Honor killing in Samastipur: ಲವರ್ ಜೊತೆ ಮನೆಬಿಟ್ಟು ಓಡಿ ಹೋಗಿದ್ದ ಮಗಳನ್ನ ಮನೆಗೆ ಕರಿಸಿ ತಂದೆಯೇ ಆಕೆಯನ್ನು ಕೊಂದಿರುವ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿದೆ. ಕೊಲೆಗೀಡಾದ ಯುವತಿಯನ್ನ 25 ವರ್ಷದ ಸಾಕ್ಷಿ ಎಂದು ಗುರುತಿಸಲಾಗಿದೆ. ಸಾಕ್ಷಿ ನೆರೆ ಮನೆಯ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗಷ್ಟೇ ಆತನೊಂದಿಗೆ ಮನೆ ಬಿಟ್ಟು ದೆಹಲಿಗೆ ಓಡಿ ಹೋಗಿದ್ದಳು. ಆದರೆ ಕುಟುಂಬಸ್ಥರು ಪುಸಲಾಯಿಸಿ ಆಕೆ ಮನೆಗೆ ಬರುವಂತೆ ಮಾಡಿದ್ದರು. ಮನೆಗೆ ಬಂದ ಮಗಳನ್ನ ಆಕೆಯ ತಂದೆ ಮುಖೇಶ್ ಸಿಂಗ್ ಎಂಬಾತ ನಿಗೂಢವಾಗಿ ಹತ್ಯೆ ಮಾಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.
ಸಮಷ್ಟಿಪುರ ಜಿಲ್ಲೆಯ ಮೊಹಿಯುದ್ದೀನ್ ನಗರದ ಟಾಡಾ ಗ್ರಾಮ ನಿವಾಸಿ ಸಾಕ್ಷಿ ಕೆಲವು ತಿಂಗಳಿಂದ ನೆರೆಮನೆಯ ಅನ್ಯ ಜಾತಿಯ ಯುವಕನನ್ನ ಪ್ರೀತಿಸುತ್ತಿದ್ದಳಂತೆ. ಆದರೆ ತನ್ನ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲವೆಂದು ಆಕೆ ಕೆಲ ವಾರಗಳ ಹಿಂದೆ ಪ್ರಿಯಕರನೊಂದಿಗೆ ದೆಹಲಿಗೆ ಎಸ್ಕೇಪ್ ಆಗಿದ್ದಳು. ಈ ವಿಚಾರವು ಟಾಡಾ ಗ್ರಾಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮನೆಯವರು ಆಕೆಯ ಸ್ನೇಹಿತರ ನೆರವಿನಿಂದ ಸಾಕ್ಷಿಯನ್ನು ಸಂಪರ್ಕಿಸಿ ಮನೆಗೆ ಬರುವಂತೆ ತಿಳಿಸಿದ್ದರು. ಆರಂಭದಲ್ಲಿ ಸಾಕ್ಷಿ ಮನೆಗೆ ಬರಲು ಒಪ್ಪಿರಲಿಲ್ಲ. ಬಳಿಕ ಮನೆಯವರು ಮದುವೆಗೆ ಒಪ್ಪಿದ್ದೇವೆ ಅಂತಾ ಪುಸಲಾಯಿಸಿದ್ದರು. ಆಗ ಸಾಕ್ಷಿ ಮನೆಗೆ ಬರಲು ಒಪ್ಪಿದ್ದಾಳೆ. ಇದಾದ ಕೆಲವೇ ದಿನಗಳಲ್ಲಿ ಸಮಷ್ಠಿಪುರಕ್ಕೆ ಸಾಕ್ಷಿ ವಾಪಸ್ ಆಗಿದ್ದಳು.
ಇದನ್ನೂ ಓದಿ: ಹಿಂದೂ ಪವಿತ್ರ "ತಿಲಕ"ಗಳನ್ನು "ಲೈಂಗಿಕ ಕ್ರಿಯೆ" ಭಂಗಿಗಳಿಗೆ ಹೋಲಿಸಿದ ಸಚಿವ..! ಭುಗಿಲೆದ್ದ ಆಕ್ರೋಶ..
ಒಂದು ವಾರದ ಹಿಂದಷ್ಟೇ ಸಾಕ್ಷಿ ದೆಹಲಿಯಿಂದ ಮೊಹಿಯುದ್ದೀನ್ ನಗರಕ್ಕೆ ಬಂದಿದ್ದಳು. ಈ ವೇಳೆ ಆಕೆ ಮತ್ತೆ ಇದ್ದಕ್ಕಿದ್ದಂತೆಯೇ ಮತ್ತೆ ಕಣ್ಮರೆಯಾಗಿದ್ದಳು. ಈ ಬಗ್ಗೆ ಸಾಕ್ಷಿ ತಾಯಿಗೆ ಅನುಮಾನ ಬಂದು ಆಕೆ ತನ್ನ ಗಂಡನ ಬಳಿ ವಿಚಾರಿಸಿದ್ದಾಳೆ. ಆಗ ಮುಖೇಶ್ ಸಿಂಗ್ ಆಕೆ ಮತ್ತೆ ಮನೆ ಬಿಟ್ಟು ಹೋಗಿದ್ದಾಳೆ ಅಂತಾ ಉಡಾಫೆಯಿಂದ ಉತ್ತರ ನೀಡಿದ್ದ. ಇದರಿಂದ ಅನುಮಾನಗೊಂಡ ಸಾಕ್ಷಿ ತಾಯಿ ತನ್ನ ಸಹೋದರ ವಿಪಿನ್ ಸಿಂಗ್ ಮತ್ತು ಸಹೋದರಿಗೆ ಮಾಹಿತಿ ನೀಡಿದ್ದಳು. ಈ ವೇಳೆ ಅವರು ಸಾಕ್ಷಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದ ಪೊಲೀಸರಿಗೆ ಮನೆಯ ಹಿಂದಿನ ಸ್ನಾನಗೃಹ ಬೀಗ ಹಾಕಿರುವುದು ಕಂಡುಬಂದಿದೆ. ಅದನ್ನು ತೆರೆದಾಗ ಸಾಕ್ಷಿಯ ಕೊಳೆತ ಶವ ಪತ್ತೆಯಾಗಿದೆ. ಬಳಿಕ ಪೊಲೀಸರು ಮನೆಯವರನ್ನ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಮುಖೇಶ್ ಸಿಂಗ್ ಹೇಳಿಕೆ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ತನ್ನ ಮಗಳು ಬೇರೆ ಜಾತಿಯ ಹುಡುಗನ ಜೊತೆ ಓಡಿ ಹೋಗಿದ್ದರಿಂದ ಆಕೆಯನ್ನ ಮರ್ಯಾದಾ ಹತ್ಯೆ ಮಾಡಿರುವುದಾಗಿ ಮುಖೇಶ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ: ಭಾರತದ ಟಾಪ್ 3 ಶ್ರೀಮಂತ ರಾಜ್ಯಗಳು ಇವು.. ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತೆ..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









