)
Viral Video: ಅನೇಕ ಬೀದಿ ಪ್ರಾಣಿಗಳು ರಸ್ತೆಗಳಲ್ಲಿ ಓಡಾಡುವ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಈ ಪ್ರಾಣಿಗಳಿಂದಾಗಿ ಅನೇಕ ನಗರಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಾಗುತ್ತಿದೆ. ಕೆಲವೊಮ್ಮೆ ಎತ್ತು-ಹಸುಗಳು ಆಕ್ರಮಣಕಾರಿಯಾಗಿ ನಡೆದು ಪಾದಚಾರಿಗಳ ಮೇಲೆ ದಾಳಿ ಮಾಡುವ ಘಟನೆಗಳನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಈ ದಾಳಿಗಳಲ್ಲಿ ಜನರು ಗಾಯಗೊಂಡ ಘಟನೆಗಳೂ ಇವೆ. ಇತ್ತೀಚೆಗೆ, ಅಂತಹ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಅದರಲ್ಲಿ ಒಂದು ಗೂಳಿ ಟ್ರ್ಯಾಕ್ಟರ್ನೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ, ಒಂದು ಗೂಳಿ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯುತ್ತಿರುವುದು ಕಂಡುಬಂದಿದೆ.. ಆರಂಭದಲ್ಲಿ, ಟ್ರ್ಯಾಕ್ಟರ್ ಚಾಲಕ ಅದನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ. ಆದರೆ ಗೂಳಿ ಹಿಂದೆ ಸರಿಯದಿದ್ದಾಗ, ಚಾಲಕ ಆಕ್ಸಿಲರೇಟರ್ ಒತ್ತುತ್ತಾನೆ. ಆಗ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸುತ್ತದೆ. ಹೋರಿ ಹಿಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ.. ಆದರೆ ಬಳಿಕ ಗೂಳಿ ತನ್ನ ಬಲದಲ್ಲಿ ತುಂಬಾ ವಿಶ್ವಾಸವಿಟ್ಟು, ಮತ್ತೇ ಟ್ರ್ಯಾಕ್ಟರ್ನೊಂದಿಗೆ ಸ್ಪರ್ಧಿಸುತ್ತದೆ.. ಹತ್ತಿರದಲ್ಲಿ ನಿಂತಿದ್ದ ಜನರು ಈ ದೃಶ್ಯವನ್ನು ವೀಕ್ಷಿಸಿದಲ್ಲದೇ, ತಮ್ಮ ಸೆಲ್ಫೋನ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ.. ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋಗೆ ಬುಲ್ ತನ್ನನ್ನು ಬಾಹುಬಲಿ ಎಂದು ಭಾವಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಪೋಸ್ಟ್ಗೆ ಇದುವರೆಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, ನೂರಾರು ಲೈಕ್ಗಳು ಮತ್ತು ಕಾಮೆಂಟ್ಗಳು ಬಂದಿವೆ.
सांड के सामने नगर पंचायत की ? ट्रैक्टर खड़ी है.
आवारा सांड गुस्से में लाल हो गया और ट्रैक्टर से भिड़ गया.
फिर क्या था ट्रैक्टर वाला गुस्से में गियर लगाया और धकेलते हुए ले गया.
आज कल पूरे देश में आवारा पशुओं का बोलबाला है सरकार इसपर मौन है. pic.twitter.com/7rvW4OBQ8n
— AYODHYA WALE ❣️ (@WaleAyodhy70737) August 31, 2025
ಇನ್ನು ಈ ವೀಡಿಯೊವನ್ನು ಆಗಸ್ಟ್ 31 ರಂದು X ಹ್ಯಾಂಡಲ್ @WaleAyodhy70737 ಪೋಸ್ಟ್ ಮಾಡಿದ್ದಾರೆ. ಇದರ ಕ್ಯಾಪ್ಚನ್ "ನಗರ ಪಂಚಾಯತ್ ಟ್ರ್ಯಾಕ್ಟರ್ ಮುಂದೆ ನಿಂತಿರುವ ಒಂದು ಗೂಳಿ ದಾರಿ ತಪ್ಪಿ, ಕೋಪಗೊಂಡು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಚಾಲಕ ಕೋಪದಿಂದ ಗೇರ್ ಬದಲಾಯಿಸಿ ಹೋರಿಯನ್ನು ತಳ್ಳಿದ್ದಾನೆ." ಎಂದು ಬರೆಯಲಾಗಿದೆ.. ಕ್ಲಿಪ್ ಕೇವಲ 26 ಸೆಕೆಂಡುಗಳದ್ದಾಗಿದೆ..