Weird Jobs: ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿರುವ ಶೆನ್ನೊಂಗ್ಜಿಯಾ ರಾಷ್ಟ್ರೀಯ ಪ್ರಕೃತಿ ಮೀಸಲು ಪ್ರದೇಶವು ತನ್ನ ವಿಶಿಷ್ಟ ಉದ್ಯೋಗಾವಕಾಶದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿರುವ ಈ ಪ್ರಕೃತಿ ಮೀಸಲು ಪ್ರದೇಶವು ಪ್ರವಾಸೋದ್ಯಮದಲ್ಲಿ ಹೊಸ ತಂತ್ರವನ್ನ ಅಳವಡಿಸಿಕೊಂಡಿದೆ. ಸಂದರ್ಶಕರಿಗೆ "ಕಾಡುಮನುಷ್ಯರ" ವೇಷಭೂಷಣಗಳಲ್ಲಿ ನಟಿಸುವ ವಿಶೇಷ ಜಾಬ್ ಆಫರ್ ನೀಡಿದೆ.
ಹೌದು, ಈ ಉದ್ಯೋಗವು ಅರಣ್ಯದಲ್ಲಿ ಆದಿವಾಸಿಗಳ ವೇಷಭೂಷಣಗಳಲ್ಲಿ ನೃತ್ಯ ಮಾಡುತ್ತ ಪ್ರವಾಸಿಗರೊಂದಿಗೆ ಸಂವಹನದ ಮೂಲಕ ತಮ್ಮ ಅನುಭವಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತದಂತೆ. ಈ ಮೀಸಲು ಪ್ರದೇಶವು ತನ್ನ ದಟ್ಟ ಕಾಡು, ವೈವಿಧ್ಯಮಯ ಜೀವಜಾಲ ಹಾಗೂ 'ಆದಿವಾಸಿ' ಜೀವಿಗಳ ಕಥೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಹವಾಮಾನವು ಬೇಸಿಗೆಯಲ್ಲಿ ತಂಪಾಗಿದ್ದು, 20°C ಸುತ್ತಲೂ ತಾಪಮಾನ ಇರುತ್ತದೆ. ಇದರಿಂದ ಇದು ಜನಪ್ರಿಯ ಪ್ರವಾಸದ ತಾಣವಾಗಿದೆ.
ಇದನ್ನೂ ಓದಿ: ಇಸ್ರೇಲ್ ದಾಳಿಗೂ 'ಕಾಂಡೋಮ್' ಗೂ ಏನಿದು ಸಂಬಂಧ..? ವೈರಲ್ ಆದ ಪಾಕ್ ಪ್ರಧಾನಿ ಟ್ವೀಟ್..!
ವಿಶೇಷ ನೇಮಕಾತಿ ನಡೆಯುತ್ತಿದೆ
* ಈ ನೇಮಕಾತಿ ಜೂನ್ 7ರಂದು ನೇಮಕಾತಿ ಪ್ರಾರಂಭವಾಗಿದೆ. ಕೇವಲ ಎರಡು ದಿನಗಳೊಳಗೆ 10,000ಕ್ಕೂ ಹೆಚ್ಚು ಜನರಿಂದ ಅರ್ಜಿ ಬಂದಿವೆ ಎಂದು ಮೀಸಲು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
* ಈ ಕೆಲಸವು ಜುಲೈಯಿಂದ ಆಗಸ್ಟ್ ತಿಂಗಳಿನವರೆಗೆ ಇರುತ್ತದೆ. ದಿನಕ್ಕೆ 500 ಯುವಾನ್ (ಅಂದಾಜು ₹6,000) ಪಾವತಿಸಲಾಗುತ್ತದೆ. ಉದ್ಯೋಗದ ಅವಧಿ ಒಂದೆಡೆಯಾದ್ರೆ, ಅದು ನೀಡುತ್ತಿರುವ ಅನುಭವಗಳು ಅದ್ಭುತವಾಗಿವೆ ಎಂದು ಹೇಳಲಾಗಿದೆ.
ಉದ್ಯೋಗಕ್ಕೆ ಬೇಕಾರುವ ಅರ್ಹತೆಗಳು
* ನೇಮಕಾತಿ ಜಾಹೀರಾತಿನ ಪ್ರಕಾರ, ಈ ಉದ್ಯೋಗಕ್ಕೆ 16 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
* ಈ ಉದ್ಯೋಗಕ್ಕೆ ನೇಮಕವಾದ ಅಭ್ಯರ್ಥಿಗಳು 'ಕಾಡುಮನುಷ್ಯರ' ವೇಷಭೂಷಣ ಧರಿಸಿ ಕಾಡಿನಲ್ಲಿ ಸುತ್ತಾಡಬೇಕು
* ನೃತ್ಯ ಮಾಡುವುದರ ಜೊತೆಗೆ ಕಾಡುಮನುಷ್ಯರ ರೀತಿಯೇ ನಟನೆ ಮಾಡಬೇಕು
* ಪ್ರವಾಸಿಗರೊಂದಿಗೆ ಹಾಸ್ಯದ ರೀತಿಯಲ್ಲಿ ಸಂಭಾಷಣೆ ನಡೆಸಬೇಕು
* ತಮ್ಮ ಅನುಭವಗಳನ್ನ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಕು
* ಎಲ್ಲಕ್ಕಿಂತಲೂ ಮುಖ್ಯವಾಗಿ ಅಭ್ಯರ್ಥಿಗಳು ಪ್ರವಾಸಿಗರು ನೀಡುವ ಆಹಾರವನ್ನ ತಿನ್ನಲು ಸಿದ್ಧರಾಗಿರಬೇಕು.
