)
ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ಇತರ ಜೀವಿಗಳ ಮೇಲೆಯೇ ಅವಲಂಬಿತವಾಗಿರುತ್ತದೆ. ಒಂದು ಜೀವಿ ಬದುಕಿ ಉಳಿಯಬೇಕಾದರೆ ಇನ್ನೊಂದು ಜೀವಿಯೇ ಆಹಾರ. ಈ ಜೀವಿಗಳ ನಡುವಿನ ಒಂದು ಕೊಂಡಿ ಮುರಿದುಹೋದರೂ, ಇಡೀ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಂದು ಜೀವಿಯು ಯಾವುದಾದರೂ ಒಂದು ಜೀವಿಯ ಆಹಾರವೇ. ಉದಾಹರಣೆಗೆ, ಹಾವುಗಳು ಇಲಿಗಳನ್ನು ತಿಂದರೆ, ಹಾವನ್ನು ಹದ್ದು ಬೇಟೆಯಾಡುತ್ತದೆ. ಹೀಗೆಯೇ ಪ್ರಾಣಿಗಳ ಜೀವನ ಚಕ್ರ ಸಾಗುತ್ತದೆ.
ಆದರೆ ಕೆಲವೊಮ್ಮೆ ಬೇಟೆಗಾರನೇ ಸ್ವತಃ ಬೇಟೆಯಾಗಿ ಬಿಡುವ ಆಶ್ಚರ್ಯಕರ ಘಟನೆ ನಡೆದು ಬಿಡುತ್ತದೆ.ಇತ್ತೀಚೆಗೆ, ಇದೇ ರೀತಿಯ ಒಂದು ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರ ನಂಬಲು ಸಾಧ್ಯವೇ ಇಲ್ಲ ಎನ್ನುವ ಘಟನೆಯನ್ನು ತೋರಿಸುತ್ತದೆ. ಈ ವೈರಲ್ ಪೋಸ್ಟ್ ಅನ್ನು ಇಲ್ಲಿಯವರೆಗೆ 35.8 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಹೆರಾನ್ ಹೊಟ್ಟೆಯಿಂದ ಹೊರ ಬಂದ ಈಲ್ :
ಈ ಅಚ್ಚರಿಯ ಚಿತ್ರವನ್ನು ನೋಡಿದ ನಂತರ ಜನರು ಆಘಾತಕಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಮಾತ್ರವಲ್ಲ ಈ ಘಟನೆ ಬಗ್ಗೆ ಫೋಟೋ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹೆರಾನ್ ಹಕ್ಕಿ ಈಲ್ (ಮೀನು) ಅನ್ನು ತನ್ನ ಬೇಟೆಯನ್ನಾಗಿ ಮಾಡಿಕೊಂಡು ಆಕಾಶದೆತ್ತರಕ್ಕೆ ಹಾರಿದೆ. ಆದರೆ ಹಕ್ಕಿ ಮೀನನ್ನು ತಿನ್ನಲು ಪ್ರಯತ್ನಿಸುತ್ತಿದ್ದಂತೆ, ಮೀನು ಹೆರಾನ್ ಹೊಟ್ಟೆಯನ್ನು ಸೀಳಿ ಹೊರಗೆ ಬರಲು ಪ್ರಯತ್ನಿಸಿದೆ. ಛಾಯಾಗ್ರಾಹಕ ಈ ಅದ್ಭುತ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಈಗ ಜನರು ಅದರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
A photographer has captured the incredible moment an eel escaped from heron’s stomach while the bird was still in flight. pic.twitter.com/PK5LMVUbF4
— Nature is Amazing ☘️ (@AMAZlNGNATURE) December 27, 2024
ಈ ಫೋಟೋದಲ್ಲಿ ಹೆರಾನ್ ಹಕ್ಕಿಯ ಹೊಟ್ಟೆಯಿಂದ ಈಲ್ ಹೊರಬರುವುದನ್ನು ಮತ್ತು ಹೆರಾನ್ ತನ್ನ ಕಾಲುಗಳನ್ನು ಹಿಂದಕ್ಕೆ ಇರಿಸಿ ಗಾಳಿಯಲ್ಲಿ ಹಾರುವುದನ್ನು ಸ್ಪಷ್ಟವಾಗಿ ಕಾಣಬಹುದು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗುತ್ತಿದ್ದ ಹಾಗೆಯೇ ಕಾಮೆಂಟ್ ಗಳ ಮಳೆಯಾಗಿದೆ. ಇದೊಂದು ಕೈಯ್ಯಲ್ಲಿ ಬಿಡಿಸಿರುವ ಚಿತ್ರ ಎನ್ನುವ ಅಭಿಪ್ರಾಯ ಕೂಡಾ ವ್ಯಕ್ತವಾಗಿದೆ. ಈ ಪೋಸ್ಟ್ ಹಳೆಯದಾಗಿದ್ದರೂ, ಮತ್ತೊಮ್ಮೆ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