Snake Viral Video: ಟಿವಿಯಲ್ಲಿ ಬರಬೇಕಿದ್ದ ನಾಗಪ್ಪ (Snake) ಟಿವಿ ಒಳಗೇ ಸೇರಿ ಎಲ್ಲರನ್ನೂ ಬೆಚ್ಚಿಬೀಳಿಸಿದ ಘಟನೆ ಚಾಮರಾಜನಗರದ ಸೋಮವಾರಪೇಟೆಯಲ್ಲಿ ನಡೆದಿದೆ.
ಚಾಮರಾಜನಗರದ ಸೋಮವಾರಪೇಟೆಯ ಬೆಲ್ಲದ ದೇವಣ್ಣ ಎಂಬವರ ಮನೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಉಪಯೋಗಿಸದೇ ಮನೆ ಹೊರಭಾಗದಲ್ಲಿ ಇಟ್ಟಿದ್ದ ಟಿವಿಯೊಳಗೆ ಸೇರಿಕೊಂಡಿದ್ದ ಭಾರೀ ಗಾತ್ರದ ಹಾವು ಬೆಚ್ಚಗೆ ಮಲಗಿದ್ದನ್ನು ಕಂಡ ಮನೆಮಂದಿ ಬೆಚ್ಚಿಬಿದ್ದಿದ್ದಾರೆ.
ಸಾಕುನಾಯಿ ಟಿವಿ ಕಡೆ ಬೊಗಳುವುದನ್ನ ಕಂಡು ಪರಿಶೀಲಿಸಿದಾಗ ಅದರೊಳಗೆ ಹಾವು ಇರುವುದು ಪತ್ತೆಯಾಗಿದ್ದು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಉರಗತಜ್ಞ ಸ್ನೇಕ್ ಚಾಂಪ್ ಬಂದು ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಕಳೆದ ಹಲವಾರು ದಿನಗಳಿಂದ ಹಳೇ ಪೋರ್ಟಬಲ್ ಟಿವಿಯನ್ನು ಉಪಯೋಗಿಸದೇ ಹೊರಗಿಡಲಾಗಿತ್ತು. ಆ ಟಿವಿಯೊಳಗೆ ಇಲಿಗಳು ಕೂಡ ಮನೆ ಮಾಡಿಕೊಂಡಿದ್ದವು. ಇಲಿ ಬೇಟೆಗೆ ಬಂದ ನಾಗಪ್ಪ ಟಿವಿ ಒಳಗೇ ಸೇರಿಕೊಂಡು ಎಲ್ಲರನ್ನೂ ತಬ್ಬಿಬ್ಬು ಮಾಡಿದೆ.
ಟಿವಿ ಒಳಗಿದ್ದ ನಾಗರ ಹಾವಿನ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
ಕೊನೆಗೂ ಬದುಕಿದೆಯಾ ಬಡ ಜೀವ ಎಂಬಂತೆ ಟಿವಿಯೊಳಗಿದ್ದ ಭಾರೀ ಗಾತ್ರದ ನಾಗರಹಾವನ್ನು ರಕ್ಷಿಸಿದ ಉರಗ ತಜ್ಞ ಅದನ್ನು ಅರಣ್ಯದ ಸುರಕ್ಷಿತ ಸ್ಥಳಕ್ಕೆ ಸೇರಿದೆ.
ಇದನ್ನೂ ಓದಿ- ನಿತ್ಯ ನೂರಾರು ಜನ ಓಡಾಡುವ ಗ್ಲಾಸ್ ಹೌಸ್‌ನಲ್ಲಿ ದೈತ್ಯ ಹೆಬ್ಬಾವು ಪತ್ತೆ: ವಿಡಿಯೋ ವೈರಲ್









