)
Viral Video : ಈ ವೈರಲ್ ವಿಡಿಯೋದಲ್ಲಿ, ಹುಡುಗಿಯ ಘಾಗ್ರಾ ಬಿಚ್ಚಿದ ತಕ್ಷಣ, ಅವಳು ಉದ್ವೇಗಗೊಳ್ಳದೆ ಒಂದು ಕೈಯಿಂದ ಅದನ್ನು ಹಿಡಿದುಕೊಂಡು ನೃತ್ಯ ಮಾಡುತ್ತಿರುವುದನ್ನು ನೀವು ನೋಡಬಹುದು. ಇಷ್ಟಾದರೂ ಸಹ ಅವಳು ಡಾನ್ಸ್ ಮಾಡುವುದನ್ನು ನಿಲ್ಲಿಸದೇ ಪರಿಸ್ಥಿತಿಯನ್ನು ಬಹಳ ಸರಳವಾಗಿ ನಿಭಾಯಿಸುತ್ತ, ಒಂದು ಕೈಯಿಂದ ಪೂರ್ಣ ವಿಶ್ವಾಸದಿಂದ ಪ್ರದರ್ಶನ ನೀಡಿದ್ದನ್ನು ನೋಡಿ ಜನ ಅಚ್ಚರಿಗೊಂಡರು.
ಹೌದು.. ವೀಡಿಯೊದಲ್ಲಿ, ಆ ಹುಡುಗಿ ನೂರಾರು ಜನರ ಎದುರು ಆತ್ಮ ವಿಶ್ವಾಸದಿಂದ ತನ್ನ ಉಡುಪನ್ನು ಸರಿಪಡಿಸಿಕೊಂಡ ಪರಿ ಮಾದರಿಯಾಗಿದೆ. ಅಷ್ಟೇ ಅಲ್ಲದೆ, ಇದು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ದೃತಿಗೇಡಬಾರದು ಎನ್ನುವುದಕ್ಕೆ ಸ್ಪಷ್ಟ ಉದಾರಹಣೆಯಾಗಿದೆ.
ಈ ವೀಡಿಯೊವನ್ನು Instagram ನಲ್ಲಿ @gk_world_1000 ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದ್ದು, ಇದನ್ನು ಇಲ್ಲಿಯವರೆಗೆ 14 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಬೇರೆ ಯಾರಾದರೂ ಆಗಿದ್ದರೆ, ಮುಜುಗರದಿಂದ ನೃತ್ಯ ಮಾಡುವುದನ್ನು ನಿಲ್ಲಿಸುತ್ತಿದ್ದರು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, ಈ ಹುಡುಗಿ ಪ್ರತಿಭೆ ಮತ್ತು ಜಾಣ್ಮೆಯಿಂದ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದ್ದಾಳೆ.
ಮತ್ತೊಬ್ಬ ನೆಟ್ಟಿಗರು "ಒತ್ತಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು" ಎಂದರೆ ಇದೇ ಇರಬೇಕು ಎಂದಿದ್ದಾರೆ.. ಇನ್ನೊಬ್ಬ ಬಳಕೆದಾರರು "ಅದ್ಭುತ ಪ್ರಯತ್ನ ನನ್ನ ಸಹೋದರಿ.. ನೀವು ಕಠಿಣ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ನಿಭಾಯಿಸಿದ್ದೀರಿ ಅಂತ ಹೊಗಳುತ್ತಿದ್ದಾರೆ.. ಒಟ್ಟಾರೆಯಾಗಿ ವಿಡಿಯೋ ಸಖತ್ ವೈರಲ್ ಆಗಿದೆ.