ಕಸ ತಂದು ಹಾಕಿ, ಅದೇ ಕಸದಿಂದ ನಿಮ್ಮ ಪಿಂಡ ಪ್ರದಾನ ಮಾಡಲಾಗುವುದು: ವೈರಲ್ ಆಯ್ತು ಬ್ಯಾನರ್
Viral News: ಪ್ರಕೃತಿಯನ್ನು ನಾವು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೋ ಅದು ನಮ್ಮನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳುತ್ತದೆ. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುವ ಸಾಮಾನ್ಯ ಸಂಗತಿಯನ್ನು ನಾವು ಮರೆತಿದ್ದೇವೆ.
Viral News: ಜನ ಹೇಗೆಂದರೆ ಮೊಬೈಲ್ ನೋಡ್ಕೊಂಡು ಗಂಟೆಗಟ್ಟಲೆ ಟೈಮ್ ವೆಸ್ಟ್ ಮಾಡ್ತಾರೆ. ಮನೆ ಮುಂದೆ ಕಸ ತೆಗೆದುಕೊಂಡು ಹೋಗುವ ವ್ಯಾನ್ ಬಂದಾಗಲೂ ಬೆಡ್ ಶೀಟ್ ಒದ್ದುಕೊಂಡು ಮಲಗಿರುತ್ತಾರೆ ಅಥವಾ ಮೊಬೈಲ್ ಇಡ್ಕೊಂಡು ಮೈಮರೆತಿರುತ್ತಾರೆ. ಆಮೇಲೆ ಅರ್ಜೆಂಟ್ ಅರ್ಜೆಂಟ್ ಆಗಿ ಕೆಲಸಕ್ಕೆ ಹೋಗುವಾಗ ಕಸವನ್ನು ಕಂಡ ಕಂಡಲ್ಲಿ ಎಸೆದು ಹೋಗುತ್ತಾರೆ. ಇಂಥ ‘ಸೋಕಾಲ್ಡ್ ನಾಗರೀಕರಿಗಾಗಿ’ ಇಲ್ಲಿನ ಗ್ರಾಮದ ಜನರು ‘ಕಸ ತಂದು ಹಾಕಿ. ಅದೇ ಕಸದಿಂದ ನಿಮ್ಮ ಪಿಂಡ ಪ್ರದಾನವನ್ನು ಇಲ್ಲೇ ಮಾಡೋಣ; ಕಸ ಬಿಸಾಡುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಬರೆದಿರುವ ಬ್ಯಾನರ್ ಹಾಕಿದ್ದಾರೆ. ಈ ಬ್ಯಾನರ್ ಈಗ ವೈರಲ್ ಆಗುತ್ತಿದೆ.
ಪ್ರಕೃತಿಯನ್ನು ನಾವು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೋ ಅದು ನಮ್ಮನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳುತ್ತದೆ. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುವ ಸಾಮಾನ್ಯ ಸಂಗತಿಯನ್ನು ನಾವು ಮರೆತಿದ್ದೇವೆ. ಜನ ನಿತ್ಯವೂ ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳದಿರುವುದು ಬೇಸರದ ವಿಷಯವಾಗಿದೆ.
ಇದನ್ನೂ ಓದಿ- ಕೇರೆ ಹಾವನ್ನು ಚೇಸ್ ಮಾಡಿ ಬಂದು ಮನೆಯ ಟ್ರಂಕ್‌ನಲ್ಲೇ ಅಡಗಿ ಕುಳಿತ 11 ಅಡಿ ಉದ್ದದ ಕಾಳಿಂಗಸರ್ಪ, ಮುಂದೆ..!
ಕಸ ಹಾಕುವವರಿಗೆ ದಂಡ ವಿಧಿಸುವ ಅಥವಾ ಎಚ್ಚರಿಕೆ ನೀಡುವ ಬ್ಯಾನರ್ ಹಾಕುವುದನ್ನು ಅಥವಾ ವಿಡಿಯೋಗಳನ್ನು ಪ್ರದರ್ಶನ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಕಸವನ್ನು ಎಲ್ಲೆಂದರಲ್ಲಿ ಹಾಕುವವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಬ್ಯಾನರ್ ಹಾಕಲಾಗಿದೆ. ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಎಚ್ಚರಿಕೆ ನೀಡಲೆಂದು ಕಟ್ಟಿರುವ ಬ್ಯಾನರ್ ಭಾರಿ ವೈರಲ್‌ಆಗಿದೆ. ಈ ರೀತಿಯು ಸಹ ಜನರಿಗೆ ಎಚ್ಚರಿಕೆ ಕೊಡಬಹುದು ಎಂಬುದನ್ನು ತಿಳಿಸಿಕೊಡಲಾಗಿದೆ.
ಬಂಡೀಪುರ- ವೈನಾಡು ರಸ್ತೆಯಲ್ಲಿ ಹಾಡುಹಗಲಲ್ಲೇ ಆನೆ ಮರಿಗೆ ಕೀಟಲೆ ಮಾಡಿದ ಕಿಡಿಗೇಡಿಗಳು: ವಿಡಿಯೋ ವೈರಲ್
ಇನ್‌ಸ್ಟಾಗ್ರಾಮ್‌ನಲ್ಲಿ Mr_chintu_memes ಹೆಸರಿನ ಖಾತೆಯಿಂದ ಇಂಥ ಭಿನ್ನವಾದ ಬ್ಯಾನರ್ ಅನ್ನು ಹಂಚಿಕೊಂಡಿದ್ದು, ‘ನಿಮ್ಮ ಹೆಣ ಸುಡಲು ಕಸಬೇಕು ಕಸ ತಂದು ಹಾಕು’ ಎಂದು ನೇರವಾಗಿ ಕಸ ಹಾಕುವವರಿಗೆ ಎಚ್ಚರಿಕೆ ಮೂಡಿಸಲಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.