* ವಯಸ್ಸು ಅಥವಾ ಲಿಂಗ ಸಂಬಂಧಿತ ಯಾವುದೇ ರೀತಿಯ ನಿರ್ಬಂಧಗಳಿಲ್ಲ.
* ಆದರೆ ಅರ್ಜಿದಾರರು ಉತ್ತಮ ಆರೋಗ್ಯದ ವೈದ್ಯಕೀಯ ಪ್ರಮಾಣಪತ್ರವನ್ನ ಕಡ್ಡಾಯವಾಗಿ ಸಲ್ಲಿಸಬೇಕು.
ಅಭ್ಯರ್ಥಿಗಳು ಯಾವ ರೀತಿಯ ವ್ಯಕ್ತಿತ್ವ ಹೊಂದಿರಬೇಕು?
ಕಂಪನಿಯ ಪ್ರಕಾರ, ಮುಕ್ತ ವ್ಯಕ್ತಿತ್ವ ಹೊಂದಿರುವವರು, ಸೃಜನಶೀಲವಾಗಿ ಸಣ್ಣ ವಿಡಿಯೋಗಳನ್ನು ಚಿತ್ರೀಕರಿಸಬಲ್ಲವರು ಹಾಗೂ ಕಾಡಿನಲ್ಲಿ ದೀರ್ಘಕಾಲವಿರುವ ಶಕ್ತಿ ಮತ್ತು ಉತ್ಸಾಹ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ "ಕಚ್ಚಾ ಆಹಾರ ತಿನ್ನುವ ಆಸಕ್ತಿ ಇರುವವರಿಗೆ" ವಿಶೇಷ ಆದ್ಯತೆ ಸಿಗುತ್ತದೆ ಎಂದು ಕಂಪನಿ ಹೇಳಿದೆ.
ಕಠಿಣ ನಿಯಮಗಳು
* ಈ ಕೆಲಸಕ್ಕೆ ಕೆಲವೊಂದು ಕಠಿಣ ನಿಯಮಗಳೂ ಇವೆ...
* ಅಭ್ಯರ್ಥಿಗಳು ಮಾತನಾಡಬಾರದು. ಕೇವಲ 'ಪರ್ರಿಂಗ್' ಎಂಬ ಶಬ್ದವನ್ನು ಮಾತ್ರ ಬಳಸಬೇಕು.
* ಶೌಚಾಲಯಕ್ಕೆ ಮಾರ್ಗದರ್ಶನ ಕೇಳುವ ಸಂದರ್ಭದಲ್ಲಿ ಮಾತ್ರ ಮಾತನಾಡಬೇಕು
* ಕಾಡು ಪ್ರಾಣಿಗಳನ್ನ ಯಾವುದೇ ಕಾರಣಕ್ಕೂ ಮುಟ್ಟಬಾರದು
* ಅಪರಿಚಿತ ಜೀವಿಗಳನ್ನ ಕಂಡರೆ ತಕ್ಷಣ ಓಡಿಹೋಗಬೇಕು.
ಕೆಲಸದ ಸಮಯ: ಬೆಳಗ್ಗೆ 8 ರಿಂದ ಸಂಜೆ 5ರವರೆಗೆ
ಈ ವಿಚಿತ್ರ ಉದ್ಯೋಗದ ಆಫರ್ ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಟ್ರೋಲ್ ಕೂಡ ಆಗುತ್ತಿದೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, ʼನನಗೆ ಈ ಕೆಲಸದಲ್ಲಿ ಆಸಕ್ತಿ ಇದೆ. ನಾನು ಇದನ್ನು ದಿನಕ್ಕೆ ಕೇವಲ 300 ಯುವಾನ್‌ಗಳಿಗೆ ಸಹ ಮಾಡುತ್ತೇನೆʼ ಅಂತಾ ಹೇಳಿದ್ದಾನೆ. ಅನೇಕರು ಇನ್ನೂ ಫನ್ನಿಫನ್ನಿಯಾಗಿ ಕಾಮೆಂಟ್‌ಗಳನ್ನ ಮಾಡುತ್ತಿದ್ದಾರೆ. ಅನೇಕರು ತಮಗೂ ಈ ಜಾಬ್ ಇದ್ದರೆ ನೀಡಿ ಪ್ಲೀಸ್ ಅಂತಾ ಮನವಿ ಕೂಡ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