)
Snake Viral Video: ಹಾವು ಕಂಡರೆ ಸಾಕು ಪ್ರತಿಯೊಬ್ಬರೂ ಜೀವಭಯದಿಂದ ಓಡಿ ಹೋಗುತ್ತಾರೆ. ಹಾವು ನೋಡಿದ್ರೆ ಸಾಕು ಬಹುತೇಕರು ಹೌಹಾರುತ್ತಾರೆ. ಹಾವು ಕಚ್ಚುತ್ತದೆ ಅಂತಾ ಅದನ್ನು ಹೊಡೆದು ಕೊಲ್ಲುವವರೇ ಹೆಚ್ಚು. ಹಾವು ಸಹ ನಮ್ಮಂತೆಯೇ ಜೀವಿ ಎಂಬ ಸಾಮಾನ್ಯ ಅರಿವು ಹೊಂದಿರದ ಅನೇಕರು ಅದರ ಪ್ರಾಣ ತೆಗೆಯಲು ಮುಂದಾಗುತ್ತಾರೆ. ಇವರೆಲ್ಲರ ಮಧ್ಯೆ ಇಲ್ಲೊಬ್ಬ ಎಪ್ಪತ್ತರ ಅಜ್ಜಿ ತಮ್ಮ ಮನೆಯ ಆವರಣದಲ್ಲಿ ಬಂದ ಹಾವನ್ನ ಪಳಗಿಸಿದ್ದಲ್ಲದೇ ಹಾವುಗಳ ರಕ್ಷಣೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ.
ಪುಣೆಯ ಹಳ್ಳಿಯೊಂದರ 70 ವರ್ಷದ ವೃದ್ಧೆಯೊಬ್ಬರನ್ನು ನಿರ್ಭಯದಿಂದ ಹಾವನ್ನು ಹಿಡಿದು ಇತರರಿಗೆ ಶಿಕ್ಷಣ ನೀಡುವ ಮೂಲಕ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಶಕುಂತಲಾ ಸುತಾರ್ ಎಂಬ ವೃದ್ಧೆ ತಮ್ಮ ಮನೆಯ ಆವರಣದಲ್ಲಿ ಬಂದಿದ್ದ ಹಾವೊಂದನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಉರಗ ರಕ್ಷಕರನ್ನ ಕರೆಯುವ ಬದಲು ತಾನೇ ಸ್ವತಃ ಹಾವನ್ನ ಕೈಯಲ್ಲಿ ಹಿಡಿದು ಅದನ್ನು ಕೊರಳಿಗೆ ಸುತ್ತಿಕೊಂಡು ಧೈರ್ಯ ಮೆರೆದಿದ್ದಾಳೆ.
ಆ ಹಾವು ವಿಷಕಾರಿಯಾಗಿಲ್ಲವೆಂದು ತಿಳಿದ ನಂತರ ಅವರು ತಮ್ಮ ಕೈಯಲ್ಲಿ ಅದನ್ನ ಹಿಡಿದುಕೊಂಡಿದ್ದಾರೆ. ಎಲ್ಲಾ ಹಾವುಗಳು ಅಪಾಯಕಾರಿ ಅಲ್ಲ ಅನ್ನೋದನ್ನ ಜನರಿಗೆ ತಿಳಿಸಲು ನನ್ನ ತಾಯಿ ಬಯಸಿದ್ದರು. ಹೀಗಾಗಿ ಧೈರ್ಯದಿಂದಲೇ ಅದನ್ನ ಹಿಡಿದುಕೊಂಡರು ಎಂದು ವೃದ್ಧೆಯ ಪುತ್ರ ಗಣೇಶ್ ಸುತಾರ್ ತಿಳಿಸಿದ್ದಾರೆ.
?? 70 साल की उम्र में भी हौसला जवान!
पुणे के मुलशी तालुका के कासर अंबोली गाँव की शकुंतला सुतार दादी ने जो किया, वो किसी फिल्मी सीन से कम नहीं।
जब उनके घर में धामन सांप निकला, तो दादी ने
ना डर दिखाया
ना हंगामा किया
बल्कि बिना घबराए साँप को खुद पकड़ा
और गले में डालकर लोगों को… pic.twitter.com/eKuoKCntat— Satyaagrah (@satyaagrahindia) July 27, 2025
ವೈರಲ್ ಆಗಿರೋ ವಿಡಿಯೋದಲ್ಲಿ ಶಾಕುಂತಲಾ ಅವರು, ಅಡಗಿಕೊಂಡಿದ್ದ ಹಾವನ್ನ ಯಾವುದೇ ರೀತಿ ಭಯಪಡದೆ ಎತ್ತಿಕೊಂಡಿದ್ದಲ್ಲದೇ ಅದನ್ನು ಹಿಡಿದು ತಮ್ಮ ಕೊರಳಿನ ಸುತ್ತ ಶಿವನಂತೆ ಸುತ್ತಿಕೊಂಡಿರುವುದನ್ನ ಕಾಣಬಹುದು. ಅವರ ಕುಟುಂಬಸ್ಥರು ಹೇಳುವ ಪ್ರಕಾರ, ಹಾವುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅನೇಕ ಜನರು ಹಾವುಗಳ ಬಗ್ಗೆ ಹೊಂದಿರುವ ಭಯ ಹೋಗಲಾಡಿಸುವುದು ಅವರ ಉದ್ದೇಶವಾಗಿತ್ತಂತೆ. ತಾಯಿಯ ಸಾಹಸ ಮತ್ತು ಜಾಗೃತಿ ಮೂಡಿಸುತ್ತಿರುವ ವಿಡಿಯೋವನ್ನು ಮಗ ಗಣೇಶ್ ಸುತಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನ ಲಕ್ಷಾಂತರ ಜನರು ವೀಕ್ಷಿಸಿದ್ದು, ಅಜ್ಜಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.