ಸಿಂಹಗಳ ಜೊತೆ ಕಂದಮ್ಮನಿಗಾಗಿ ಕಾಡೆಮ್ಮೆ ಕಾದಾಟ..! ಮುಂದಾಗಿದ್ದು ಮಾತ್ರ ಶಾಕಿಂಗ್‌.. ರೋಚಕ ವಿಡಿಯೋ ವೈರಲ್‌

Buffalo vs Lions viral : ತಾಯಿ ಎಮ್ಮೆ ತನ್ನ ಮರಿಯನ್ನು ರಕ್ಷಿಸಲು ಸಿಂಹಗಳ ಜೊತೆ ಹೋರಾಡುವ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಇದು ಪ್ರಕೃತಿಯಲ್ಲಿ ಸಾಮಾನ್ಯ ಘಟನೆಯಾಗಿದ್ದರೂ, ತಾಯಿಯ ವಾತ್ಸಲ್ಯ ಎಂತಹುದು ಎನ್ನುವುದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.. 

Written by - Krishna N K | Last Updated : Apr 12, 2025, 07:33 PM IST
    • ಮರಿಯನ್ನು ರಕ್ಷಿಸಲು ಸಿಂಹಗಳ ಜೊತೆ ಕಾಡೆಮ್ಮೆ ಹೋರಾಟ
    • ಈ ವಿಡಿಯೋ ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.
    • ಒಂದಲ್ಲ ಎರಡು ಸಿಂಹಗಳ ಜೊತೆ ಕಾಡೆಮ್ಮೆ ಹೋರಾಟ
ಸಿಂಹಗಳ ಜೊತೆ ಕಂದಮ್ಮನಿಗಾಗಿ ಕಾಡೆಮ್ಮೆ ಕಾದಾಟ..! ಮುಂದಾಗಿದ್ದು ಮಾತ್ರ ಶಾಕಿಂಗ್‌.. ರೋಚಕ ವಿಡಿಯೋ ವೈರಲ್‌

Wildlife Video : ಕಾಡು ಪ್ರಾಣಿಗಳು ಸಾಮಾನ್ಯವಾಗಿ ಪರಸ್ಪರ ಅವಲಂಬಿತವಾಗಿವೆ. ಕಾನನದಲ್ಲಿ ವಾಸಿಸುವ ಪ್ರಾಣಿಗಳಲ್ಲಿ 70% ಕ್ಕಿಂತ ಹೆಚ್ಚು ಸರ್ವಭಕ್ಷಕಗಳಾಗಿವೆ. ಇತರ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದು ಪ್ರಾಣಿಯ ಸ್ವಭಾವ. ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ ತಾಯಿ ಎಮ್ಮೆ ತನ್ನ ಕರುವನ್ನು ರಕ್ಷಿಸಲು ಸಿಂಹಗಳ ವಿರುದ್ಧ ಹೋರಾಡುತ್ತಿರುವುದನ್ನು ತೋರಿಸಲಾಗಿದೆ. 

Add Zee News as a Preferred Source

ಹೌದು.. ಈ ವಿಡಿಯೋ ನೋಡಿದರೆ ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಯೋಧ ಇಲ್ಲ ಎನ್ನುವುದು ಅರ್ಥವಾಗುತ್ತದೆ. ಒಂದಲ್ಲ ಎರಡು ಸಿಂಹಗಳ ಜೊತೆ ಹೆತ್ತ ಕಂದಮ್ಮನನ್ನು ಕಾಪಾಡಲು ತಾಯಿ ಕಾಡೆಮ್ಮೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದೆ.. ಮುಂದೆ ಆಗಿದ್ದು, ತುಂಬಾ ಇಂಟ್ರಸ್ಟಿಂಗ್‌ ಆಗಿದೆ..

ಇದನ್ನೂ ಓದಿ: ಮನೆಗೆ ಹೋಗೋವರೆಗೂ ತಾಳ್ಮೆ ಇಲ್ಲ.. ಅಷ್ಟು ಅರ್ಜೆಂಟ್... ಕಾರಿನಲ್ಲೇ ಕಿಸ್ಸಿಂಗ್‌-ಹಗ್ಗಿಂಗ್‌ ಎಲ್ಲಾ

ಒಗ್ಗಟ್ಟಾಗಿ ಇದ್ರೆ ಏನಾದ್ರೂ ಸಾಧನೆ ಮಾಡಬಹುದು ಎನ್ನುವುದಕ್ಕೂ ಈ ವಿಡಿಯೋ ಸಾಕ್ಷಿಯಾಗುತ್ತದೆ.. ಕಾರಣ.. ಒಬ್ಬಂಟಿಯಾಗಿ ಹೋರಾಟುತ್ತಿದ್ದ ಎಮ್ಮೆಯನ್ನು ನೋಡಿದ ಎಮ್ಮೆಗಳ ಹಿಂಡು ಸಿಂಹಗಳನ್ನು ಅಲ್ಲಿಂದ ಓಡಿಸಿ ತಾಯಿ ಮಗುವನ್ನು ರಕ್ಷಿಸುತ್ತವೆ.. ಈ ವಿಡಿಯೋ ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.  

ಈ ವೀಡಿಯೊ ನಮಗೆ ಕಲಿಸುವುದೇನೆಂದರೆ, ನಾವು ಎಷ್ಟೇ ಬಲಿಷ್ಠರಾಗಿದ್ದರೂ, ಒಗ್ಗಟ್ಟಿನಿಂದ ಇದ್ದರೆ ಮಾತ್ರ ಯಶಸ್ಸು ಸಾಧಿಸಬಹುದು. ಈ ವೀಡಿಯೊದ ಅಡಿಯಲ್ಲಿ ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.. ಅಲ್ಲದೆ, ಕೆಜಿಎಫ್ ಚಿತ್ರದ "ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ" ಎಂಬ ಸಾಲನ್ನು ಉಲ್ಲೇಖಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News