)
Guy chatting on AC unit : ಪ್ರೀತಿಯಲ್ಲಿ ಬಿದ್ದರೆ ಒಬ್ಬ ವ್ಯಕ್ತಿ ಎಲ್ಲಾ ಮಿತಿಗಳನ್ನು ದಾಟುತ್ತಾನೆ ಅಂತ ಹೇಳಲಾಗುತ್ತದೆ. ಇದಕ್ಕೆ ಉದಾರಹಣೆ ಈ ವಿಡಿಯೋ.. ಯುವಕನೊಬ್ಬ ಜೀವದ ಹಂಗು ತೊರೆದು ಎಸಿ ಯೂನಿಟ್ ಮೇಲೆ ಕುಳಿತು ತನ್ನ ಗೆಳತಿಗೆ ಸಂದೇಶ ಕಳುಹಿಸಿದ್ದಾನೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕನೊಬ್ಬ ಎತ್ತರದ ಕಟ್ಟಡದ ಹೊರ ಗೋಡೆಯ ಮೇಲೆ ಅಳವಡಿಸಲಾದ ಎಸಿ ಘಟಕದ ಮೇಲೆ ಆರಾಮವಾಗಿ ಕುಳಿತು ತನ್ನ ಮೊಬೈಲ್ ಫೋನ್ ನೋಡುತ್ತಿರುವುದನ್ನು ಕಾಣಬಹುದು. ಒಂದು ರೀತಿ ಪಾರ್ಕ್ನಲ್ಲಿ ಬೆಂಚ್ ಮೇಲೆ ಕುಳಿತಿರುವಂತೆ ಕುಳಿತು ತನ್ನ ಗೆಳತಿಯೊಂದಿಗೆ ಚಾಟ್ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲದೆ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ, ತನ್ನ ಜೀವವನ್ನು ಪಣಕ್ಕಿಟ್ಟು ಮೊಬೈಲ್ ಫೋನ್ನಲ್ಲಿ ನಿರತನಾಗಿದ್ದಾನೆ. ವಿಡಿಯೋ ನೋಡಿದ ಕೆಲವರು ತನ್ನ ಗೆಳತಿಯೊಂದಿಗೆ ಹರಟೆ ಹೊಡೆಯುತ್ತಾ ಕುಳಿತಿದ್ದ ಎಂದು ಹೇಳುತ್ತಿದ್ದಾರೆ.. ಇನ್ನೂ ಕೆಲವರು ಜಗಳವಾಡುತ್ತಿದ್ದಾನೆ ಅಂತ ಕಾಮಿಡಿ ಹಾಸ್ಯವಾಗಿ ಕಾಮೆಂಟ್ ಹಾಕುತ್ತಿದ್ದಾರೆ.
ಈ ವೀಡಿಯೊವನ್ನು studentgyaan ಎಂಬ ಇನ್ಸ್ಟಾಗ್ರಾಮ್ ಖಾತೆಯು ಹಂಚಿಕೊಂಡಿದ್ದು, ಇಲ್ಲಿಯವರೆಗೆ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೆಟ್ಟಿಗರು "ಸರ್, ನನಗೆ ಸಾವಿಗೆ ಭಯವಿಲ್ಲ, ಆದರೆ ಗೆಳತಿಯ ಭಯವಿದೆ." ಅಂತ ಕಾಮೆಂಟ್ ಹಾಕಿದ್ದು ಗಮನಾರ್ಹ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಎಸಿ ಫಿಟ್ಟಿಂಗ್ ಕೆಲಸಗಾರನದ್ದು ಎಂದು ಹೇಳಲಾಗುತ್ತಿದೆ. ಎಸಿ ಯೂನಿಟ್ ಮೇಲೆ ಕೂತಾಗ ಸುರಕ್ಷತೆಗಾಗಿ ಕೇವಲ ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡಿದ್ದಾನೆ. ಈ ಘಟನೆ ಜರುಗಿದ ನಿಖರವಾದ ಸ್ಥಳ ಇನ್ನೂ ಬಹಿರಂಗಗೊಂಡಿಲ್ಲ.