Snake bite Video: ಮಳೆಗಾಲದಲ್ಲಿ ಹಾವುಗಳ ಕಾಟ ತುಂಬಾ ಹೆಚ್ಚಾಗಿರುತ್ತದೆ. ವಿಶೇಷವಾಗಿ ಹಾವುಗಳು ಮಾನವ ವಾಸಸ್ಥಳಗಳಿಗೆ ಹೆಚ್ಚಾಗಿ ಬರುತ್ತವೆ. ಹಾವುಗಳು ಹೆಚ್ಚಾಗಿ ಮನೆಗಳಲ್ಲಿ, ಕಾರ್ಪೆಟ್‌ಗಳ ಮೇಲೆ, ಬಟ್ಟೆಗಳಲ್ಲಿ, ಬೂಟುಗಳಲ್ಲಿ ಮತ್ತು ಕತ್ತಲೆಯಾದ ಸ್ಥಳಗಳಲ್ಲಿ ಸುತ್ತಾಡುತ್ತವೆ. ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಹಾವುಗಳ ವಿಡಿಯೋಗಳು ಸಖತ್ ವೈರಲ್ ಆಗಿ ಸಂಚಲನ ಮೂಡಿಸುತ್ತಿವೆ. ಅನೇಕ ಜನರು ಹಾವುಗಳನ್ನು ಕಂಡ ತಕ್ಷಣವೇ ಓಡಿಹೋಗುತ್ತಾರೆ.
ಕೆಲವರು ಹಾವುಗಳನ್ನು ಉಳಿಸಿ ಕಾಡಿಗೆ ಬಿಡುತ್ತಾರೆ. ಕೆಲವೊಮ್ಮೆ ಹಾವು ಹಿಡಿಯುವವರು ಹಾವುಗಳನ್ನ ಹಿಡಿಯುತ್ತಿದ್ದೇವೆಂದು ಭಾವಿಸುವ ಘಟನೆಗಳು ಸಂಭವಿಸುತ್ತವೆ. ಕೆಲವೊಮ್ಮೆ ಹಾವುಗಳು ಕೋಪದಿಂದ ಉರಗ ರಕ್ಷಕರ ಮೇಲೆ ದಾಳಿ ಮಾಡಿ ಕಚ್ಚುವ ಸಂದರ್ಭಗಳೂ ಘಟಿಸುತ್ತವೆ. ರಕ್ಷಿಸಲು ಹೋದ ಉರಗ ರಕ್ಷಕರೇ ಅವುಗಳಿಂದ ಕಚ್ಚಿಸಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಇದಕ್ಕೆ ನಿದರ್ಶನವೆಂಬಂತೆ ಉರಗ ರಕ್ಷಕನೊಬ್ಬ ಹಾವಿನಿಂದ ಕಚ್ಚಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಉಕ್ರೇನ್‌ನಿಂದ ರಷ್ಯಾದ ಮೇಲೆ ಡ್ರೋನ್ ದಾಳಿ
ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿನ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಜೌನ್‌ಪುರದಲ್ಲಿ ಮೀನುಗಾರಿಕೆಗೆ ಇಟ್ಟಿದ್ದ ಬಲೆಯಲ್ಲಿ ನಾಗರಹಾವು ಸಿಲುಕಿಕೊಂಡಿತ್ತು. ಸ್ಥಳೀಯ ಜನರು ಹಾವು ಹಿಡಿಯುವ ಉರಗ ರಕ್ಷಕ ಮುರಳಿ ವಾಲೆ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಅವರು ಹಾವನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಾವು ಇದ್ದಕ್ಕಿದ್ದಂತೆ ಬಲೆಯನ್ನ ಬಿಡಿಸುತ್ತಿದ್ದ ಮುರಳಿಯವರಿಗೆ ಕೈಗೆ ಕಚ್ಚಿಬಿಟ್ಟಿದೆ. ಇದರಿಂದ ಅವರು ಆಘಾತಕ್ಕೊಳಗಾದರು. ಕೂಡಲೇ ಅಲ್ಲಿದ್ದ ಜನರು ಮುರಳಿ ವಾಲೆರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
सांप पकड़ने के लिए मशहूर मुरलीवाले हौसला को आज कोबरा सांप ने डंस लिया। हालत बिगड़ने पर उन्हें अस्पताल में भर्ती करवाया है। मुरलीवाले फेमस यूट्यूबर हैं। उनके यूट्यूब पर 15.8M, FB पर 5.5M, इंस्टा पर 2.5M फॉलोवर्स हैं। वो अब तक करीब 8 हजार सांप पकड़ चुके हैं।
?जौनपुर, UP pic.twitter.com/z31Mt17krS— Sachin Gupta (@SachinGuptaUP) June 3, 2025
ಮುರಳಿಯವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಒಟ್ಟಾರೆ ಈ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾವನ್ನು ಉಳಿಸಲು ಪ್ರಯತ್ನಿಸುವಾಗ ಅದು ಅವರ ಪ್ರಾಣಕ್ಕೆ ಸಂಚಕಾರ ತಂದಿದೆ ಅಂತಾ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನ ಇದುವರೆಗೆ 2.32 ಲಕ್ಷ ಮಂದಿ ವೀಕ್ಷಿಸಿದ್ದು, ಆಘಾತ ವ್ಯಕ್ತಪಡಿಸಿದ್ದಾರೆ. ಅನೇಕರು ಹಾವು ಹಿಡಿಯುವ ಕೆಲಸ ಅಷ್ಟು ಸುಲಭವಲ್ಲ ಅಂತಾ ಹೇಳಿದರೆ, ಇನ್ನೂ ಕೆಲವರು, ʼಹಾವು ಉಳಿಸಲು ಉರಗ ರಕ್ಷಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆʼ ಅಂತಾ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ 21 ಕ್ರೀಡಾಪಟುಗಳು ದುರ್ಮರಣ; ʼಇದು ರಾಷ್ಟ್ರೀಯ ದುರಂತʼ ಎಂದ ಕ್ರೀಡಾ ಸಚಿವಾಲಯ!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









