)
Snake viral video: ಹಾವುಗಳು ತುಂಬಾನೇ ಡೇಂಜರ್... ವಿಷಸರ್ಪ ಕಚ್ಚಿದ್ರೆ ಕ್ಷಣಮಾತ್ರದಲ್ಲಿ ಪ್ರಾಣವೇ ಹೋಗುತ್ತೆ. ಹೀಗಾಗಿಯೇ ಬಹುತೇಕರು ಹಾವು ಕಂಡ್ರೆ ಸಾಕು ದೂರ ಓಡಿಹೋಗುತ್ತಾರೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹಾವು ಕಂಡರೆ ಬೆಚ್ಚಿಬೀಳುತ್ತಾರೆ. ಹಾವು ಅನ್ನೋ ಪದ ಕೇಳಿದ್ರೆ ಕೆಲವರ ಬಾಯಲ್ಲಿ ಮಾತೇ ಹೊರಡುವುದಿಲ್ಲ. ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಹಾವುಗಳ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಪುಟ್ಟ ಬಾಲಕನೊಬ್ಬ ಯಾವುದೇ ರೀತಿ ಭಯ ಇಲ್ಲದೇ ಬರಿಗೈಲಿ ಹಾವು ಹಿಡಿದಿರುವ ವಿಡಿಯೋ ಇಂಟರ್ನೆಟ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹಾವು ಹಿಡಿದಿರುವ ಪುಟ್ಟ ಬಾಲಕನ ಧೈರ್ಯಕ್ಕೆ ಸೋಷಿಯಲ್ ಮೀಡಿಯಾ ಬಳಕೆದಾರರು ಹೌಹಾರಿದ್ದಾರೆ. ಯಾವುದೇ ಭಯವಿಲ್ಲದೆ ಹಾವು ಹಿಡಿದ ದೃಶ್ಯವನ್ನ ಕಂಡು ಅನೇಕರು ಬೆಕ್ಕಸ ಬೆರಗಾಗಿದ್ದಾರೆ.
छोटू का यमराज के साथ उठना बैठना लगता है
लेकिन यह साहस जानलेवा भी साबित हो सकता हैं? pic.twitter.com/nAuVU7DcaQ
— Manju (@cop_manjumeena) August 20, 2025
ಈ ವಿಡಿಯೋವನ್ನ cop_manjumeena ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಯಾವುದೇ ಭಯ ಇಲ್ಲದೆ ಪುಟ್ಟ ಬಾಲಕ ಸಲೀಸಾಗಿ ಹಾವು ಹಿಡಿದಿದ್ದಾನೆ. ವೈರಲ್ ಆಗಿರೋ ಈ ವಿಡಿಯೋದಲ್ಲಿ ನೀವು ಬಾಲಕ ಬರಿಗೈಲಿ ಸುಲಭವಾಗಿ ಹಾವು ಹಿಡಿಯುತ್ತಿರುವ ದೃಶ್ಯವನ್ನ ಕಾಣಬಹುದು. ಭಯವಿಲ್ಲದೆ ಹಾವು ಹಿಡಿದ ಪುಟ್ಟ ಬಾಲಕನ ಧೈರ್ಯವನ್ನ ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನ ಇದುವರೆಗೆ 1 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಬಾಲಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼಈ ರೀತಿ ಹಾವು ಹಿಡಿಯಲು ಗುಂಡಗೆ ಇರಬೇಕುʼ ಅಂತಾ ಕೆಲವರು ಕಾಮೆಂಟ್ ಮಾಡಿದ್ರೆ, ʼಹಾವು ತುಂಬಾ ಡೇಂಜರ್.. ರೀತಿ ಬಾಲಕನ ಕೈಯಲ್ಲಿ ಹಾವು ಹಿಡಿಸಿ ಅದನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡುವುದು ಸರಿಯಲ್ಲʼ ಅಂತಾ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪುಟ್ಟ ಬಾಲಕನ ಧೈರ್ಯ ಮೆಚ್ಚಬೇಕು, ಆದರೆ ಬಾಲಕನ ಕೈಯಲ್ಲಿ ಹಾವು ಹಿಡಿಸಿರುವುದು ಸರಿಯಲ್ಲ. ಇದು ಆತನ ಪ್ರಾಣದ ಜೊತೆಗೆ ಚೆಲ್ಲಾಟವಾಡಿದಂತಿದೆʼ ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ.