Watch: ಭಾರೀ ಮಳೆಯಿಂದ ಅಪಾರ ಹಾನಿ, ನೀರಿನಿಂದ ತುಂಬಿದ ಮೆಟ್ರೋ ನಿಲ್ದಾಣ!!

Mumbai metro station: ಸೋಮವಾರ ಮುಂಬೈನಲ್ಲಿ ಆರಂಭವಾದ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹವಾಮಾನ ಇಲಾಖೆಯು ಮಳೆಯ ಬಗ್ಗೆ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈ ಮೆಟ್ರೋ ಮಾರ್ಗ 3ರ ವರ್ಲಿ  ನಿಲ್ದಾಣವು ನೀರಿನಿಂದ ತುಂಬಿದೆ. ಇದರ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

Written by - Puttaraj K Alur | Last Updated : May 26, 2025, 05:58 PM IST
  • ಭಾರೀ ಮಳೆಯಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತ
  • ನಿರಂತರ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರ ಪರದಾಟ
  • ವರುಣನ ಆರ್ಭಟಕ್ಕೆ ಮುಂಬೈನ ಅಂಡರ್‌ಗ್ರೌಂಡ್‌ ಮೆಟ್ರೋದಲ್ಲಿ ಪ್ರವಾಹ
Watch: ಭಾರೀ ಮಳೆಯಿಂದ ಅಪಾರ ಹಾನಿ, ನೀರಿನಿಂದ ತುಂಬಿದ ಮೆಟ್ರೋ ನಿಲ್ದಾಣ!!

Mumbai metro station: ಸೋಮವಾರ ವಾಣಿಜ್ಯ ನಗರಿ ಮುಂಬೈನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರಮುಖ ರಸ್ತೆಳಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಿರಂತರ ಮಳೆಯಿಂದ ಮುಂಬೈ ಮೆಟ್ರೋದ ಅಕ್ವಾ ಲೈನ್ 3ರ ಆಚಾರ್ಯ ಅತ್ರೆ ಚೌಕ್ ನಿಲ್ದಾಣಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿತು. ಇದರ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮುಂಬೈ ಮೆಟ್ರೋದ ಆಚಾರ್ಯ ಅತ್ರೆ ಚೌಕ್ ನಿಲ್ದಾಣದಲ್ಲಿ ನೀರಿನಿಂದ ತುಂಬಿ ಮೆಟ್ಟಿಲುಗಳ ಕೆಳಗೆ ಹರಿಯುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ಭಾರೀ ಮಳೆಯಿಂದ ನೀರಿನ ತಡೆಗೋಡೆ ಮುರಿದು ನಿಲ್ದಾಣದೊಳಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

Add Zee News as a Preferred Source

ಆಚಾರ್ಯ ಅತ್ರೆ ಚೌಕ್ ನಿಲ್ದಾಣವು ಮೆಟ್ಟಿಲುಗಳ ಕೆಳಗೆ ಹರಿಯುವ ನೀರಿನಿಂದ ತುಂಬಿ ತುಳುಕುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ. ಪ್ರಯಾಣಿಕರು ತಮ್ಮ ಪ್ಯಾಂಟ್‌ಗಳನ್ನು ಮಡಚಿ ಮೆಟ್ಟಿಲುಗಳನ್ನು ಹತ್ತುತ್ತಿರುವುದು ಕಂಡುಬಂದಿದೆ. ಮೆಟ್ರೋ ಒಳಗಿನಿಂದ ಚಿತ್ರೀಕರಿಸಲಾದ ಮತ್ತೊಂದು ವಿಡಿಯೋದಲ್ಲಿ ಪ್ಲಾಟ್‌ಫಾರ್ಮ್‌ನಿಂದ ನೀರು ತೊಟ್ಟಿಕ್ಕುತ್ತಿರುವುದನ್ನು ಕಾಣಬಹುದು. ನೀರು ಸೋರಿಕೆಗೆ ಅಸಮರ್ಪಕ ಒಳಚರಂಡಿ ವ್ಯವಸ್ಥೆಯೇ ಕಾರಣವೆಂದು ಹೇಳಲಾಗುತ್ತಿದೆ. ನಿಲ್ದಾಣವನ್ನು ಪ್ರಸ್ತುತ ಮುಚ್ಚಲಾಗಿದೆ. ಇದಾದ ಕೂಡಲೇ ಮುಂಬೈ ಮೆಟ್ರೋ ಸಾರ್ವಜನಿಕರಿಗೆ ಸೂಚನೆ ನೀಡಿದ್ದು, ಮೆಟ್ರೋ ಲೈನ್ -3ರಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಸಮಾಧಿಯಲ್ಲಿದ್ದ ಮಹಿಳೆಯ ಶವ ಹೊರತೆಗೆದು.. ಈತ ಮಾಡಿದ್ದು ನೋಡಿದ್ರೆ ಕೋಪ ಬರುತ್ತೆ..! ವಿಡಿಯೋ ವೈರಲ್‌

