ರಿಷಬ್ ಪಂತ್‌ ಸಹೋದರಿಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಧೋನಿ, ರೈನಾ..! ವೀಡಿಯೋ ವೈರಲ್‌

ಈ ಸಮಾರಂಭದಲ್ಲಿ ಹಲವು ಭಾರತೀಯ ಕ್ರಿಕೆಟ್ ತಂಡದ ಹಾಲಿ ಮತ್ತು ಮಾಜಿ ಆಟಗಾರರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.

Written by - Manjunath Naragund | Last Updated : Mar 12, 2025, 04:43 PM IST
  • ಇಬ್ಬರೂ ಒಬ್ಬನ್ನೊಬ್ಬರು ಬಿಟ್ಟುಕೊಡದಷ್ಟು ಅವಿನಾಭಾವ ಗೆಳೆತನ ಅವರದ್ದಾಗಿದೆ.
  • ಧೋನಿಯವರ ಕುಟುಂಬದಲ್ಲಿ ನಡೆಯುವ ಎಲ್ಲ ಸಮಾರಂಭಗಳಲ್ಲಿ ಪಂತ್ ಭಾಗಿಯಾಗುತ್ತಿದ್ದರು
  • ಹಾಗಾಗಿ ದೋನಿಯವರು ಸಹ ರಿಷಬ್‌ರವರ ಸಹೋದರಿಯ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ
 ರಿಷಬ್ ಪಂತ್‌ ಸಹೋದರಿಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಧೋನಿ, ರೈನಾ..! ವೀಡಿಯೋ ವೈರಲ್‌

ಟೀಮ್ ಇಂಡಿಯಾದ ಪ್ರಸಿಧ್ದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ರವರು ಉದ್ಯಮಿ ಅಂಕಿತ್ ಚೌಧರಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆ ಸಂಭ್ರಮದ ಫೋಟೊ ಮತ್ತು ವೀಡಿಯೋಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಸಕ್ಕತ್‌ ಸುದ್ದಿ ಮಾಡುತ್ತಿವೆ.ಅದರಲ್ಲೂ ವಿಶೇಷವಾಗಿ ಸಮಾರಂಭದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಭಾಗವಹಿಸಿರುವುದು ವಿವಾಹವನ್ನು ಮತ್ತಷ್ಟು ಕಳೆಕಟ್ಟುವಂತೆ ಮಾಡಿತು.

Add Zee News as a Preferred Source

ಉತ್ತರಾಖಂಡದ ಮಸ್ಸೂರಿಯಲ್ಲಿ ಈ ವಿವಾಹ ಸಮಾರಂಭವು ನಡೆಯಿತು, ಈ ಸಮಾರಂಭದಲ್ಲಿ ಹಲವು ಭಾರತೀಯ ಕ್ರಿಕೆಟ್ ತಂಡದ ಹಾಲಿ ಮತ್ತು ಮಾಜಿ ಆಟಗಾರರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.ಮಂಗಳವಾರ ರಾತ್ರಿ ನಡೆದಿದ್ದ ಸಂಗೀತ್‌ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್‌ ಧೋನಿ ಮತ್ತು ಸುರೇಶ್‌ ರೈನಾ ಸೇರಿ 'ದಮಾ ದಂ ಮಸ್ತ್ ಕಲಂದರ್' ಹಾಡಿಗೆ ಕುಣಿತ ಹಾಕಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಿಷಬ್‌ ಪಂತ್ ಧೋನಿಯೊಂದಿಗೆ ಉತ್ತಮ ಸಂಬಂದವನ್ನು ಹೊಂದಿದ್ದು, ಇಬ್ಬರೂ ಒಬ್ಬನ್ನೊಬ್ಬರು ಬಿಟ್ಟುಕೊಡದಷ್ಟು ಅವಿನಾಭಾವ ಗೆಳೆತನ ಅವರದ್ದಾಗಿದೆ, ಧೋನಿಯವರ ಕುಟುಂಬದಲ್ಲಿ ನಡೆಯುವ ಎಲ್ಲ ಸಮಾರಂಭಗಳಲ್ಲಿ ಪಂತ್ ಭಾಗಿಯಾಗುತ್ತಿದ್ದರು. ಹಾಗಾಗಿ ದೋನಿಯವರು ಸಹ ರಿಷಬ್‌ರವರ ಸಹೋದರಿಯ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ

ರಿಷಬ್‌ ಪಂತ್‌ ಸೋಮವಾರವಷ್ಟೇ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಸಂಭ್ರಮವನ್ನು ಮುಗಿಸಿಕೊಂಡು ಭಾರತಕ್ಕೆ ಬಂದಿದ್ದರು.ಇನ್ನು ಮದುವೆ ಸಂಭ್ರಮದಲ್ಲಿ ಸುರೇಶ್‌ ರೈನಾ, ಧೋನಿ ಸೇರಿ ಕೆಲವರು ನೃತ್ಯ ಮಾಡುತ್ತಿದ್ದಾಗ ಪಂತ್‌ ಕೂಡ ಸಾಥ್‌ ನೀಡಿದ್ದರು.ಈ ವೀಡಿಯೊವನ್ನು ನೋಡಿ ನೆಟ್ಟಿಗರು ಕಮೆಂಟ್ಗಳ ಸುರಿಮಳೆಯನ್ನು ಸುರಿಸಿದಾರೆ.ಕಳೆದ ವರ್ಷ ಸಾಕ್ಷಿ ಪಂತ್ ಮತ್ತು ಅಂಕಿತ್ ಚೌಧರಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

 

 

About the Author

Trending News