ಕೇವಲ 180 ಮೀಟರ್ ದೂರಕ್ಕೆ ola ಬುಕ್ ಮಾಡಿದ ಯುವತಿ !ಕಾರಣ ಕೇಳಿ ಚಾಲಕನೇ ಫುಲ್ ಶಾಕ್

ಭಯ ಎನ್ನುವುದು ಮನುಷ್ಯನನ್ನು ಏನು ಬೇಕಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಉದಾಹರಣೆ ಇದು. ಈ ಯುವತಿ ಕೇವಲ 180 ಮೀ ದೂರ ಕ್ರಮಿಸಲು ಓಲಾ ಬೈಕ್ ಬುಕ್ ಮಾಡಿದ್ದಾಳೆ. 

Written by - Ranjitha R K | Last Updated : Jun 6, 2025, 12:58 PM IST
  • ಕೇವಲ 180 ಮೀಟರ್ ದೂರ ಕ್ರಮಿಸಲು ಓಲಾ ಬೈಕ್ ಬುಕ್
  • ಲೋಕೇಶನ್ ನೋಡಿ ದಂಗಾದ ಚಾಲಕ
  • ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರ ಪ್ರತಿಕ್ರಿಯೆ
ಕೇವಲ 180 ಮೀಟರ್ ದೂರಕ್ಕೆ ola ಬುಕ್ ಮಾಡಿದ ಯುವತಿ !ಕಾರಣ ಕೇಳಿ ಚಾಲಕನೇ ಫುಲ್ ಶಾಕ್

Ola Ride Viral Video: ವಿಚಿತ್ರ ಆದರೂ ಸತ್ಯ ಎನ್ನುತ್ತೇವಲ್ಲ ಹಾಗಿದೆ ಈ ಘಟನೆ. ಮಹಿಳೆಯೊಬ್ಬರು ಕೇವಲ 180 ಮೀಟರ್ ದೂರ ಕ್ರಮಿಸಲು ಓಲಾ ಬೈಕ್ ಬುಕ್ ಮಾಡಿದ್ದಾರೆ. ಇನ್ನು ಇಷ್ಟು ಕಡಿಮೆ ಅಂತರದ ದೂರಕ್ಕೆ ಬೈಕ್ ಬುಕ್ ಮಾಡಿರುವುದು ಯಾಕೆ ಎನ್ನುವ ಕಾರಣ ಕೇಳಿದರೆ ಎಂಥವರೂ ದಂಗಾಗಬೇಕು. 

Add Zee News as a Preferred Source

ಕೇವಲ 180 ಮೀಟರ್‌ಗೆ  ಓಲಾ ಬೈಕ್ ಬುಕ್ ಮಾಡಿದ ಯುವತಿ :
ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಣ್ಣ ವೀಡಿಯೊ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಓಲಾ ಬೈಕ್ ಸವಾರ ಯುವತಿಯ ಬಳಿ ಒಟಿಪಿ ಕೇಳುತ್ತಾನೆ. OTP ನಮೂದಿಸಿದ ನಂತರ, ಚಾಲಕನು ತಲುಪಬೇಕಾದ ಸ್ಥಳ ಕೇವಲ 180 ಮೀಟರ್ ದೂರದಲ್ಲಿದೆ ಎಂದು ನೋಡಿದಾಗ ಆಶ್ಚರ್ಯಚಕಿತನಾಗುತ್ತಾನೆ. ಆತ ಯುವತಿಯ ಬಳಿ ಲೋಕೇಶನ್ ಸರಿಯಾಗಿ ಹಾಕಿದ್ದೀರಾ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಉತ್ತರಿಸಿದ ಯುವತಿ ಹೌದು, ಇದೇ ಲೋಕೇಶನ್ ಗೆ ತಾನು ತಲುಪಬೇಕಾಗಿರುವುದು ಎಂದು ಹೇಳುತ್ತಾಳೆ. 

ಇದನ್ನೂ ಓದಿ : Viral video: ಚಲಿಸುವ ರೈಲಿನಲ್ಲಿ ರೀಲ್ಸ್‌ ಮಾಡುವ ಸಾಹಸ! ಸುಂದರವಾಗಿ ಮುಗಿಯಬೇಕಿದ್ದ ಪಯಣ ಅಂತ್ಯವಾಗಿದ್ದು ಮಾತ್ರ ಭಯಾನಕ..

ಇಲ್ಲಿ ಯುವತಿಗೆ ನಾಯಿ ಅಂದರೆ  ಬಹಳ ಭಯ. ಹಾಗಾಗಿ ಬೀದಿ ನಾಯಿಗಳಿಗೆ ಹೆದರಿ ಕೇವಲ 180 ಮೀಟರ್ ದೂರಕ್ಕೆ ಬೈಕ್ ಬುಕ್ ಮಾಡಿದ್ದಾಳೆ. ಈ ಕಾರಣ ಕೇಳಿ ಬೈಕ್ ಚಾಲಕ ಕೂಡಾ ಒಮ್ಮೆ ನಕ್ಕು ಬಿಡುತ್ತಾನೆ.  ನಂತರ ತನ್ನ ಕೆಲಸ ಪ್ರಯಾಣಿಕರನ್ನು ಅವರು ಬುಕ್ ಮಾಡಿರುವ ಸ್ಥಳಕ್ಕೆ ತಲುಪಿಸುವುದಷ್ಟೇ ಎನ್ನುವಂತೆ ಆ ಯುವತಿಯನ್ನು ಆಕೆಯ ಗಮ್ಯ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಈ ಸಣ್ಣ ಪ್ರಯಾಣಕ್ಕೆ ಯುವತಿಗೆ 19 ರೂಪಾಯಿ ಶುಲ್ಕ ತಗುಲಿದೆ. 

 

ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರ ಪ್ರತಿಕ್ರಿಯೆ : 
ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ವಿಡಿಯೋ ವೀಕ್ಷಿಸಿದ ಜನ ಕೂಡಾ ವಿಡಿಯೋ ನೋಡಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಯುವತಿಯ ನಿರ್ಧಾರವನ್ನು ವಿಚಿತ್ರ ಎಂದು ಕರೆದರೆ, ಇನ್ನು ಕೆಲವರು  ಏನೂ ಹೇಳದೆ ಚಾಲಕ ಆಕೆಯನ್ನು ಆ ಸ್ಥಳಕ್ಕೆ ಬಿಟ್ಟು ಬಂದಿರುವುದಕ್ಕಾಗಿ ಥ್ಯಾಂಕ್ಸ್ ಎಂದಿದ್ದಾರೆ.ಇನ್ನೊಬ್ಬರು "ತಂತ್ರಜ್ಞಾನದ ಸರಿಯಾದ ಬಳಕೆ!" ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ನಾಯಿ ಕಚ್ಚಿಸಿಕೊಂಡು ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕಿಂತ 19 ರೂಪಾಯಿ ಖರ್ಚು ಮಾಡಿ ಬೈಕ್ ನಲ್ಲಿ ತೆರಳುವುದೇ ಉತ್ತಮ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ : ಕಾರು ಡಿಕ್ಕಿಯಿಂದ ಬೈಕ್‌ನಲ್ಲಿದ್ದ ನಾಲ್ವರು ಯುವಕರು ದುರ್ಮರಣ; CCTVಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

  

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News