Viral Video : ಮದುವೆ ಮುಗಿಯುತ್ತಿದ್ದಂತೆ ವರನಿಗೆ ವಧುವಿನಿಂದ ರಪ ರಪನೆ ಬೀಳುತ್ತದೆ ಬೆತ್ತದೇಟು ! ಹೀಗೂ ಇದೆಯಂತೆ ಶಾಸ್ತ್ರ

Viral Video : ಇದೀಗ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯ ನಂತರ ವಧು-ವರರು ನಡೆಸಿಕೊಡಬೇಕಾದ ಶಾಸ್ತ್ರದ ವಿಡಿಯೋ ಇದು. 

Written by - Ranjitha R K | Last Updated : Mar 14, 2023, 12:54 PM IST
  • ಮದುವೆ ಎಂದರೆ ಅಲ್ಲಿ ವಿವಿಧ ರೀತಿಯ ಆಚರಣೆ ಇರುತ್ತದೆ.
  • ಕೆಲವು ಪದ್ದತಿಗಳು ನೋಡುಗರಿಗೆ ತಮಾಷೆಯಾಗಿ ಕಾಣಬಹುದು.
  • ಪಾಪ ವಧು- ವರರ ಪ್ರಾಣ ಹಿಂಡಿ ಬಿಡುತ್ತವೆ.
Viral Video : ಮದುವೆ ಮುಗಿಯುತ್ತಿದ್ದಂತೆ ವರನಿಗೆ ವಧುವಿನಿಂದ ರಪ ರಪನೆ ಬೀಳುತ್ತದೆ ಬೆತ್ತದೇಟು !  ಹೀಗೂ ಇದೆಯಂತೆ ಶಾಸ್ತ್ರ  title=

Viral Video : ಮದುವೆ ಎಂದರೆ ಅಲ್ಲಿ ವಿವಿಧ ರೀತಿಯ ಆಚರಣೆ ಇರುತ್ತದೆ. ಈ ಆಚರಣೆ, ಪದ್ದತಿಗಳು ಊರಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ   ಬದಲಾಗುತ್ತಿರುತ್ತವೆ. ಹೀಗೆ ನಡೆದುಕೊಂಡ ಪದ್ದತಿಗಳನ್ನು ಯಾಕೆ ನಡೆಸುತ್ತಾರೆ ಎನ್ನುವುದೇ ಕೆಲವೊಮ್ಮೆ ಅರ್ಥವಾಗುವುದಿಲ್ಲ. ಇನ್ನು ಕೆಲವು ಪದ್ದತಿಗಳು ನೋಡುಗರಿಗೆ ತಮಾಷೆಯಾಗಿ ಕಾಣಬಹುದು. ಆದರೆ, ಪಾಪ ವಧು- ವರರ ಪ್ರಾಣ ಹಿಂಡಿ ಬಿಡುತ್ತವೆ. ಕೆಲವೊಮ್ಮೆ ಈ ಆಚರಣೆಗಳೇ ವಧು-ವರರ ನಡುವಿನ ಮನಸ್ತಾಪಕ್ಕೂ ಕಾರಣವಾಗಿ ಬಿಡುತ್ತವೆ. ಇದೀಗ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯ ನಂತರ ವಧು-ವರರು ನಡೆಸಿಕೊಡಬೇಕಾದ ಶಾಸ್ತ್ರದ ವಿಡಿಯೋ ಇದು. 
 
ಇಲ್ಲಿನ ಮದುವೆ ಶಾಸ್ತ್ರದ ಪ್ರಕಾರ, ವಧು ತನ್ನ ಕೈಯಲ್ಲಿ ಕೋಲು ಹಿಡಿದು ಕೊಂದು ಹಾಸಿಗೆಯ ಮೇಲೆ ಕುಳಿತಿರುತ್ತಾಳೆ. ಅದೇ ಹಾಸಿಗೆಯ ಮೇಲೆ ವರ ಬೋರಲು ಮಲಗಬೇಕು. ವರನ ಮೇಲೆ ಮನೆ ಮಂದಿ ಬಲೂನ್ ಹಿಡಿಯುತ್ತಾರೆ. ವಧು ಆ ಬಲೂನಿಗೆ ಹೊಡೆದು ಅದನ್ನು ಬ್ಲಾಸ್ಟ್ ಮಾಡಬೇಕು. ಆದರೆ, ವಧು ಬಲೂನಿಗೆ ಹೊಡೆಯಲು ಹೋಗುವಾಗ ಮನೆಯವರು ಬಲೂನನ್ನು ಹಿಂದಕ್ಕೆ ಸರಿಸುತ್ತಾರೆ. ಆಗ ಏಟು ವರನಿಗೆ ಬೀಳುತ್ತದೆ. ಇಲ್ಲಿ ವಧು ತನ್ನ ವರನನ್ನು ಎಷ್ಟು ಬೇಗ ಏಟಿನಿಂದ ಬಚಾವ್ ಮಾಡುತ್ತಾಳೆ ಎನ್ನುವುದೇ ಪದ್ದತಿ.  

ಇದನ್ನೂ ಓದಿ : Viral Video : ಶಾಸ್ತ್ರ ನಡೆಯುವಾಗಲೇ ಮದುಮಗಳು ನಿದ್ರೆಗೆ ಜಾರಿದಾಗ.. ವರ ಮಾಡಿದ್ದೇನು ನೋಡಿ

ಈ ಬಲೂನ್ ಹೊಡೆಯುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಾಪ ಇಲ್ಲಿ ವಧು ಎಷ್ಟೇ ಪ್ರಯತ್ನ ಪಟ್ಟರೂ ಬಲೂನ್ ಒಡೆಯುವುದು ಸಾಧ್ಯವಾಗುವುದಿಲ್ಲ. ಬದಲಾಗಿದೆ ವರನ ಬೆನ್ನಿಗೆ ಅಷ್ಟೇ ಏಟು ಬೀಳುತ್ತಿರುತ್ತದೆ. 

 

 
 
 
 

 
 
 
 
 
 
 
 
 
 
 

A post shared by Ay Lo G (@aylogyworld)

ಇದನ್ನೂ ಓದಿ : Girl Dance Video: ಪ್ಯಾಂಟ್‌ ಬಿಚ್ಚಿ ಹುಡುಗಿಯ ಸೂಪರ್ ಬೋಲ್ಡ್ ಡ್ಯಾನ್ಸ್, ನೋಡಿ ನಿದ್ದೆಗೆಟ್ಟ ಹುಡುಗ್ರು

ಈ ವಿಶಿಷ್ಟ ವಿವಾಹದ ವೀಡಿಯೊವನ್ನು aylogyworld ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾವಿರಾರು ಮಂದಿ ಈ ವಿಡಿಯೋ ನೋಡಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News