"ಸಾರ್ವಜನಿಕರಿಗೆ ಸೂಚನೆ - ಮುಂಬೈ ಮೆಟ್ರೋ ಮಾರ್ಗ 3ರ ಸೇವಾ ಅಪ್‌ಡೇಟ್‌ - ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯಿಂದ ಮೆಟ್ರೋ ಮಾರ್ಗ 3ರಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗುತ್ತಿದೆ. ಆಚಾರ್ಯ ಅತ್ರೆ ಚೌಕ್ ಬದಲಿಗೆ ವರ್ಲಿ ನಿಲ್ದಾಣದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಉಂಟಾಗಿರುವ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ" ಎಂದು ಮುಂಬೈ ಮೆಟ್ರೋ ಹೇಳಿದೆ.

ಮಳೆಗೆ ಹೆದರಬೇಡಿ, ಜಾಗರೂಕರಾಗಿರಿ

ಐಎಂಡಿ ಮುಂಬೈ ನಿರ್ದೇಶಕಿ ಡಾ.ಶುಭಂಗಿ ಭೂತೆ ಮಾತನಾಡಿದ್ದು, ʼಮೊದಲ ಬಾರಿಗೆ ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಮಾನ್ಸೂನ್ ಇಷ್ಟು ಬೇಗ ಅಪ್ಪಳಿಸಿದೆ. ಮುಂಬೈನಲ್ಲಿ ಅರ್ಧ ಗಂಟೆಯಲ್ಲಿ 40 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದು, ನೀರು ನಿಲ್ಲುವಿಕೆ ಮತ್ತು ಇತರ ಸೇವೆಗಳಿಗಾಗಿ ವಿವಿಧ ಸರ್ಕಾರಿ ಕಾರ್ಯವಿಧಾನಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಮುಂಬೈಗೆ ರೆಡ್ ಅಲರ್ಟ್ ಇದ್ದು, ನಾಳೆ ಹಳದಿ ಅಲರ್ಟ್ ಇರುತ್ತದೆ ಎಂದು ಹೇಳಿದ್ದಾರೆ. ನಾಳೆಯಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ, ಆದರೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಕೊಂಕಣದ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದ್ದು, ಇದರ ಬಗ್ಗೆ ಗಮನ ಹರಿಸಲಾಗುವುದು. ಜನರು ಮಳೆಯಲ್ಲಿ ಭಯಭೀತರಾಗಬಾರದು, ಜಾಗರೂಕರಾಗಿರಬೇಕು ಮತ್ತು IMDಯ ಸೂಚನೆಗಳನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಮೊದಲ ಮಹಿಳಾ ವೈದ್ಯೆ ಆನಂದೀ ಗೋಪಾಲ್ ಜೋಶಿಯವರ ರೋಚಕ ಜೀವನ ಕಥನ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News