ಮಗು ತಿನ್ನಲು ಬಂದ ಮೊಸಳೆ ತಕ್ಕ ಪಾಠ ಕಳಿಸಿದ ಆನೆ..! ಮೈ ಜುಮ್ಮೆನಿಸುತ್ತೆ ಈ ಭಯಾನಕ ವಿಡಿಯೋ..

Elephant Crocodile video : ಮರಿಯೊಂದಿಗೆ ನೀರು ಕುಡಿಯಲು ಹೋಗಿತ್ತು ಆನೆ... ನೀರಿನಲ್ಲಿದ್ದ ಮೊಸಳೆ ಇದ್ದಕ್ಕಿದ್ದಂತೆ ಆನೆ ಮರಿ ಮೇಲೆ ದಾಳಿ ಮಾಡಿತು. ಇದರಿಂದ ಕೋಪಗೊಂಡ ತಾಯಿ ಆನೆ ಮೊಸಳೆಯೊಂದಿಗೆ ಭೀಕರವಾಗಿ ಹೋರಾಡಿ ಅದಕ್ಕೆ ತಕ್ಕ ಪಾಠ ಕಲಿಸಿತು.. ಇದೀಗ ಈ ಕುರಿತು ವಿಡಿಯೋ ವೈರಲ್‌ ಆಗಿದೆ..

Written by - Krishna N K | Last Updated : May 15, 2025, 10:33 PM IST
    • ಮರಿಯೊಂದಿಗೆ ನೀರು ಕುಡಿಯಲು ಹೋಗಿತ್ತು ಆನೆ...
    • ನೀರಿನಲ್ಲಿದ್ದ ಮೊಸಳೆ ಇದ್ದಕ್ಕಿದ್ದಂತೆ ಆನೆ ಮರಿ ಮೇಲೆ ದಾಳಿ ಮಾಡಿತು.
    • ಮೊಸಳೆಯೊಂದಿಗೆ ಭೀಕರವಾಗಿ ಹೋರಾಡಿ ಅದಕ್ಕೆ ತಕ್ಕ ಪಾಠ ಕಲಿಸಿತು.
ಮಗು ತಿನ್ನಲು ಬಂದ ಮೊಸಳೆ ತಕ್ಕ ಪಾಠ ಕಳಿಸಿದ ಆನೆ..! ಮೈ ಜುಮ್ಮೆನಿಸುತ್ತೆ ಈ ಭಯಾನಕ ವಿಡಿಯೋ..

Elephant attack crocodile video : ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ. ಎಲ್ಲದಕ್ಕೂ ಪರ್ಯಾಯವಿದೆ.. ಆದರೆ ತಾಯಿಯ ಪ್ರೀತಿಗೆ ಪರ್ಯಾಯವಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಒಂಬತ್ತು ತಿಂಗಳು ಸಹಿಸಿಕೊಂಡು, ಕಷ್ಟ, ನೋವು ಅನುಭವಿಸಿ ಒಬ್ಬ ತಾಯಿ ತನ್ನ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅದಾದ ನಂತರ, ಅವರು ಬೆಳೆದು ದೊಡ್ಡವರಾಗುವವರೆಗೂ, ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸುತ್ತಾಳೆ..

ಇಂತಹ ತಾಯಿಯ ಪ್ರೀತಿ ಮನುಷ್ಯರಲ್ಲಿ ಮಾತ್ರವಲ್ಲ.. ಮಾತು ಬಾರದ ಜೀವಿಗಳಲ್ಲಿಯೂ ಒಂದೇ ರೀತಿ ಇರುತ್ತೆ.. ಬೇರೆ ಪ್ರಾಣಿಗಳು ಆಕಸ್ಮಿಕವಾಗಿ ತಮ್ಮ ಮಕ್ಕಳ ತಂಟೆಗೆ ಬಂದರೆ, ಜೀವದ ಹಂಗು ತೊರೆದು ಎಷ್ಟೇ ಬಲಶಾಲಿಯಾಗಿರಲಿ ಅವುಗಳ ಜೊತೆಗೆ ಹೋರಾಡಿ ತಮ್ಮ ಮಕ್ಕಳನ್ನು ರಕ್ಷಿಸುತ್ತವೆ. ಅದೇ ರೀತಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:Viral Video: ಕಾಡು ಮಧ್ಯೆ ಗರಿಬಿಚ್ಚಿ ಕುಣಿಯುತ್ತಿದ್ದ ನವಿಲನ್ನು ಬೇಟೆಯಾಡಲು ಹೊಂಚು ಹಾಕಿದ ಹುಲಿ... ಮುಂದೇನಾಯ್ತು! ವಿಡಿಯೋ ನೋಡಿ

ಈ ವಿಡಿಯೋದಲ್ಲಿ, ಕಾಡಿನಲ್ಲಿ ಆನೆಯೊಂದು ತನ್ನ ಮರಿಯೊಂದಿಗೆ ನೀರು ಕುಡಿಯಲು ಸರೋವರಕ್ಕೆ ಹೋಗಿತ್ತು. ಅದರಲ್ಲಿ ಈಗಾಗಲೇ ಒಂದು ಮೊಸಳೆ ಇತ್ತು. ಅದು ಮರಿ ಆನೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಇದರಿಂದ ತಾಯಿ ಆನೆ ಕೋಪಗೊಂಡಿತು.. ಅಲ್ಲದೆ, ನೀರಿಗಿಳಿದು, ತನ್ನ ಸೊಂಡಿಲಿನಿಂದ ಮೊಸಳೆಯನ್ನು ಹಿಡಿದು... ಹೊರಗೆಳೆದು. ಘರ್ಜಿಸುತ್ತಾ, ಮೊಸಳೆಯನ್ನು ತನ್ನ ಪಾದಗಳ ಕೆಳಗೆ ತುಳಿದು ಹಾಕಿದೆ.

ಆನೆ ದಾಳಿಯಿಂದ ತತ್ತರಿಸಿದ ಮೊಸಳೆ, ಹೇಗೋ ಆನೆಯಿಂದ ತನ್ನನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮತ್ತೆ ಎಲ್ಲಿ ಆನೆ ದಾಳಿ ಮಾಡುತ್ತೆ ಅಂತ ನೀರಿಗೆ ಓಡಿಹೋಯಿತು. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆನೆಯ ತಾಯಿಯ ಪ್ರೀತಿಯನ್ನು ನೋಡಿ ನೆಟ್ಟಿಗರು ಭಾವುಕರಾಗುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News