)
Viral Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ವಿಶೇಷವಾಗಿ ಕೋತಿಗಳ ಫನ್ನಿ ಹಾಗೂ ವಿಚಿತ್ರ ವರ್ತನೆಯ ವಿಡಿಯೋಗಳು ಜನರಲ್ಲಿ ಕುತೂಹಲ ಹೆಚ್ಚಿಸುತ್ತವೆ. ಇತ್ತೀಚೆಗೆ ಒಬ್ಬ ಯುವತಿಯ ಕೋತಿಯೊಂದಿಗೆ ಮಾಡಿದ ಅಪಾಯಕಾರಿ ಕೃತ್ಯವು ನೆಟ್ಟಿಗರ ಗಮನ ಸೆಳೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ವಿಡಿಯೋದ ಪ್ರಕಾರ, ಆ ಯುವತಿ ಒಂದು ಕೋತಿಯ ಬಳಿಗೆ ಹೋಗಿ ಅದನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದುಕೊಂಡು ಮುದ್ದಾಡಲು ಪ್ರಾರಂಭಿಸಿದ್ದಾಳೆ. ಅವಳು ಕೋತಿಗೆ ತಿನ್ನಲು ಏನಾದರೂ ಕೊಡುವ ಭಾವನೆ ಮೂಡಿಸಿ, ಬಳಿಕ ಅದನ್ನು ಅಪ್ಪಿಕೊಂಡು, ಮುತ್ತಿಕ್ಕಿ ತನ್ನ ಬಳಿ ಕೂರಿಸಿಕೊಂಡಳು.. ಈ ವೇಳೆ ಕೋತಿ ಕುಡಿದ ಅಮಲಿನಲ್ಲಿದ್ದಂತೆ ಅಸಹಜವಾಗಿ ತೂಗಾಡುತ್ತಿದ್ದು, ಪರಿಸ್ಥಿತಿ ಅಪಾಯಕರವಾಗಿತ್ತು. ಈ ದೃಶ್ಯವನ್ನು ಆಕೆಯೇ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ವಿಡಿಯೋ ಸಖತ್ ವೈರಲ್ ಆಯಿತು. ಆದರೆ ನೆಟಿಜನ್ಗಳು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಕಾಡುಪ್ರಾಣಿಗಳೊಂದಿಗೆ ಇಂತಹ ಆಟ ಅಪಾಯಕಾರಿ. ಒಂದು ವೇಳೆ ಕೋತಿ ಹಲ್ಲೆ ಮಾಡಿದ್ದರೆ ಗಂಭೀರ ಪರಿಣಾಮ ಎದುರಾಗಬಹುದಿತ್ತುʼ ಎಂದು ಹಲವರು ಹೇಳಿದರೆ.. ಇನ್ನೂ ಕೆಲವರು “ಇಂತಹ ಕೆಲಸ ಮಾಡುವ ಅವಳಿಗೆ ಬುದ್ಧಿಯೇ ಇಲ್ಲ” ಎಂದು ತೀವ್ರವಾಗಿ ಟೀಕಿಸಿದ್ದಾರೆ. ಒಟ್ಟಾರೆ, ಯುವತಿಯ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಡುಪ್ರಾಣಿಗಳೊಂದಿಗೆ ಅತಿರೇಕದ ಆಟವಾಡುವುದರ ಅಪಾಯದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ..