ಈ ದೇವಾಲಯದಲ್ಲಿ ಪ್ರಸಾದವಾಗಿ ಚೈನೀಸ್ ನೂಡಲ್ಸ್ ನೀಡಲಾಗುತ್ತದೆ. ಈ ದೇವಾಲಯ ಇರುವುದು ಕೋಲ್ಕತ್ತಾದಲ್ಲಿ. ಇಲ್ಲಿನ ಕಾಳಿಮಾತೆಯ ದೇವಾಲಯದಲ್ಲಿ ಈ ರೀತಿಯ ವಿಚಿತ್ರ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

Chinese Kali Temple: ಭಾರತದಲ್ಲಿ ಲಕ್ಷಾಂತರ ದೇವಾಲಗಳಿವೆ. ಪ್ರತಿಯೊಂದು ದೇವಾಲಯಕ್ಕೂ ತನ್ನದೇಯಾದ ಇತಿಹಾಸ, ವಿಶೇಷ ಸಂಪ್ರದಾಯ, ಆಚರಣೆ ಮತ್ತು ಐಸಿಹಾಸಿಕ ಹಿನ್ನೆಲೆ ಇದೆ. ಕೆಲವು ದೇವಾಲಗಳನ್ನ ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಪುರಾತನ ದೇವಾಲಯಗಳ ರಚನೆ, ವಾಸ್ತುಶಿಲ್ಪ ಮತ್ತು ಪೂಜಾ ವಿಧಾನಗಳು ಭಕ್ತರ ಗಮನ ಸೆಳೆಯುತ್ತವೆ. ಇಡೀ ಪ್ರಪಂಚದಲ್ಲಿಯೇ ಕಾಣಸಿಗದ ದೇವಾಲಗಳು ಭಾತದಲ್ಲಿವೆ. ಅತ್ಯಂತ ಪುರಾತನ ಇತಿಹಾಸ ಹೊಂದಿರುವ ಅನೇಕ ದೇವಸ್ಥಾನಗಳು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನ ತಮ್ಮತ್ತ ಸೆಳೆಯುತ್ತವೆ.
ಈ ವಿಷಯಗಳನ್ನು ಏಕೆ ಹೇಳುತ್ತಿದ್ದೇವೆ ಅಂದರೆ. ಪ್ರತಿಯೊಂದು ದೇವಾಲಯದಲ್ಲಿಯೂ ಭಕ್ತರಿಗೆ ವಿಶೇಷ ಪ್ರಸಾದ ನೀಡುವ ವ್ಯವಸ್ಥೆ ಇರುತ್ತದೆ. ಒಂದೊಂದು ಕಡೆ ಒಂದೊಂದು ರೀತಿಯ ಪ್ರಸಾದ ಹಂಚಿಕೆ ಮಾಡುವುದನ್ನ ನೀವು ಕಂಡಿರಬಹುದು. ಪ್ರಸಾದವಾಗಿ ಲಡ್ಡು, ಪುಳಿಯೋಗರೆ, ಸಿಹಿ ತಿಂಡಿ ನೀಡುವುದನ್ನು ನೀಡು ನೋಡಿರಬಹುದು. ಅಷ್ಟೇ ಅಲ್ಲ ಕೆಲವು ಕಡೆ ವಿಚಿತ್ರ ಪ್ರಸಾದ ನೀಡುವ ಸಂಪ್ರದಾಯವಿದೆ. ಆದರೆ ಇಲ್ಲೊಂದು ದೇವಾಲಯದಲ್ಲಿ ಚೈನೀಸ್ ಫುಡ್ ಆಗಿರುವ ನೂಡಲ್ಸ್ಅನ್ನ ಪ್ರಸಾದವಾಗಿ ನೀಡಲಾಗುತ್ತದೆ.
ಹೌದು, ಇದನ್ನ ಕೇಳಿದರೆ ನಿಮಗೂ ಅಚ್ಚರಿ ಎನಿಸಬಹುದು. ಈ ದೇವಾಲಯದಲ್ಲಿ ಪ್ರಸಾದವಾಗಿ ಚೈನೀಸ್ ನೂಡಲ್ಸ್ ನೀಡಲಾಗುತ್ತದೆ. ಈ ದೇವಾಲಯ ಇರುವುದು ಕೋಲ್ಕತ್ತಾದಲ್ಲಿ. ಇಲ್ಲಿನ ಕಾಳಿಮಾತೆಯ ದೇವಾಲಯದಲ್ಲಿ ಈ ರೀತಿಯ ವಿಚಿತ್ರ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಕೋಲ್ಕತ್ತಾದಲ್ಲಿನ ಒಂದು ಸಣ್ಣ ಟ್ಯಾಂಗ್ರಾ ಪ್ರದೇಶದಲ್ಲಿ ಚೀನೀ ಪರಂಪರೆಯ ಆಹಾರ ನೂಡಲ್ಸ್ ಅನ್ನು ಪ್ರಸಾದವಾಗಿ ಭಕ್ತರಿಗೆ ಹಂಚಲಾಗುತ್ತದೆ. ಅಂದಹಾಗೆ ಈ ಪ್ರದೇಶವು ಚೀನಿ ಹಾಗೂ ಭಾರತ ಎರಡೂ ಸಂಸ್ಕೃತಿಗಳು ಒಟ್ಟಿಗೆ ಬೆರೆಯುವ ವಿಶೇಷ ಸ್ಥಳವಾಗಿದೆ.
