SCROLL TO CONTINUE READING

ಮದುವೆ ಅಂದರೆ ಅಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದೇನಿಲ್ಲ. ಆದರೆ, ಎಷ್ಟು ಸಾಧ್ಯವೋ ಅಷ್ಟು ಸಮಸ್ಯೆಗಳು ಅತಿಥಿಗಳಿಗೆ ತಿಳಿಯದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ವಧು ಮತ್ತು ವರ ಮದುವೆ ದಿನ, ಮದುವೆ ಮಂಟಪ ಅನ್ನುವುದನ್ನೂ ಲೆಕ್ಕಿಸದೆ ಹೊಡೆದಾಡಿ ಕೊಂಡಿದ್ದಾರೆ. ಅದೂ ಕೂಡಾ ಮದುವೆ ಶಾಸ್ತ್ರದ ಮಧ್ಯೆ. 


ಇದನ್ನೂ ಓದಿ : Viral Video: ಆ ಕಡೆ ಮೈದುನ… ಈ ಕಡೆ ಅತ್ತಿಗೆ: ಮಧ್ಯರಾತ್ರಿ ರಸ್ತೆಯಲ್ಲಿ ಯಾರು ಇಲ್ಲದಿದ್ದಾಗ ಇವರಿಬ್ಬರು…!


ಮೊದಲೇ ಹೇಳಿದಂತೆ ಮದುವೆಯ ಶಾಸ್ತ್ರ ರೀತಿ ನೀತಿಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಇಲ್ಲೂ ಹಾಗೆ  ವರ ವಧುವಿಗೆ ಹಣ್ಣು ತಿನ್ನಿಸುವುದು ಮದುವೆಯ ಸಂಪ್ರದಾಯ. ಆದರೆ ವಧು ಯಾಕೋ ಹಣ್ಣು  ತಿನ್ನುವುದಕ್ಕೆ ಒಪ್ಪುವುದಿಲ್ಲ. ವರ ಒತ್ತಾಯ ಮಾಡಿದಾಗ ಆಕೆಯ ಕೋಪ ನೆತ್ತಿಗೇರಿದೆ. ವರನಿಗೆ ಹೊಡೆದು ಬಿಟ್ಟಿದ್ದಾಳೆ. ಅಷ್ಟು ಜನರ ಮಧ್ಯೆ ವಧು ತನ್ನ ಮೇಲೆ ಕೈ ಮಾಡುವಾಗ ವರ ಸುಮ್ಮನಿರುತ್ತಾನೆಯೇ ತಾನೇನು ಕಮ್ಮಿ ಎನ್ನುವಂತೆ ತಿರುಗಿ ಬಾರಿಸಿದ್ದಾನೆ.  ಇಬ್ಬರೂ ಚೆನ್ನಾಗಿಯೇ ಹೊಡೆದಾಡುತ್ತಾರೆ.  


 



ಇದನ್ನೂ ಓದಿ : ಏಡಿ ಜೊತೆ ಚಲ್ಲಾಟ ಆಡೋಕೆ ಹೋದ ತಾತನ ಫಜೀತಿ ನೋಡ್ರಪ್ಪಾ...! ಪಾಪ.. ಅಜ್ಜ


ಈ ಘಟನೆ ನಡೆಯುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರಲ್ಲಿ ಒಬ್ಬರು ಇದನ್ನು ವಿಡಿಯೋ ಮಾಡಿದ್ದಾರೆ.  ಇದೀಗ ಈ ವಿಡಿಯೋವ ನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ.   


ಈ ವೀಡಿಯೊವನ್ನು ಕುಶ್ವಾಹಾ_ವಿಶಾಲ್ ಎನ್ನುವವರು Instagram ನಲ್ಲಿ ಹಂಚಿಕೊಂಡಿದ್ದಾರೆ.  ಈ ವಿಡಿಯೋವನ್ನು ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.