Viral Video: ʼನನ್ನ ಹೆಂಡ್ತಿ ಹೊಡೀತಾಳೆ.. ಹೊಡೆದು.. ಹೊಡೆದು ನನ್ನನ್ನ ಕೊಂದೇ ಹಾಕ್ತಾಳೆ.. ದಯವಿಟ್ಟು ನನ್ನನ್ನ ಕಾಪಾಡಿ ಸರ್...ʼ ಅಂತಾ ರೈಲ್ವೆ ಉದ್ಯೋಗಿಯೊಬ್ಬ ಪೊಲೀಸರ ಮೊರೆ ಹೋಗಿದ್ದಾನೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪನ್ನಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತಾಯಿಯ ಮುಂದೆಯೇ ಗಂಡನಿಗೆ ಹೆಂಡತಿ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
30 ವರ್ಷದ ಲೋಕೋ ಪೈಲಟ್ ಲೋಕೇಶ್ ಮಾಂಝಿ ಎಂಬಾತ ತನ್ನ ಪತ್ನಿ ಹರ್ಷಿತಾ ರಾಯಕ್ವಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಮನೆಯಲ್ಲಿ ಪತ್ನಿ ಹಲ್ಲೆ ಮಾಡುತ್ತಿರುವ ಸಿಸಿಟಿವಿ ವಿಡಿಯೋವನ್ನ ಆತ ಪೊಲೀಸರಿಗೆ ನೀಡಿದ್ದಾನೆ. ಕೂಡಲೇ ತನ್ನ ಪತ್ನಿಯ ವಿರುದ್ಧ ಗೃಹ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸುವಂತೆ ಒತ್ತಾಯಿಸಿದ್ದಾನೆ.
ಇದನ್ನೂ ಓದಿ: ಪ್ರಧಾನಿ ಮೋದಿ ಪ್ರೈವೇಟ್ ಸೆಕ್ರೆಟರಿಯಾಗಿ ನೇಮಕಗೊಂಡಿರುವ ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿ ಹಿನ್ನೆಲೆ ಏನು?
ಅಂದಹಾಗೆ ಜೂನ್ 2023ರಲ್ಲಿ ಲೋಕೇಶ್ ಮತ್ತು ಹರ್ಷಿತಾ ಮದುವೆಯಾಗಿತ್ತು. ಆರಂಭದಲ್ಲಿ ಸರಿ ಇದ್ದ ಪತ್ನಿ ಬಳಿಕ ನಿಧಾನವಾಗಿ ತನ್ನ ವರಸೆ ತೋರಿಸಲು ಶುರು ಮಾಡಿದ್ದಳು. ಮಾತು ಮಾತಿಗೂ ಸಿಟ್ಟು, ಕೋಪ ಮಾಡಿಕೊಂಡು ಇಡೀ ಕುಟುಂಬದ ಶಾಂತಿಯನ್ನೇ ಹಾಳು ಮಾಡಿದ್ದಾಳಂತೆ. ಮದುವೆಯಾದಾಗಿನಿಂದಲೂ ಪತ್ನಿ, ಅತ್ತೆ ಮತ್ತು ಭಾವ ಹಣ ಮತ್ತು ಚಿನ್ನಾಭರಣಗಳಿಗೆ ಬೇಡಿಕೆ ಇಡುತ್ತಿದ್ದಾರೆ ಅಂತಾ ಲೋಕೇಶ್ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾನೆ.
ನಾನು ನನ್ನ ತಂದೆ-ತಾಯಿ ಮತ್ತು ಕುಟುಂಬಸ್ಥರೊಂದಿಗೆ ಬೆರೆಯದಂತೆ ನನ್ನ ಪತ್ನಿ ನಿರ್ಬಂಧಿಸಿದ್ದಾಳೆ. ಸ್ನೇಹಿತರೊಂದಿಗೂ ಮಾತನಾಡಬಾರದು ಅಂತಾ ವಾರ್ನಿಂಗ್ ಮಾಡಿದ್ದಾಳೆ. ಮಾತು ಮೀರಿ ನಾನು ಯಾರನ್ನಾದರೂ ಭೇಟಿಯಾದರೆ ಮನೆಗೆ ಬಂದ ಮೇಲೆ ಜಗಳ ಮಾಡುತ್ತಾಳೆ. ನನ್ನ ಮೇಲೆ ಕೂಗಾಗಿ ರೇಗಾಡಿ ಬೆದರಿಸುತ್ತಾಳೆ.
'My wife beats me sir, save me from my wife sir'
Lokesh submitted an application to the Superintendent of Police office in Panna, Madhya Pradesh, narrating the story of his own wife's cruelty and requested for help. CCTV footage of his wife beating him came to light. pic.twitter.com/gA7mSOvbP4
— Megh Updates ?™ (@MeghUpdates) April 2, 2025
ಇದನ್ನೂ ಓದಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸಾವು!? ಆಘಾತಕಾರಿ ಮಾಹಿತಿ ಬಹಿರಂಗ!
ಜಗಳ ಮಾಡುವುದಲ್ಲದೆ ಕೈಗೆ ಸಿಕ್ಕ ವಸ್ತುಗಳಿಂದ ನನ್ನನ್ನ ಥಳಿಸುತ್ತಾಳೆ. ಇದಕ್ಕೆ ಪ್ರತಿರೋಧ ತೋರಿದರೆ ಗೃಹ ಹಿಂಸೆ ಮತ್ತು ವರದಕ್ಷಿಣ ಕಿರುಕುಳ ದೂರು ನೀಡುತ್ತೇನೆ ಅಂತಾ ಹೆದರಿಸುತ್ತಾಳೆ. ಮನೆಯ ಕೆಲಸಗಳಿಗೂ ಸಹಕರಿಸುವುದಿಲ್ಲ. ಯಾವುದೇ ರೀತಿಯ ಕೆಲಸಗಳನ್ನೂ ಮಾಡುವುದಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಸರ್... ಅಂತಾ ಲೋಕೇಶ್ ಪೊಲೀಸರ ಬಳಿ ನೆರವು ಕೋರಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