ಈ ದೇವಾಲಯದಲ್ಲಿ ಕಾಳಿದೇವಿಯ ಜೊತೆಗೆ ಭಗವಾನ್ ಶಿವನ ಪ್ರತಿಮೆಗಳನ್ನೂ ನೀವು ಕಾಣಬಹುದು. ಈ ಸ್ಥಳದಲ್ಲಿ ನಿತ್ಯ ಪೂಜೆಯಿಂದ ಹಿಡಿದು ವಿಶೇಷ ಆಚರಣೆಗಳು ಭಕ್ತರನ್ನು ಸೆಳೆಯುತ್ತವೆ. ಆಸಕ್ತಿದಾಯಕ ಸಂಗತಿಯೆದರೆ ದೇವಿಗೆ ವಿವಿಧ ರೀತಿಯ ಆಹಾರ, ಹೂವುಗಳು, ನೂಡಲ್ಸ್ ಮತ್ತು ಇತರ ಚೀನೀ ಭಕ್ಷ್ಯಗಳನ್ನು ನೀಡಲಾಗುತ್ತದೆ. ಸ್ಥಳೀಯರ ಪ್ರಕಾರ, ಬಹಳ ವರ್ಷಗಳ ಹಿಂದೆ ಇಲ್ಲಿನ ದೊಡ್ಡ ಮರದ ಬಳಿ ಎರಡು ಕಲ್ಲುಗಳಿದ್ದವಂತೆ. ಜನರು ಆ ಕಲ್ಲುಗಳಿಗೆ ಕುಂಕುಮ, ದೀಪ ಹಚ್ಚಿ, ಊದನಕಡ್ಡಿ ಬೆಳಗಿಸಿ ಪ್ರತಿದಿನವೂ ಪ್ರಾರ್ಥಿಸುತ್ತಿದ್ದರಂತೆ. ಈ ಪ್ರದೇಶದಲ್ಲಿ ವಾಸವಿದ್ದ ಚೀನಿ ಕುಟುಂಬವೊಂದರ ಸಣ್ಣ ಬಾಲಕ ಅನಾರೋಗ್ಯಕ್ಕೆ ಒಳಗಾಗಿದ್ದನಂತೆ. ಆತ ಗುಣಮುಖರಾಗಲಿ ಎಂದು ಪೋಷಕರು ಈ ಕಾಳಿದೇವರಲ್ಲಿ ಪ್ರಾರ್ಥಿಸಿದ್ದರಂತೆ. ಕೆಲವೇ ದಿನದಲ್ಲಿ ಆತ ಅನಾರೋಗ್ಯದಿಂದ ಗುಣಮುಖನಾಗಿದ್ದನಂತೆ.
ಈ ಪವಾಡದ ನಂತರ ಆ ಬಾಲಕನ ಕುಟುಂಸ್ಥರು ಆ ಸ್ಥಳದಲ್ಲಿಯೇ ದೇವಾಲಯವನ್ನು ನಿರ್ಮಿಸಿದರಂತೆ. ಚೀನೀ ಸಮುದಾಯದ ಅನೇಕರು ಸೇರಿ ಕಾಳಿದೇವಿಯ ದೊಡ್ಡ ದೇವಾಲಯ ನಿರ್ಮಿಸಿದರಂತೆ. ಹೀಗಾಗಿ ಈ ಸ್ಥಳವು ಎರಡು ಸಂಸ್ಕೃತಿಗಳನ್ನ ಬೆಸೆಯುವ ಸ್ಥಳವಾಗಿ ಹೆಸರು ಮಾಡಿದೆ. ಹೀಗಾಗಿಯೇ ಈ ದೇವಾಲಯದಲ್ಲಿ ಇಂದಿಗೂ ನೂಡಲ್ಸ್ ಅನ್ನೇ ಪ್ರಸಾದವಾಗಿ ಹಂಚಲಾಗುತ್ತಿದೆಯಂತೆ. ದೀಪಾವಳಿ ಸೇರಿದಂತೆ ಹಿಂದೂ ಹಬ್ಬಗಳಂದು ಈ ದೇವಾಲಯವು ಭಕ್ತರಿಂದ ತುಂಬಿರುತ್ತದೆ. ದೀಪಾವಳಿಯಲ್ಲಿ ಎಣ್ಣೆ ಹಚ್ಚಿರುವ ಸುಗಂದ ಭರಿತ ಕಾಗದವನ್ನ ಬೆಂಕಿಯಲ್ಲಿ ಸುಡುತ್ತಾರಂತೆ. ಇಲ್ಲಿನ ವಿಗ್ರಹದ ಮುಂದೆ ಜನರು ನಮಸ್ಕರಿಸುವ ರೀತಿ ವಿಶಿಷ್ಟವಾಗಿರುತ್ತದೆ. ಇಲ್ಲಿನ ಕಾಳಿದೇವಿಗೆ ಜನರು ವಿಶೇಷ ರೀತಿ ನಮಸ್ಕರಿಸಿ ಪ್ರಾರ್ಥಿಸುತ್ತಾರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.