)
Viral Video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಜನರಲ್ಲಿ ಅಚ್ಚರಿ ಮೂಡಿಸುತ್ತವೆ. ಪ್ರಾಣಿಗಳ ವಿಡಿಯೋಗಳಂತೂ ಜನರಿಗೆ ತುಂಬಾ ಅಚ್ಚುಮೆಚ್ಚು. ಹೀಗಾಗಿಯೇ ಕೋಟ್ಯಂತರ ಜನರು ಆ ರೀತಿಯ ವಿಡಿಯೋಗಳನ್ನ ವೀಕ್ಷಿಸಲು ಇಷ್ಟಪಡುತ್ತಾರೆ. ತಮಾಷೆಯ ವಿಡಿಯೋಗಳು ಸಖತ್ ಟ್ರೆಂಡ್ ಕೂಡ ಆಗುತ್ತವೆ. ಅಂತಹದ್ದೇ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕುಟುಂಬವೊಂದು ಮೂರು ಟ್ರೇನಷ್ಟು ಮೊಟ್ಟೆಗಳನ್ನ ತಂದು ಮನೆಯಲ್ಲಿಟ್ಟಿದೆ. ಬಳಿಕ 2 ತಿಂಗಳು ಪ್ರವಾಸಕ್ಕೆ ಹೋಗಿದೆ. ಆದರೆ ಹಾಲಿಡೇ ಮಜಾ ಅನುಭವಿಸಿ ವಾಪಸ್ ಬಂದ ಕುಟುಂಬಕ್ಕೆ ದೊಡ್ಡ ಶಾಕ್ ಉಂಟಾಗಿತ್ತು. ಏಕೆಂದರೆ ಪ್ರವಾಸಕ್ಕೆ ಹೊರಡುವ ಮುನ್ನ ಅಡುಗೆ ಮನೆಯಲ್ಲಿ ತಂದಿಟ್ಟಿದ್ದ ಮೂರು ಟ್ರೇ ಮೊಟ್ಟೆಗಳಿಂದ ಮರಿಗಳು ಹೊರಬಂದಿವೆ. ಮನೆಯ ಮೂಲೆ ಮೂಲೆಯಲ್ಲಿಯೂ ಈ ಕೋಳಿಮರಿಗಳು ಓಡಾಡುವುದನ್ನ ಕಂಡು ಇಡೀ ಕುಟುಂಬದವರೇ ಹೌಹಾರಿ ಹೋಗಿದ್ದಾರೆ.
ಚಿಲಿಪಿಲಿಗುಡುತ್ತಾ ಇಡೀ ಮನೆಯ ಸುತ್ತಮುತ್ತಲೂ ಓಡಾಡುತ್ತಿದ್ದ ಕೋಳಿ ಮರಗಳನ್ನ ಕಂಡು ಕುಟುಂಬಕ್ಕೆ ಶಾಕ್ ಆಗಿದೆ. ಟ್ರೇನಲ್ಲಿಟ್ಟಿದ್ದ ಮೊಟ್ಟೆಗಳು ಒಡೆದು ಮರಿಗಳಾಗಿ ಹೊರಬಂದಿವೆ. ಇದು ಮನೆಯವರಿಗೆ ದೊಡ್ಡ ಅಚ್ಚರಿಯನ್ನುಂಟು ಮಾಡಿದೆ. ಇಡೀ ಮನೆಯ ಒಂದು ರೀತಿ ಕೋಳಿ ಫಾರ್ಮ್ ರೀತಿ ಬದಲಾಗಿತ್ತು. @RanjanSingh_ ಎಂಬ Instagram ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
घर पे अंडा रख कर गए छुटी मनाने 2 महीने घर से बाहर गए,
सभी अंडे में से चूजे निकल गए देखिये अब लग रहा है चिकन बनाना होगा,कुदरत का करिश्मा हो गया अंडे में से बच्चे निकल गया pic.twitter.com/NSIA7EnEyD
— Ranjan Singh 🇮🇳 (@RanjanSinghh_) November 29, 2025
ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಜನರು ವೀಕ್ಷಿಸಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್ ಕೂಡ ಮಾಡಿದ್ದಾರೆ. ʼಇದು ನಿಸರ್ಗದ ಅದ್ಭುತʼ ಎಂದು ಕೆಲವರು ಹೇಳಿದರೆ, ಮನೆಯಲ್ಲಿ ಕೇವಲ ಎರಡು ದಿನ ಕಸ ಗುಡಿಸದಿದ್ದರೆ ತಿಪ್ಪೆ ರೀತಿ ಇರುತ್ತದೆ, ಇನ್ನೂ ಮೊಟ್ಟೆಗಳನ್ನ ತಂದಿಟ್ಟು ಪ್ರವಾಸಕ್ಕೆ ಹೋದರೆ ಏನಾಗಬೇಡ?ʼ ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ. ಮೊಟ್ಟೆಗಳಿಂದ ಮರಿಗಳು ಹೇಗೆ ಬಂದವು ಅನ್ನೋದು ಅನೇಕರ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಅಮಾಯಕರ ಹೆಸರಲ್ಲಿ ಕೋಟಿ ಕೋಟಿ ವ್ಯವಹಾರ..?